ನೋಡುವುದೇ ಕಣ್ಣು

ನೋಡುವುದೇ ಕಣ್ಣು

(ರಾಗ ಧನಶ್ರೀ ಅಟ ತಾಳ ) ನೋಡುವುದೇ ಕಣ್ಣು ಕೇಳುವುದೇ ಕಿವಿ ಪಾಡುವುದೇ ವದನ ||ಪ|| ಗಾಡಿಗಾರ ಶ್ರೀ ವೇಣುಗೋಪಾಲನ ಕೂಡಿ ಕೊಂಡಾಡುವ ಸುಖವ ಸೊಬಗನು ||ಅ|| ಪೊಂಗೊಳಲೂದುತ ಮೃಗ ಪಕ್ಷಿಗಳನೆಲ್ಲ ಸಂಗಳಿಸುತಲಿಪ್ಪನ ಅಂಗಜಜನಕ ಗೋಪಾಂಗನೇರೊಡನೆ ಬೆಳ- ದಿಂಗಳೊಳಗೆ ಸುಳಿದಾಡೊ ರಂಗಯ್ಯನ || ನವಿಲಂತೆ ಕುಣಿವ ಹಂಸೆಯಂತೆ ನಲಿಯುವ ಮರಿಕೋಗಿಲೆಯಂತೆ ಕೂಗುವ ಎರಳೆಯ ಮರಿಯಂತೆ ಜಿಗಿಜಿಗಿದಾಡುವ ತುಂಬಿ ಝೇಂಕರಿಸುವಂದದಿ ಝೇಂಕರಿಪನ || ಮುರುಡು ಕುಬ್ಜೆಯ ಡೊಂಕು ತಿದ್ದಿ ರೂಪವ ಮಾಡಿ ಸೆರೆಯ ಪಿಡಿಸಿಕೊಂಬನ ಗರುಡಗಮನ ಗುರು ಪುರಂದರವಿಠಲನ ಶರಣಾಗತಸುರಧೇನು ರಂಗಯ್ಯನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು