ತೇಲಿಸೊ ಇಲ್ಲ ಮುಳುಗಿಸೊ
( ರಾಗ ಪೂರ್ವಿಕಲ್ಯಾಣಿ ಅಟ ತಾಳ)
ತೇಲಿಸೊ ಇಲ್ಲ ಮುಳುಗಿಸೊ, ನಿನ್ನ
ಕಾಲಿಗೆ ಬಿದ್ದೆನೊ ಪರಮಕೃಪಾಳೋ ||ಪ||
ಸತಿ ಸುತ ಧನದಾಸೆ ಎಂತೆಂಬ ಮೋಹದಿ
ಹಿತದಿಂದ ಅತಿ ನೊಂದು ಬೆಂಡಾದೆನೊ
ಗತಿ ಕೊಡುವರ ಕಾಣೆ ಮತಿಯ ಪಾಲಿಸೊ ಲಕ್ಷ್ಮೀ-
ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ ||
ಜರೆ ರೋಗ ದಾರಿದ್ರ್ಯ ಕಲ್ಮಶವೆಂತೆಂಬ
ಶರಧಿಯೊಳಗೆ ಬಿದ್ದು ಮುಳುಗಿದೆನೋ
ಸ್ಥಿರವಲ್ಲ ದೇಹವು ನೆರೆ ನಂಬಿದೆ ನಿನ್ನ
ಕರುಣಾಭಯವಿತ್ತು ಪಾಲಿಸೊ ಹರಿಯೆ ||
ದೋಷವುಳ್ಳವ ನಾನು ಭಾಷೆಯುಳ್ಳವ ನೀನು
ಮೋಸಹೋದೆನೊ ಭಕ್ತಿರಸವ ಬಿಟ್ಟು
ಶೇಷಶಯನ ಶ್ರೀ ಪುರಂದರವಿಠಲನೆ
ದಾಸರ ಸಂಗವಿತ್ತು ಪಾಲಿಸೊ ಹರಿಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments