ನಡೆದು ಬಾ ನಾಲ್ವರಿದ್ದೆಡೆಗೆ

ನಡೆದು ಬಾ ನಾಲ್ವರಿದ್ದೆಡೆಗೆ

(ರಾಗ ನಾಟಕುರಂಜಿ ಮಟ್ಟೆ ತಾಳ ) ನಡೆದು ಬಾ ನಾಲ್ವರಿದ್ದೆಡೆಗೆ ಎನ್ನಯ್ಯನೆ ನಮ್ಮ ನಿಮ್ಮ ತೊಡಕ ನಿರ್ಣಯಿಸಿಕೊಂಬೆನು ತೋಯಜಾಕ್ಷ ||ಪ|| ಆದಿಯಲ್ಲಿ ಎನ್ನ ಮತ್ತಾರು ನಿನ್ನ ಪಾದಸೇವೆಯ ಮಾಡಿ ಹಲವು ಕಾಲ ಸಾಧಿಸಿದರ್ಥವ ಸಲೆ ಎನ್ನ ಜೀವಕ್ಕೆ ಆಧಾರವಾದುದನೇಕೆ ಕೊಡಲೊಲ್ಲೆ || ಸಾಲವ ಕೊಡವಲ್ಲೆ ಸಲೆ ಠೌಳಿಯ ಮಾಡಿ ಕಾಲವ ಕಳೆವೆ ನೀ ಕಪಟದಿಂದ ಮೇಲಾದ ವಿಬುಧರು ಮೆಚ್ಚುವಂತೆ ನಿನ್ನ ಕಾಲಿಗೆ ಎನ್ನ ಕೊರಳ ಹತ್ತ ಕಟ್ಟುವ || ಸನಕಾದಿ ಮುನಿಗಳ ಸಾಕ್ಷಿಯಿಂದಲಿ ಎನ್ನ ಮನಕೆ ಬಪ್ಪಂತೆ ನೀ ಘನ ನಂಬುಗೆಯಿತ್ತೆ ಅನುಮಾನವೇಕಿನ್ನು ಪಾಲಿಸಯ್ಯ ಈಗ ವನಜಾಕ್ಷ ತಂದೆ ಶ್ರೀ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು