ಎಲ್ಲಿ ವಿರಾಟಪೂಜೆ (ಹೃದಯಕಮಲ ಮಾನಸ ಪೂಜೆ)

ಎಲ್ಲಿ ವಿರಾಟಪೂಜೆ (ಹೃದಯಕಮಲ ಮಾನಸ ಪೂಜೆ)

( ರಾಗ ಭೈರವಿ. ಝಂಪೆ ತಾಳ) ಎಲ್ಲಿ ವಿರಾಟಪೂಜೆ ಹೃದಯಕಮಲ ಅಷ್ಟದಳ ಹೃಷೀಕೇಶ ನಾರಾಯಣಾ ಹಂಸಗಮನ ||ಪ|| ತುಂದಿ ತುದಿಯಲ್ಲಿ ಕೇಸರದಲ್ಲಿ ಧುಮುಕಿ ಕರ್ಣಿಕಾನಾಳದಲಿ ಕಮಲ ಮೂಲ ನಾಭಿಗೆ ಹೃತ್ಕಮಲಕ್ಕೆಲ್ಲ ಹತ್ತು ಅಂಗುಷ್ಟ ಕಮಲ ಕೋಮಲನಾಳ ಕಮಲ ಅಧೋಮುಖ ಕಮಲ ಕದಳಿಪುಷ್ಪದಂತೆ ಕಮಲ ಚಂದ್ರಕಾಂತಿಯಂತೆ ಕಮಲ ವಿಶಾಲದ ದಿಕ್ಕು ಕಮಲ ಸ್ವರ್ಣದಂತಿಹುದು || ಅಷ್ಟದಳ ಹೃತ್ಕಮಲ ಅದಕ್ಕೆ ಮೂವತ್ತೆರಡು ಕೇಸರ ಅಷ್ಟರಲ್ಲಿ ಕರ್ಣಿಕಾನಾಳ ಅರಸಿ ಶ್ರೀ ಭೂದೇವಿಯು ಅಷ್ಟಬಾಹು ಅಷ್ಟಾಯುಧಾ ಅಂಗುಷ್ಟ ಮಾತ್ರ ವಿಷ್ಣು ಅಷ್ಟ ದಿಕ್ಪಾಲಕರು ಇರಲು ಅಲ್ಲಿ ಬ್ರಹ್ಮಾದಿಗಳಿಂದ || ಶ್ವೇತವರ್ಣ ಕೃತಯುಗದಿ ತ್ರೇತಾಯುಗದಿ ರಕ್ತವರ್ಣ ಪೀತವರ್ಣ ದ್ವಾಪರದಿ ಪ್ರತಿ ಕೃಷ್ಣವರ್ಣ ಕಲಿಯುಗದಿ ದಾತ ಧನುರ್ಗುಣ ಬಾಣಧರ ಚಕ್ರ ಗದೆ ಪದ್ಮ ಆತುರ್ಯ ಮುಸಲ ಖಡ್ಗ ಅಷ್ಟ ಬಾಹುಗಳಲಿ || ಪೂರ್ವದಳದಿ ಪುಣ್ಯಮಯದಿ ಜೀವನಿರುವ ಆರುಢಾಗ್ನೇಯದಳದಿ ಆಲಸ್ಯ ಆಗಳಿಗೆ ನಿದ್ರೆ ತೋರುತಿಪ್ಪ ಯಮದಿಕ್ಕಿನಲ್ಲಿ ತುಂಬಿದ ಕ್ರೋಧ ಮಿಗೆ ಹರಿದಡೆ ನೈ‌ಋತ್ಯದಿ ಪಾಪಕೃತ್ಯ || ವರುಣದಿಕ್ಕಿನಲ್ಲಿ ವಿನೋದ ವಾಯವ್ಯದಿ ಘನಮನಸು ಗುರುಕುಬೇರನ ದಿಕ್ಕಿನಲ್ಲಿಡುವನೂ ಅತಿ ಬುದ್ಧಿಯ ತೆರಳಿ ಬಂದು ಈಶಾನ್ಯದಿ ದ್ರವ್ಯದಾನ ಮಾಡಿಸುವನದು ದಿಕ್ಪಾಲಕರುಗಳಿಂದ ನಿಂತು ನಿಂತು ಬರುವ || ಜೀವಕ್ಕೆ ವೈರಾಗ್ಯವ ಜಗದೀಶನು ಮಧ್ಯ ಇದ್ದು ಮೂವತ್ತೆರಡು ಕೇಸರದಿ ಮುಕುಂದ ಬರಲು ಜಾಗ್ರತೆ ಭಾವವಿತ್ತು ಕರ್ಣಿಕೆಯಲ್ಲಿ ಬಂದು ಸ್ವಪ್ನಗಳ ತೋರಿ ಹುವ್ವಿನಲಿ ಕಂಗಳ ಹೊಂದಿ ಸೂಸಿಸಿ ಇವನು || ಮಧ್ಯಕಮಲದಲಿ ಸೂರ್ಯ ಮಧ್ಯಸೂರ್ಯನಲಿ ಚಂದ್ರ ಮಧ್ಯಚಂದ್ರನಲಿ ಅಗ್ನಿ ಮಧ್ಯ ತೇರು ಶೃಂಗಾರ ಮಧ್ಯಜಗಲಿ ಕಲ್ಪವೃಕ್ಷ ಮಧ್ಯ ಮಂಟಪ ಸ್ವರ್ಣದಿಂದಾ ಪ್ರಭೆ ಪೀಠಸಾಸಿರ ಫಣಿಮಧ್ಯ ಶ್ರ್‍ಈಭೂನಾರಾಯಣ || ಹವಳಸ್ಫಟಿಕಕಂಬ ನೂರು ಹಾಟಕನವರತ್ನದಲೇರು ಹವಣೆ ನಾಲ್ಕು ಮೂಲ ಜಗಲಿ ಹಲವು ರತ್ನದಲಿ ಹಾದು ವಿವಿಧ ಮುತ್ತಿನ ಗೊಂಜಲು ವಿಚಿತ್ರ ಧ್ವಜಪತಾಕೆಗಳು ರವಿಕೋಟಿ ಪ್ರಕಾಶದಲಿ ರಥ ಹೊಳೆವುತಿರಲು || ಮಲ್ಲಿಗೆ ಕುಂದ ಮಂದಾರ ಮರುಗ ಕೇತಕಿ ಸಂಪಿಗೆಯಲಿ ಮಂಟಪ ಶೃಂಗಾರ ಅನೇಕ ಪೂವಿಲಿ ಮಂದಿರಾಸಲುವ ಕಲ್ಪವೃಕ್ಷದ ಕೆಳಗೆ ಸ್ವರ್ಣಪಟ ಸಿಂಹಾಸನಾ ಪ್ರಭೆ- ಯಲ್ಲಿಕೋಟಿ ಸೂರ್ಯಪ್ರಕಾಶ ಇರುವ ವಿಷ್ಣು ಚತುರ್ಭುಜದಿ || ಅನೇಕ ಕೋಟಿ ಸೂರ್ಯಪ್ರಕಾಶ ಅಲ್ಲಿ ಮುಕುಟಾಟೋಪ ಮಸ್ತಕ ವನಜನಾಭಗೆ ಕಡಗ ಕಂಕಣ ವರದಾಭಯ ಹಸ್ತದಿ ಕನಕಾಂಗ ಕಸ್ತೂರಿ ಪ್ರೇಮ ಕರುಣಿ ಪ್ರಸನ್ನವದನ ಶುಭ ಮನೋಹರ ದಯಾಮೂರ್ತಿ ಮಂದಹಾಸ ಮುಖಾಂಬುಜದಿ || ಅಣಿಮಾದಿ ಅಷ್ಟೈಶ್ವರ್ಯ ಅದು ಮೂರ್ತಿಸಿ ಆರಾಧಿಸಲು ಅಣುವಾಗಿ ಬ್ರಹ್ಮರುದ್ರಾದ್ಯರು ಅನಾರಾರಂಜುಲ್ಲಿ ಮಾಡಲು ಕಣಿಯಾಗಿ ನಾರದಾದ್ಯರು ಕೈಮುಗಿದು ಗಾಯನ ಮಾಡಲು ಕುಣಿವ ಊರ್ವಶಿ ರಂಭಾ ಮೇನಕೇ ತಿಲೋತ್ತಮೆಯರು || ಸನಕಾದಿ ಯೋಗಿಗಳು ಸ್ತೋತ್ರಗಳ ಮಾಡಲು ಮನುಜೇಶ್ವರು ವಂದಿಸುತ ಮಾಗಧರು ಹೊಗಳಲು ಅನೇಕ ದಿವ್ಯಾಭರಣದಿ ಅಲ್ಲಿ ಕೈಕಂಕಣವು ಭಯ ಪಾರ್ಶ್ವದಿ ಕನಕ ಕಾಮಿನಿ ಛತ್ರ ಚಾಮರವ ಕಾಂತೆಯರಿಬ್ಬರು ಢಾಳಿಸಲು || ದುರ್ವಿಜ್ಞೇಯ ದುರಾರಾಧ್ಯ ದುಷ್ಟಾಗಮ್ಯ ಜನಾರ್ದನಾ ನಿರ್ವಿಘ್ನದಿ ಅಧೋಮುಖದಿ ರಜಾದಿ ನೇಲಲಷ್ಟಗಿಪ್ಪನ ಪೂರ್ವದಲಿ ಮಾನಸಪೂಜೆ ಉಪಾಸ್ತಿ ಅರ್ಜುನ ಕೇಳಲು ಸರ್ವಾಂತರ್ಯಾಮಿ ಕೃಷ್ಣ ಸ್ವಾಮಿ ಉಪಾಯವ ಪೇಳಿದ || ಭಾವ ಪ್ರಾಣ ವ್ಯಾಹೃತಿ ವಾಯು ಬದ್ಧದಲಿ ಹೃತ್ತ್ಕಮಲ ನೋವಿಲ್ಲದೆ ಅಧೋಮುಖದಿ ದಿನದಿನಕು ಉನ್ನತದಿ ಅರಳುವುದು ಆವಾಹನವು ಆಸನವು ಅಂತರದಿ ಪಾದ್ಯವು ದೇವಗರ್ಘ್ಯ ಆಚಮನಾದಿಗಳು ಉಪಚಾರಿಸೆ || ಅತಳದಲಿ ಪಾದವಿಹುದು ಆ ಪದಾರ್ಧ ವಿತಳದಲಿ ಸುತಳದಿಪ್ಪುದು ಜಂಘೆಗಳು ಸೋಘ್ರಜಾನು ರಸಾತಳದಿ ತತಿಲಿ ಕೊಡೆ ಮಹಾತಳದಿ ತಳಾತಳದಿ ಗುಹ್ಯವಿಪ್ಪುದು ಪ್ರತಿಯಿಲ್ಲದಾ ಕಟಿಬದಿಲಿ ಪಾತಾಳವಿಪ್ಪುದು || ಭೂಲೋಕದಲಿ ಮಧ್ಯಮ ಭುವರ್ಲೋಕದಲಿ ಕುಕ್ಷಿ ಮೇಲೆ ಸುವರ್ಲೋಕ್ದಲಿ ಮೃದು ಹೃದಯ ಶ್ರೀವತ್ಸ ಶ್ರೀಲೋಲರ ಕುಕ್ಷಿಗಳು ಸೇರಿಪ್ಪುದು ಮಹರ್ಲೋಕದಿ ಮೇಲೆ ಕೌಸ್ತುಭ ಜನೋಲೋಕದಿ ಮತ್ತೆ ಕೊರಳಿಪ್ಪುದು || ತಪೋಲೋಕದಿ ಲಲಾಟ ತಲೆ ಸತ್ಯಲೋಕದಲಿ ವಿಪರೀತ ವಿರಾಟರೂಪ ವಿಶ್ವ ತೈಜಸ ಪ್ರಾಜತುರ್ಯ ಉಪೇಂದ್ರ ಎಪ್ಪತ್ತೆರಡು ಸಾಸಿರ ಉಪನಾಡಿಯಲಿಪ್ಪ ಪಾರ್ಶ್ವನಾಗಿ ಕಪಟ ನಾಟಕ ಸೂತ್ರಧಾರಿ ಕಾಣು ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು