ಸೆರಗ ಬಿಡೋ ರಂಗ

ಸೆರಗ ಬಿಡೋ ರಂಗ

( ರಾಗ ಕೇದಾರಗೌಳ ಅಟ ತಾಳ) ಸೆರಗ ಬಿಡೋ ರಂಗ ಸೆರಗ ಬಿಡೋ ಕರವ ಮುಗಿವೆನೊಮ್ಮೆ ಸೆರಗ ಬಿಡೋ ||ಪ || ಅತ್ತೆ ಕಂಡರೆ ಎನ್ನ ಹತ್ತಿರ ಸೇರಳು ಹರಿಯೆ ಚಿತ್ತದೊಲ್ಲಭ ಎನ್ನ ಸೆರಗ ಬಿಡೋ || ಮಾವ ಕಂಡರೆ ಎನ್ನ ಜೀವ ಬಿಡನು ಹರಿಯೆ ಜೀವದೊಲ್ಲಭ ಎನ್ನ ಸೆರಗ ಬಿಡೋ || ಗಂಡ ಕಂಡರೆ ಎನ್ನ ಗುಂಡಿಗಿಕ್ಕುವ ಹರಿ- ಪುಂಡರೀಕಾಕ್ಷ ಪುರಂದರವಿಠಲ ಸೆರಗ ಬಿಡೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು