ಶ್ರೀಶ ಕೊಳಲನೂದಿದನಿಂದು
- Read more about ಶ್ರೀಶ ಕೊಳಲನೂದಿದನಿಂದು
- Log in to post comments
Tuesday 10 December 2019
ದಾಸರ ಪದಗಳು
ಗಂಡಬಿಟ್ಟ ಗಯ್ಯಾಳಿ ಕಾಣಣ್ಣ- ಅವಳ
ಕಂಡರೆ ಕಡೆಗಾಗಿ ತಿರುಗಿಪೋಗಣ್ಣ ||ಪ||
ಊರೊಳಗೆ ತಾನು ಪರದೇಶಿಯೆನ್ನುವಳು
ಸಾರುತ ತಿರುಗುವಳು ಮನೆಮನೆಯ
ಕೇರಿಕೇರಿಗುಂಟ ಕೆಲೆಯುತ ತಿರುಗುವಳು
ನಾರಿಯಲ್ಲವೋ ಮುಕ್ಕಮಾರಿ ಕಾಣಣ್ಣ ||೧||
ಅತ್ತೆ ಮಾವನ ಕೂಡ ಅತಿಮತ್ಸರವ ಮಾಡಿ
ನೆತ್ತಿಗೆ ಮದ್ದನೆ ಊಡುವಳು
ಸತ್ಯದ ದೇವರ ಸತ್ಯ ನಿಜವಾದರೆ
ಬತ್ತಲೆ ಅಚ್ಚಂಬಿಲೂಡೇನೆಂಬುವಳು ||೨||
ಹಲವು ಜನರೊಳು ಕಿವಿಮಾತನಾಡುವಳು
ಹಲವು ಜನರೊಳು ಕಡಿದಾಡುವಳು
ಹಲವು ಜನರೊಳು ಕೂಗಿ ಬೊಬ್ಬೆಯನಿಡುವಳು
ತಳವಾರ ಚಾವಡಿಯಲಿ ಒರಲಿಹಳಣ್ಣ ||೩||
ಪರಪುರುಷರ ಕೂಡಿ ಸರಸವಾಡುತ ಹೋಗಿ
ಗಳಿಸಿದೆನು ಗಳಿಸಿದೆನು ಘಳಿಗಿಯೊಳಗೆ
ಗಳಿಸಿದಾಗಳಿಗೆ ಅಂತಃಕರಣದೊಳಗೆ ||ಧ್ರುವ||
ಗಳಿಸಿದೆನು ಗುರುಕರುಣ, ಗಳಿಸಿದೆನು ಗುರುಚರಣ
ಗಳಿಸಿದೆನು ಗುರುಸ್ಮರಣ ಚಿಂತನಿಯನು ||೧||
ಗಳಿಸಿದೆನು ಗುರುಜ್ಞಾನ, ಗಳಿಸಿದೆನು ಗುರುಮೋನ
ಗಳಿಸಿದೆನು ಗುರುಜ್ಞಾನ ಧಾರಣವನು ||೨||
ಗಳಿಸಿದೆನು ಇಳೆಯೊಳು ಮಹಿಪತಿ ಇಹಪರದೊಳು
ಸಾಯುಜ್ಯ ಸದ್ಗತಿಯ ಮುಕ್ತಿಗಳು ||೩||
--ಮಹಿಪತಿದಾಸರು
ಕೀರ್ತನೆ: 'ಗೋಪಿ ಕೇಳ್ ನಿನ್ನ ಮಗ ಜಾರ'
ರಚನೆ: ಶ್ರೀದವಿಠಲದಾಸರು
ಗೋಪಿ ಕೇಳ್ ನಿನ್ನ ಮಗ ಜಾರ ಇವ ಚೋರ ಸುಕುಮಾರ || ಪ ||
ಮುದದಿ ಮುಕುಂದ ಸದನಕಾ ಬಂದಾ
ದಧಿಯ ಮೀಸಲು ಬೆಣ್ಣೆ ತಿಂದ ನಿನ್ನಾ ಕಂದಾ ಆನಂದಾ
ಮಾರನ ಪಿತ ತಾ ಮನೆಯೊಳು ಪೊಕ್ಕ
ಹಿಡಿಯ ಹೋದರೆ ಕೈಗೆ ಸಿಕ್ಕ ನೋಡಿ ನಕ್ಕ ಭಾರಿ ಠಕ್ಕ || 1 ||
ಹರೆಯದ ಪೋರಿ ಜಗದ ಕಣ್ಗೋರಿ(?)
ಭರದಿಂದ ಸೀರೆಯ ಸೆಳೆದಾ ಕರವ ಪಿಡಿದಾ ಮಾನ ಕಳೆದಾ || 2 ||
ಬಹಳ ದಿನವಾಯ್ತು ಪೇಳುವುದ್ಹ್ಯಾಂಗೆ