ಯಾಕೇ ಗೋಕುಲ ನಮಗ್ಯಾಕೆ ವೃಂದಾವನ

ಯಾಕೇ ಗೋಕುಲ ನಮಗ್ಯಾಕೆ ವೃಂದಾವನ

( ರಾಗ ಕಲ್ಯಾಣಿ ಛಾಪುತಾಳ) ಯಾಕೇ ಗೋಕುಲ ನಮಗ್ಯಾಕೆ ವೃಂದಾವನ ಯಾಕೆ ಸಂತತ ಸುಖವು || ಪ|| ಶ್ರೀಕಾಂತ ಅನೇಕ ಬಗೆಗಳಿಂದ ರಾಕೇಂದುಮುಖವ ನಿರಾಕರಿಸಿದ ಮೇಲೆ ||ಅ|| ಹೆತ್ತ ತಾಯಿ ತಂದೆ ಅತ್ತೆ ಮಾವಂದಿರ ಮತ್ತೆ ಗಂಡರ ಬಿಟ್ಟು ಹತ್ತು ದಿಕ್ಕಿಲಿ ಇವನ ನಾವೆಲ್ಲರು ಪೊತ್ತೇವೆ ದೂರಿಷ್ಟು ಉತ್ತಮ ರತಿ ನಮಗಿತ್ತು ಮೆರೆವ ಪುರುಷೋತ್ತಮನಿಗಿಷ್ಟು ಚಿತ್ತವಿಲ್ಲದ ಮೇಲೆ || ಓ ಸಖಿ ಮುರಲಿಗಾನವಿಲಾಸದಿ ವಸ್ತ್ರಭೂಷಣಂಗಳ ಮರೆತು ಶ್ರೀಶನು ಕುಂಜನಿವಾಸದಿ ರತಿಗಳ ಲೇಸದಿಂದಲಿ ಬೆರೆತು ಶಶಿಮುಖಿ ಬಲು ಘಾಸಿಬಡಿಸಿ ಇಷ್ಟು ಆಸೆಗೊಳಿಸಿ ಇಂಥ ಮೋಸ ಮಾಡಿದ ಮೇಲೆ || ನಾರಿ ನಮ್ಮಲ್ಲಿಗೆ ಪುರಂದರವಿಠಲ ಬಾರದಿರುವವನೆ ಮಾರನಟ್ಟುಳಿ ತಾಳಲಾರದ ಬಾಲೇರ ಗಾರು ಮಾಡುವನೇನೆ ಮಾರನಾಪಿತ ನಮ್ಮ ಮನವ ಸೋಲಿಸುವಂಥ ಶ್ರೀ ರಮಣನಿಂಗಿಷ್ಟು ಮೇರೆಯಿಲ್ಲದ ಮೇಲೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು