ಗಂಗಾ ತೀರದ ಮನೆ ನಮ್ಮದು
( ರಾಗ ಕಾಂಭೋಜಿ. ಅಟ ತಾಳ)
ಗಂಗಾ ತೀರದ ಮನೆ ನಮ್ಮದು, ಕಾಶಿ
ಬಿಂದುಮಾಧವನಲ್ಲಿ ಇರುವುದು ಮನೆ ಪಂಚಾ ||ಪ ||
ಆವಾವ ಕಾಲದ ಆನಂದರಮನೆ
ತಾವರೆ ತಳಿತದ ನದಿಯ ಮನೆ
ಆವಾಗ ಕಮಲಜ ಅವತರಿಸಿದ ಮನೆ
ಆ ವೇದಂಗಳಿಗೆಲ್ಲ ತೌರುಮನೆ ಪಂಚಾ ||
ಚಿತ್ರವಳಿದಲ್ಲಿಯ ಮನೆ ಚಿನ್ಮಯ ರೂಪದ ಮನೆ
ನಿತ್ಯ ಲೋಕಗಳ ರಕ್ಷಿಸುವ ಮನೆ
ಭಕ್ತ ಜನರನೆಲ್ಲ ಉದ್ಧರಿಸಿದ ಮನೆ
ಮುಕ್ತಿಸಾಯುಜ್ಯಕೆ ಕಡೆಯಿಲ್ಲ ಮನೆ ಪಂಚಾ ||
ಹಂಗಿಲ್ಲದ ಮನೆ ಹದಿಯ ಬಿಡದೆ ಹಾಲು
ಗಂಗಿಯವದು ರಕ್ಷಿಸುವ ಮನೆ ಮೂ-
ರಂಗನೆರುಳ್ಳ ಮುಕ್ತಿ ಸಾಧನಕಿನ್ನು ಇಂಥಾ
ಕಂಗಳ ಪುಣ್ಯಕಿನ್ನು ಕಡೆಯಿಲ್ಲ ಮನೆ ಪಂಚಾ ||
ಧ್ವಜವಜ್ರಾಂಕುಶರೇಖಾ ಶಂಖಚಕ್ರದ ಮನೆ
ನಿಜಸುವರ್ಣರೇಖಾ ತೋರುವ ಮನೆ
ಗಜರಾಜಗೊಲಿದಂಥ ಗರುಡ ವಾಹನನಾದ ಇಂಥಾ ಮೂ-
ರ್ಜಗ ತ್ರೈಲೋಕ್ಯ ಮಾಡಿದ ಮನೆ ಪಂಚಾ ||
ಪರಮಪವಿತ್ರ ಚರಿತ್ರ ತೀರ್ಥರ ಮನೆ
ಪರಬ್ರಹ್ಮ ರಥಕೆ ಸಾಧನದ ಮನೆ
ಪರಮಾತ್ಮನಾಗಿ ಇಷ್ಟಾರ್ಥವನೀವ ಶ್ರೀ
ವರನಾದ ಪುರಂದರವಿಠಲನ ಮನೆ ಪಂಚಾ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments