ವಿಷಯದ ವಿಚಾರ ಬಿಡು

ವಿಷಯದ ವಿಚಾರ ಬಿಡು

( ರಾಗ ಮೋಹನ ಅಟತಾಳ) ವಿಷಯದ ವಿಚಾರ ಬಿಡು, ವಿಹಿತ ಕರ್ಮವ ಮಾಡು ವೈರಾಗ್ಯ ಭಾಗ್ಯ ಬೇಡು ||ಪ|| ವಿಷವೆಂದು ಕಾಮಕ್ರೋಧಗಳೆಲ್ಲನೀಡಾಡು ಮಸಣ ಮನವೇ ಮಾಧವನ್ನ ಕೊಂಡಾಡು ||ಅ|| ಅನುದಿನವು ಹರಿಕಥೆಯ ಕೇಳಿ ಸಂತೋಷಪಡು ವಿನಯದಿ ಸಜ್ಜನರ ಕೂಡು ಮನಮುಟ್ಟಿ ದುರಾಚರ ಮಾಳ್ಪರನು ನೀ ಕಾಡು ಹಣ ಹೊನ್ನು ಪರಹೆಣ್ಣು ಹೆಂಚೆಂದು ನೋಡು || ವೇದ ಶಾಸ್ತ್ರಾರ್ಥ ತತ್ವದ ವಿಚಾರವ ಮಾಡು ಮಾಧವನ ಭಕ್ತಿ ಬೇಡು ಪಾದದಿಂದಲಿ ತೀರ್ಥ ಯಾತ್ರೆಗಳ ನೀ ಮಾಡು ಖೇದಪಡದನುದಿನದಿ ಸಂತೋಷ ಕೂಡು || ನಂಬದಿರು ಈ ದೇಹ ಅಂಬುಗುಳ್ಳೆಯಂತೆ ನಂಬಿ ನೀ ಕೆಡಲು ಬೇಡ ಕೊಂಬುವರು ಬಂದರೆ ಕೊಡರೊಂದು ರುವ್ವಿಯನು ಅಂಬುಜಾಕ್ಷ ಶ್ರೀ ಪುರಂದರವಿಠಲನ್ನ ನೆನೆ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು