ತಂಗಿ ನೋಡೆ ನಮ್ಮಂಗಳದೊಳು

(ರಾಗ ಕೇದಾರಗೌಳ ಅಟತಾಳ ) ತಂಗಿ ನೋಡೆ ನಮ್ಮಂಗಳದೊಳು ಪಾಂಡು- ರಂಗ ಮೆಲ್ಲಡಿ ಇಟ್ಟು ಪೋದನಮ್ಮ ||ಪ|| ಗಂಗೆ ಜನಿಸಿ ಮೂರ್ಲೋಕಕ್ಕೆ ಮುಕುತಿಯು ತಾ ರಂಗವೊಲಿವ ಪಾದ ಮಂಗಳ ಸಾಸಿರದಳದ ಸರ್ವೋತ್ತಮ ರಂಗವಲ್ಲಿಯನಿಕ್ಕಿದಂತೆ ಶೋಭಿಸುತಿದೆ || ಸಿರಿಯಜಭವರುಗಳರಸಿ ಕಾಣರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪವಮಾನ ಪವಮಾನ ಜಗದ ಪ್ರಾಣ

ರಾಗ: ತೋಡಿ ತ್ರಿವಿಡಿ ತಾಳ ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ |ಪ| ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ| ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ದಾರಿಯ ತೋರೋ ಗೋಪಾಲ

ದಾರಿಯ ತೋರೋ ಗೋಪಾಲ ವಾರಿಜನಾಭ ಶ್ರೀ ವೈಕುಂಠಲೋಲ| ಸಿಕ್ಕಿದೆ ಭವಪಾಶದೊಳಗೆ ಲೆಕ್ಕವಿಲ್ಲದ ಜಂತುಗಳಿಗೆ| ದಿಕ್ಕೊಬ್ಬರಿಲ್ಲವೋ ಎನಗೆ ಕಕ್ಕಸ ಕಳೆದು ನಿನ್ನಯ ಪಾದಗಳಿಗೆ|| ಗಜರಕ್ಷಕನು ನೀನೆಂದು ಅಜರುದ್ರಾದಿಗಳಂದು| ನಿಜವಾಗಿ ಪೇಳಿದರೆಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾಡಮಾತು ಬೇಡ ನಾಲಿಗೆ

(ರಾಗ ಮೋಹನ ಅಟತಾಳ ) ನಾಡಮಾತು ಬೇಡ ನಾಲಿಗೆ, ನಿನ್ನ ಬೇಡಿಕೊಂಬೆನು ಕಂಡ್ಯ ನಾಲಿಗೆ ರೂಢಿಗೆ ಶ್ರೀಹರಿ ಕೈವಲ್ಯದಾರಿಯ ನಾಮವ ನೆನೆ ಕಂಡ್ಯ ನಾಲಿಗೆ ||ಪ|| ಹಾರೆ ಹೊತ್ತಾರೆದ್ದು ನಾಲಿಗೆ , ಶ್ರೀನಿ- ವಾಸನ ನೆನೆ ಕಂಡ್ಯ ನಾಲಿಗೆ ಶಕ್ತಿಯಂತೆ ನೀನು ಮತ್ತೆ ಬೊಗಳದಿರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮತಿಗೆಟ್ಟು ಕಾಲವ ಕಳೆಯಬೇಡ

(ರಾಗ ಪೀಲು ಏಕ ತಾಳ ) ಮತಿಗೆಟ್ಟು ಕಾಲವ ಕಳೆಯಬೇಡ ಸ- ದ್ಗತಿ ಕೊಡುವ ಹರಿಯ ನಂಬೆಲೊ ಮೂಢ ||ಪ|| ಕೋತಿಯಂತೆ ಕುಣಿಕುಣಿದಾಡಬೇಡ ಸು- ನೀತಿ ಮಾರ್ಗವ ಪಿಡಿಯಲೊ ಗಾಢ || ಹಾಳು ಕೇರಿಯೊಳು ತಿರುಗುವ ಹಂದಿಯಂತೆ, ನೀ ಬಳಲುತ್ತೆ ನಾನಾ ಜನ್ಮವೆತ್ತಿ ಬಂದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರೆಯದಿರು ಶ್ರೀಹರಿಯ

(ರಾಗ ಉದಯರಾಗ ಝಂಪೆ ತಾಳ ) ಮರೆಯದಿರು ಶ್ರೀಹರಿಯ ||ಪ|| ಮರೆಯದಿರು ಶ್ರೀಹರಿಯ ಮರಣಾತುರದಿ ಮಗನ ಕರೆದವಗೆ ಸಾಲೋಕ್ಯವಿತ್ತ ನಾರಾಯಣನ ಸ್ಮರಣೆಯನು ಮಾಡುವರ ಚರಣಸೇವಕರಿಗೆ ನೆರೆ ಸಾಯುಜ್ಯಪದವೀವನಯ್ಯ ಅಯ್ಯ || ದೇವಕಿಯ ಬಂಧವನ ಪರಿಹರಿಸಿದವನ ಪೂ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾಡಿದ ಎನ್ನ ಫಕೀರನು

(ರಾಗ ಧನಶ್ರೀ ಅಟತಾಳ ) ಮಾಡಿದ ಎನ್ನ ಫಕೀರನು ಸದ್ಗುರು ಮಾಡಿದ ಎನ್ನ ಫಕೀರ ||ಪ || ಅನುಭವ ಖಪ್ಪರಿ ಹೃದಯದ ಜೋಳಿಗೆ ಎನ್ನಯ ಕಂಕುಳಲಿಟ್ಟು ಅನಿಮಿಷಧಟ್ಟಿ ಅರಗಿನ ರೊಟ್ಟಿ ಎನ್ನಯ ಕೈಯಲಿಟ್ಟ || ನಾದದ ತಂಬುರಿ ಮೋದಮಂದಾರವು ನಿಚ್ಚಂಗದ ಟೊಪ್ಪಿಗೆನಿಟ್ಟ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಧ್ವರಾಯರ ದೇವತಾರ್ಚನೆಯ

(ರಾಗ ಕಾಂಭೋಜ ಝಂಪೆ ತಾಳ ) ಮಧ್ವರಾಯರ ದೇವತಾರ್ಚನೆಯ ||ಪ|| ಪ್ರಸಿದ್ಧ ರಘುನಾಥರು ಪೂಜಿಸುವ ಸೊಬಗಿನ ||ಅ|| ಮೂಲ ರಘುಪತಿ ಒಂದು ಮುದ್ದು ಜಾನಕಿ ಒಂದು ಲೀಲೆ ದಿಗ್ವಿಜಯ ರಾಮಮೂರ್ತಿ ಒಂದು ಶಾಲಗ್ರಾಮ ಹಯಗ್ರೀವ ಮೊದಲಾದುವು ನಾಲ್ಕು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲೊಡಕ ಲೊಡಕ ಜಿಹ್ಮರ

(ರಾಗ ಶಂಕರಾಭರಣ ಅಟತಾಳ ) ಲೊಡಕ ಲೊಡಕ ಜಿಹ್ಮರ ಕೆಟ್ಟ ಸಂಸಾರವು ನೋಡಮ್ಮಮ್ಮ || ಪ|| ಲೊಡಕ ಸಂಸಾರವು ನಮ್ಮೆಲ್ಲರ ಗತಿರಹಿತ ಮಾಡುವ ಲೊಡಲೊಟ್ಟೆಮ್ಮ ||ಅ|| ಓರೆ ಮುಂಡಾಸು ಗೀರುಗಂಧ ಸಿರಿಮೊರೆಯು ಲೊಡಕಲೊಡಲೊಟ್ಟೆಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನಿರುಳೆಲ್ಲಿದ್ದೆ

(ರಾಗ ಶ್ರೀ ಅಟ ತಾಳ ) ನೀನಿರುಳೆಲ್ಲಿದ್ದೆ ಹೇಳಯ್ಯ ಶ್ರೀನಿವಾಸ ಮೂರುತಿ ಗೋವಳರಾಯ ||ಪ|| ಪಾಲ ಸಾಗರದಿ ಹಾವಿನ ಮೇಲೆ ತಳಿ- ರಾಲದೆಲೆಯ ಮೇಲೆ ಯಶೋದೆಯ ತೋಳಿನ ಮೇಲೆ ಗೋಪಿಯರಲಿ, ಕ್ರತು ಶಾಲೆಯೊಳರಸಿ ನೋಡಿದರಿಲ್ಲ || ಕಡೆವಲ್ಲಿ ತುರುವಿಂಡುಗಳಲ್ಲಿ, ಸತ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು