ವ್ಯಾಪಾರ ನಮಗಾಯಿತು

ವ್ಯಾಪಾರ ನಮಗಾಯಿತು

( ರಾಗ ಕಾಮವರ್ಧನಿ/ಪಂತುವರಾಳಿ ಆಟತಾಳ) ವ್ಯಾಪಾರ ನಮಗಾಯಿತು ಶ್ರೀಪತಿಪಾದಾರವಿಂದ ಸೇವೆಯೆಂಬೊ ||ಪ|| ಹರಿಕರುಣವೆ ಅಂಗಿ ಗುರುಕರುಣ ಮುಂಡಾಸು ಹರಿದಾಸರ ದಯವೆಂಬೊ ವಲ್ಲಿ ಪರಮ ಪಾಪಿ ಕಲಿ ಎಂಬೊ ಪಾಪಾಸು ಮೆಟ್ಟಿ ದುರಾತ್ಮರಾದವರ ಎದೆ ಮೇಲೆ ನಡೆವಂಥ || ಬಿಳಿಯ ಕಾಗದ ಹೃದಯ ಬಾಯಿ ಕಲಮದಾನಿ ನಾಲಿಗೆ ಎಂಬೋದು ಲೇಖಣಿಕೆಯು ಶ್ರೀಲೋಲನ ಕಥೆ ದಿವ್ಯ ನಾಮಂಗಳ ಶೀಲ ಮನದಿ ಬರೆದು ಹರಿಗೆ ಒಪ್ಪಿಸುವಂಥ || ಮುಂದಣ ಆಗಮ ಸಂಸಾರದ ಬಾಧೆ ಎಂದೆಂದಿಗು ಅವರ ಭಯ ಬಿಟ್ಟಿತು ಹಿಂದಣ ಸಂಚಿತ ಸಾಲ ಭಾರಕ್ಕೆಲ್ಲ ಸಂದಾಯವನು ಮಾಡಿ ಕತಬಿ ಹರಿಸಿ ಬಿಟ್ಟ || ನುಡಿನುಡಿಗಾನಂದಬಾಷ್ಪ ರೋಮಾಂಚನ ಮುಡುಪಿನೊಳಗೆ ಇಟ್ಟ ಕೈಜಿತವು ಕಡೆಯ ಸಂಬಳಕೆಲ್ಲ ಮುಕುತಿ ಸಾಧನವನ್ನು ಕೊಡುವಂತೆ ತಿರುಗದ ಚೀಟಿ ಬರೆಸಿಕೊಟ್ಟ || ಕಂಡ ಕಂಡವರಿಗೆ ಕಾರ್ಪಣ್ಯವಬಟ್ಟು ಮಂಡೆ ಅಡ್ಡಾಗಿ ನಾ ಬಳಸಲಿಲ್ಲ ಪುಂಡರೀಕಾಕ್ಷ ಶ್ರೀ ಪುರಂದರವಿಠಲನು ದಂಡಿಸಿ ವೀಳ್ಯವ ಕೊಟ್ಟು ಸೇವೆಯೊಳಿಟ್ಟ ||
ದಾಸ ಸಾಹಿತ್ಯ ಪ್ರಕಾರ
ಬರೆದವರು