ಮುಸುರೆ ತೊಳೆಯಬೇಕು

ಮುಸುರೆ ತೊಳೆಯಬೇಕು

(ರಾಗ ಧನಶ್ರೀ ಮಟ್ಟೆ ತಾಳ ) ಮುಸುರೆ ತೊಳೆಯಬೇಕು, ಈ ಮನಸಿನ ಮುಸುರೆ ತೊಳೆಯಬೇಕು |||ಪ|| ಮುಸುರೆ ತೊಳೆಯಬೇಕು , ಗುಸುಗುಸು ಬಿಡಬೇಕು ಈಶಪ್ರೇರಣೆಯೆಂಬೊ , ಹಸಿಯ ಹುಲ್ಲನು ಹಾಕಿ || ಅಷ್ಟಮದದಿಂದ ಸುಟ್ಟ ಈ ಪಾತ್ರೆಯ ವಿಷ್ಣು ನಾಮವೆಂಬೊ ಕೃಷ್ಣಾ ನದಿಯಲ್ಲಿ || ಕಾಮ ಕ್ರೋಧದಿಂದ ಬೆಂದ ಈ ಪಾತ್ರೆಯ ರಾಮ ಕೃಷ್ಣನೆಂಬೊ ಹೇಮಾ ನದಿಯಲ್ಲಿ || ವಿಷವೆಂಬೊ ಪಾತ್ರೆಯ ಮುಸುರೆ ತೊಳದಿಟ್ಟು ಬಿಸಜಾಕ್ಷ ಪುರಂದರವಿಠಲಗರ್ಪಿಸೋ ನಿತ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು