ಸಂತಾನಸರೋವರ ತೀರದಲ್ಲಿ

ಸಂತಾನಸರೋವರ ತೀರದಲ್ಲಿ

( ರಾಗ ಧನಶ್ರೀ ಆದಿ ತಾಳ) ಸಂತಾನಸರೋವರ ತೀರದಲ್ಲಿ ನಿಂತ ಕರಿಕೃಷ್ಣರಾಯ ನಿನಗೆ ನಮಿಸುವೆನು ||ಪ|| ಅಂತರಂಗದಲ್ಲಿದ್ದ ಅಘಗಳ ಕಳೆದು ಸಂತಾನ ಸೌಭಾಗ್ಯ ಕೊಡುವ ದೀನಬಂಧು || ವೃಂದಾಚರಣದಲ್ಲಿ ನಂದ ವಾಲ್ಮೀಕದಲ್ಲಿ ಚಂದದಿ ಮೇಸುದಿದ್ದ ಅಲ್ಲಿಂದ ಬಂದ ದೊರೆ || ಅಂಡಜವಾಹನನೆ ಕುಂಡಲಿಶಯನನೆ ಪುಂಡರೀಕಾಕ್ಷ ಶ್ರೀ ಪುರಂದರವಿಠಲನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು