ನಂಬಿದೆ ನಿನ್ನ ಪಾದವ

ನಂಬಿದೆ ನಿನ್ನ ಪಾದವ

(ರಾಗ ನವರೋಜ್ ಆದಿ ತಾಳ ) ನಂಬಿದೆ ನಿನ್ನ ಪಾದವ, ವೆಂಕಟರಮಣ ನಂಬಿದೆ ನಿನ್ನ ಪಾದವ ||ಪ|| ನಂಬಿದೆ ನಿನ್ನ ಪಾದಾಂಬುಜಯುಗಳವ ಚಂದದಿ ಸಲಹೋ ಮಂದರಧರನೆ ||ಅ|| ತಂದೆಯಾಗಿ ನೀನೇ ತಾಯಿಯು ನೀನೇ ಬಂಧುಬಳಗವು ನೀನೆ ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ ಬಂದೆನ್ನ ಸಲಹೋ ಮುಕುಂದಮುರಾರಿ || ಚಿಕ್ಕಂದು ಮೊದಲು ನಾನು ನಿನ್ನಯ ಪಾದ ಹೊಕ್ಕು ಜೀವಿಸುತಿಹೆನು ಘಕ್ಕನೆ ಜ್ಞಾನವ ಅಕ್ಕರದಿಂದಲೆ ಕೊಡು ಮಕ್ಕಳ ಮಾಣಿಕ್ಯ ರುಕ್ಮಿಣಿಯರಸ || ಮರೆತು ಮಾಯದೊಳು ಮುಳುಗಿದೆ ಮಾಯ- ವರಿತು ಅರಿಯದಾದೆ ಮರೆಯದೆ ಎನ್ನನು ಸಲಹೊ ಕೃಪಾನಿಧಿ ವರದ ಶ್ರೀವೆಂಕಟ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು