ಶರೀರಕ್ಕೆ ಬರುತಿದೆ ವೆಚ್ಚ

ಶರೀರಕ್ಕೆ ಬರುತಿದೆ ವೆಚ್ಚ

( ರಾಗ ನಾದನಾಮಕ್ರಿಯ ಛಾಪು ತಾಳ) ಶರೀರಕ್ಕೆ ಬರುತಿದೆ ವೆಚ್ಚ, ನೀ- ನಿರು ಬೇಗ ಪಯಣದಿಂದೆಚ್ಚತ್ತು ನಿಚ್ಚ ||ಪ || ಮರಣ ಕಾಲವು ಮುಂದೆ ಬಂತು, ಈ ಧರಣಿಯ ಮೇಲೆ ಇರುವ ಋಣವೆಲ್ಲ ಸಂತು ತರಳ ಯೌವನ ವೃದ್ಧನಿಂತು, ನೀನು ಹರಿಯ ಪೂಜೆಯ ಮಾಡದಿರಬೇಡ ಭ್ರಾಂತು || ಬರೆದ ಬರೆಹವಿಲ್ಲಿ ಇದ್ದಿ , ಯಮ- ಪುರಕೆ ಸಮ್ಮತವೊ ಇಲ್ಲವೊ ಎಂಬ ಸುದ್ದಿ ಹೊರಗೆ ಹುಟ್ಟಿತು ಪ್ರಸಿದ್ಧಿ, ನಿನಗೆ ಪರಗತಿ ಸಾಧನ ಮಾಳ್ಪುದೆ ಬುದ್ಧಿ || ಮೃತ್ಯು ಕಾಲಕ್ಕೆ ಮನೆಯಾಕೆ, ನಾವು ಅತ್ತಿತ್ತ ಸುಳಿವಾಗ ಈ ಹೊತ್ತು ಸಾಕೆ ಮತ್ತೆ ತಿಳಿದು ನೋಡು ಜೋಕೆ, ಸೃಷ್ಟಿ- ಕರ್ತು ಪುರಂದರವಿಠಲನೆಂಬುದಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು