ಪುರಂದರದಾಸ

Compositions of Purandara dasa

ಗಾಣದೆತ್ತಿನಂತೆ ತಿರುಗಾಡಲಾರೆ

ಗಾಣದೆತ್ತಿನಂತೆ ತಿರುಗಾಡಲಾರೆ
ಬಂಡಿಯ ನೊಗದಂತೆ ಬೀಳಲಾರೆ
ಗಿಳಿಯಂತೆ ನಾ ನಿನ್ನ ಕೂಗಾಡಲಾರೆ
ನವಿಲಿನಂತೆ ನಾ ನಲಿದಾಡಲಾರೆ
ಪುರಂದರವಿಠಲ,  ನೀನೇ ಕರುಣಾಳು ಕಾಯೋ




 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಗಂಡಬಿಟ್ಟ ಗಯ್ಯಾಳಿ ಕಾಣಣ್ಣ




ಗಂಡಬಿಟ್ಟ ಗಯ್ಯಾಳಿ ಕಾಣಣ್ಣ- ಅವಳ
ಕಂಡರೆ ಕಡೆಗಾಗಿ  ತಿರುಗಿಪೋಗಣ್ಣ ||ಪ||

ಊರೊಳಗೆ ತಾನು ಪರದೇಶಿಯೆನ್ನುವಳು
ಸಾರುತ ತಿರುಗುವಳು ಮನೆಮನೆಯ
ಕೇರಿಕೇರಿಗುಂಟ ಕೆಲೆಯುತ ತಿರುಗುವಳು
ನಾರಿಯಲ್ಲವೋ ಮುಕ್ಕಮಾರಿ ಕಾಣಣ್ಣ ||೧||

ಅತ್ತೆ ಮಾವನ ಕೂಡ ಅತಿಮತ್ಸರವ ಮಾಡಿ
ನೆತ್ತಿಗೆ ಮದ್ದನೆ ಊಡುವಳು
ಸತ್ಯದ ದೇವರ ಸತ್ಯ ನಿಜವಾದರೆ
ಬತ್ತಲೆ ಅಚ್ಚಂಬಿಲೂಡೇನೆಂಬುವಳು ||೨||

ಹಲವು ಜನರೊಳು ಕಿವಿಮಾತನಾಡುವಳು
ಹಲವು ಜನರೊಳು ಕಡಿದಾಡುವಳು
ಹಲವು ಜನರೊಳು ಕೂಗಿ ಬೊಬ್ಬೆಯನಿಡುವಳು
ತಳವಾರ ಚಾವಡಿಯಲಿ ಒರಲಿಹಳಣ್ಣ ||೩||


ಪರಪುರುಷರ ಕೂಡಿ ಸರಸವಾಡುತ  ಹೋಗಿ

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಮ್ಮ ನಿಮ್ಮ ಮಗ ಸುಮ್ಮನಿರುವನಲ್ಲ

ಅಮ್ಮ ನಿಮ್ಮ ಮಗ ಸುಮ್ಮನಿರುವನಲ್ಲ
ಜನ್ಮಜನ್ಮದಿ ರಂಗ ಇಂತ ಲಂಡನು ನೋಡಮ್ಮ ||ಪ||

ನೀರಿಗೆ ಹೋಗುವ ನಾರಿಯರನು ಕಂಡು
ಮೋರೆಯ ತಿರುಹಿ ಇದಿರಾಗಿ ನಿಂದು
ದಾರಿಯನಡಗಟ್ಟಿ ನೀರಿಗೆ ಸುಂಕವು
ಊರ ಎಲ್ಲರ ಕೂಡೆ ಭಂಡವ ಮಾಡಿದ ನೋಡಮ್ಮ ||೧||

ಪಶುವ ಕರೆಯುತಿಹ ಶಶಿಮುಖಿಯರ ಕಂಡು
ಹಸನಾಗಿಯೆ ಮುಂದೆ ಬಂದು ನಿಂದು
ಹೊಸಪರಿ ವಿಧದಿ ಹೋರಿಯ ಹಾಗೆ ನಿನ್ನ ಮಗ
ಹೊಸಪರಿಯಲಿ  ನಮ್ಮ ಭಂಡು ಮಾಡಿದ ನೋಡಮ್ಮ ||೨||

ಗೋಕುಲದೊಳಗುಳ್ಳ ಬೇಕಾದಂಗನೆಯರ
ಕಾಕು ಮಾಡಿದ ಕಾಣೆ ರಂಗ ನಿನ್ನಾಣೆ
ಸಾಕು ಸಾಕು ನಿನ್ನ ಮಗಗೆ ಬುದ್ಧಿಯ ಹೇಳೆ
ಶ್ರೀಕಾಂತ ಪುರಂದರವಿಠಲ ಬಂದ ಮನೆಗೆ ||೩||

---ಪುರಂದರದಾಸರು

 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ

ಇರಲಿ ನಿನ್ನಲ್ಲಿ ಭಕ್ತಿ ಎನಗೆ ಇರದಿರಲಿ
ಹರಿದಾಸನೆಂದೆನ್ನ ಕರೆವರು ಸಜ್ಜನರು
ಹರಿದಾಸರನು ಯಮನೆಳೆವನೆಂಬಪಕೀರ್ತಿಯ
ಪರಿಹರಿಸಿಕೊಳ್ಳೋ ಶ್ರೀ ಪುರಂದರವಿಠಲ
 
--ಪುರಂದರದಾಸರು
 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ

 ರಾಗ ಬಿಲಹರಿ - ಆದಿತಾಳ. 

ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು? 
ಸತ್ಯ ಸದಾಚಾರ ಇಲ್ಲದವನು ಜಪ

ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರತಿಯ ಬೆಳಗಿರೆ ಅರಸಿ ರುಕ್ಮಿಣಿ ಕೂಡ ಅರಸು ವಿಠಲಗೆ

ಆರತಿಯ ಬೆಳಗಿರೆ ಅರಸಿ ರುಕ್ಮಿಣಿ ಕೂಡ ಅರಸು ವಿಠಲಗೆ
ಬಿರುದಿನ ಶಂಖವ ಪಿಡಿದ ವಿಠಲಗೆ
ಸರಸಿಜ ಸಂಭವ ಸನ್ನುತ ವಿಠಲಗೆ
ನಿರುತ ಇಟ್ಟಿಗೆ ಮೇಲೆ ನಿಂತ ವಿಠಲಗೆ ||೧||

ದಶರಥರಾಯನ ಉದರದಿ ವಿಠಲ
ಶಿಶುವಾಗಿ ಜನಿಸಿದ ಶ್ರೀರಾಮವಿಠಲ
ಪಶುಪತಿ ಗೋಪಿಯ ಕಂದನೆ ವಿಠಲ
ಅಸುರೆ ಪೂತನಿಯ ಕೊಂದ ವಿಠಲಗೆ ||೨||

ಕಂಡಿರ ಬೊಬ್ಬುರ ವೆಂಕಟವಿಠಲನ
ಅಂಡಜವಾಹನ ಅಹುದೋ ನೀ ವಿಠಲ
ಪಾಂಡುರಂಗ ಕ್ಷೇತ್ರಪಾವನ ವಿಠಲಾ
ಪುಂಡರೀಕಾಕಾಕ್ಷ  ಶ್ರೀ ಪುರಂದರವಿಠಲಗೆ ||೩||


 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರಿದ್ದರೇನಯ್ಯ ನೀನಿಲ್ಲದೆ

ಆರಿದ್ದರೇನಯ್ಯ  ನೀನಿಲ್ಲದೆ ||ಪ||
ಕಾರುಣ್ಯನಿಧಿ ಹರಿಯೆ ಕೈಯ ಬಿಡಬೇಡ ||ಅ||

ದುರುಳ ಕೌರವನಂದು ದ್ರುಪದಜೆಯ ಸೀರೆಯನು
ಕರಗಳಿಂ ಸೆಳೆಯುತಿರೆ ಪತಿಗಳೆಲ್ಲ
ಗರ ಹೊಡೆದಂತಿರ್ದರಲ್ಲದೆ ನರಹರಿಯೆ
ಕರುಣಿ ನೀನಲ್ಲದಿನ್ನಾರು ಕಾಯ್ದವರು     ||೧||

ಅಂದು ನೆಗಳಿನ ಬಾಧೆಯಿಂದ ಗಜ ಕೂಗಲು
ತಂದೆ ನೀ ವೈಕುಂಠದಿಂದ ಬಂದು
ಇಂದಿರೇಶನೆ ಚಕ್ರದಿಂದ ನಕ್ರನ ಬಾಯ
ಸಂಧಿಯನು ಸೀಳಿ ಕೃಪೆಯಿಂದ ಸಲಹಿದೆಯೊ ||೨||

ಅಜಮಿಳನು ಕುಲಗೆಡಲು ಕಾಲದೂತರು ಬರಲು
ನಿಜಸುತನ ಕರೆಯೆ ನೀನತಿವೇಗದಿ
ತ್ರಿಜಗದೊಡೆಯನೆ ಸಿರಿ ಪುರಂದರವಿಠಲ
ನಿಜದೂತರನು ಕಳುಹಿ ಕಾಯ್ದೆ ಶ್ರೀಹರಿಯೆ     ||



 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ

ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ ||ಪ||
ನರಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು||ಅ.ಪ||

ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತ
ಮದುವ್ಯಾಗದಿರುವದು ಹರಿಚಿತ್ತವು
ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪಾದಚಾರಿಯಾಗೋದು ಹರಿಚಿತ್ತವಯ್ಯ ||೧||

ವಿಧವಿಧ ಯಾತ್ರೆಯ ಬಯಸೋದು ನರಚಿತ್ತ
ಒದಗಿ ಬರುವ ರೋಗ ಹರಿಚಿತ್ತವು
ಸದಾ ಅನ್ನದಾನವ  ಬಯಸೋದು ನರಚಿತ್ತ
ಉದರಕ್ಕೆ ಅಳುವುದು ಹರಿಚಿತ್ತವಯ್ಯ ||೨||


ಧರಣಿಯನಾಳಬೇಕೆಂಬುದು ನರಚಿತ್ತ
ಪರರ ಸೇವಿಸುವುದು ಹರಿಚಿತ್ತವು
ಪುರಂದರವಿಠಲನ ಬಯಸೋದು ನರಚಿತ್ತ
ದುರಿತವ ಕಳೆವುದೆ ಹರಿಚಿತ್ತವಯ್ಯ||೩||

 

ದಾಸ ಸಾಹಿತ್ಯ ಪ್ರಕಾರ
ಬರೆದವರು