ಹನುಮಂತ

ಜನುಮ ಜನುಮದಲಿ ಎನಗಿರಲಿ| ಹನುಮ ಭೀಮ ಮಧ್ವ ಮುನಿಗಳ ಸೇವೆಯು

ಜನುಮ ಜನುಮದಲಿ ಎನಗಿರಲಿ| ಹನುಮ ಭೀಮ ಮಧ್ವ ಮುನಿಗಳ ಸೇವೆಯು |ಪ| ಮಾತ್ಯರೀಷನ ಪ್ರೀತನಾಗಿ ಬಲು | ತಾತನು ಸುಲಭದಿ ವಲಯವನು | ಕೋತಿಯ ರೂಪದಿ ಭೂತಳದೀ ಬಲು | ಖ್ಯಾತಿಯ ಪಡೆದ ರಾಮದೂತನ ಸೇವೆಯು |೧| ಹರನ ಭಕುತ ಜರಾಸಂಧನ ಕಾಯವ | ತರಿದು ಮುರಿದು ಬಲು ಸುಲಭದಲಿ |
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಪವಮಾನ ಪವಮಾನ ಜಗದ ಪ್ರಾಣ

ರಾಗ: ತೋಡಿ ತ್ರಿವಿಡಿ ತಾಳ ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ |ಪ| ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ| ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಹನುಮನ ಮನೆಯವರು ನಾವು

ಹನುಮನ ಮನೆಯವರು ನಾವೆಲ್ಲರು ಹನುಮನ ಮನೆಯವರು ಅನುಮಾನ ಪಡದೆಲೆ ಸ್ಥಳವ ಕೊಡಿರಿ ಎಮಗೆ ||ಪಲ್ಲವಿ|| ಊರ್ಧ್ವಪುಂಡ್ರವ ನೋಡಿ, ಶ್ರದ್ಧೆ ಭಕುತಿ ನೋಡಿ ಹೃದ್ಗತವಾದೆಮ್ಮ ತತ್ವಗಳನು ನೋಡಿ ಇದ್ದುದನಿಲ್ಲೆಂದು ಅಪದ್ಧ ನುಡಿವರಲ್ಲಾ ಮಧ್ವ ಮುನಿಯು ನಮ್ಮ ತಿದ್ದಿರುವುದ ನೋಡಿ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಘಟಿಕಾಚಲದಿ ನಿಂತ ಶ್ರೀ ಹನುಮಂತ

ಘಟಿಕಾಚಲದಿ ನಿಂತ ಶ್ರೀ ಹನುಮಂತ ಘಟಿಕಾಚಲದಿ ನಿಂತ ಪಟು ಹನುಮಂತನ ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ||ಪಲ್ಲವಿ|| ಚತುರ ಯುಗದಿ ತಾನು ಮುಖ್ಯಪ್ರಾಣನು ಚತುರ್ಮುಖನಯ್ಯನ ಚತುರ ಮೂರುತಿಗಳ ಚತುರತನದಿ ಭಜಿಸಿ ಚತುರ್ಮುಖನಾಗಿ ಜಗಕೆ ಚತುರ್ವಿಧ ಫಲ ಕೊಡುತ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು

ಪಲ್ಲವಿ: ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು ಶ್ರೀ ರಾಮ ಸೇವೆಗೆ ತಡವಾಯಿತೇಳು ಚರಣಗಳು: ಸೇತು ಕಟ್ಟಲು ಬೇಕು ಶರಧಿ ದಾಟಲು ಬೇಕು ಮಾತೆಗೆ ಉಂಗುರ ಕೊಡಲುಬೇಕು ಪಾತಕಿ ರಾವಣನ ಶಿರವನಳಿಯಲುಬೇಕು ಸೀತೆಪತಿ ರಾಮನಿಗೆ ನಮಿಸಬೇಕು ಇಂತು ಕಳೆಯಲು ಬೇಕು ಅಜ್ಞಾತವಾಸವನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸೇವಕತನದ ರುಚಿಯೇನರಿದ್ಯೋ

ರಚನೆ : ಪುರಂದರದಾಸರು ಶ್ರೀರಾಗ - ಆದಿತಾಳ ಸೇವಕತನದ ರುಚಿಯೇನರಿದ್ಯೋ | ದೇವ ಹನುಮರಾಯ | ವೈರಾಗ್ಯ ಬೇಡಿದೆ ||ಪಲ್ಲವಿ|| ಉದಧಿಯ ದಾಟಿ ಸೀತೆಯ ಕ್ಷೇಮ ತಂದಾಗ ಮದುವೆಯ ಮಾಡೆನ್ನಬಾರದಿತ್ತೇ ಪದದಿ ಪಾಷಾಣವ ಪೆಣ್ಣ ಮಾಡಿದವಗೆ ಇದು ಏನಸಾಧ್ಯವೊ ಹನುಮ ನೀನೊಲ್ಲದೆ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು