ವ್ಯರ್ಥವಲ್ಲವೆ ಜನುಮ

( ರಾಗ ಪೂರ್ವಿ ಆದಿತಾಳ) ವ್ಯರ್ಥವಲ್ಲವೆ ಜನುಮ ವ್ಯರ್ಥವಲ್ಲವೇ ||ಪ|| ತೀರ್ಥಪದನ ಭಜಿಸಿ ಕೃತಾರ್ಥನಾಗದವನ ಜನುಮ ||ಅ|| ಮುಗುಳುನಗೆ ಎಳೆತುಳಸಿದಳಗಳನು ಬಲು ಪ್ರೇಮದಿಂದ ಜಗನ್ಮಯಗರ್ಪಿಸಿ ಕೈಯ ಮುಗಿದು ಸ್ತುತಿಸದವನ ಜನುಮ || ಸ್ನಾನ ಸಂಧ್ಯಾನದಿಂದ ಮೌನಮಂತ್ರ ಜಪಗಳಿಂದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವ್ಯರ್ಥವಾಯಿತೆ ಜನುಮ

( ರಾಗ ಕಾಮವರ್ಧನಿ ರೂಪಕತಾಳ) ವ್ಯರ್ಥವಾಯಿತೆ ಜನುಮ ವ್ಯರ್ಥವಾಯಿತೆ ||ಪ|| ಅತ್ತಲಿಲ್ಲ ಇತ್ತಲಿಲ್ಲ ಅರ್ಥಮಾನ ಹಾನಿಯಾಗಿ ||ಅ|| ಕುರುಡನರಿವೆಯನ್ನು ಹೊಸೆಯೆ ಕರುವು ಮೆದ್ದ ತೆರದಂತೆ ಪರರ ಕಾಡಿ ತಂದ ಧನವು ಪುತ್ರ ಮಿತ್ರರಿಗಿತ್ತು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೃಂದಾವನವೇ ಮಂದಿರವಾಗಿಹ

( ರಾಗ ಸೌರಾಷ್ಟ್ರ ಆದಿತಾಳ) ವೃಂದಾವನವೇ ಮಂದಿರವಾಗಿಹ, ಇಂದಿರೆ ಶ್ರೀ ತುಲಸಿ ||ಪ|| ನಮ್ಮ ನಂದನ ಮುಕುಂದಗೆ ಪ್ರಿಯವಾದ ಚೆಂದಾದ ಶ್ರೀತುಲಸಿ || ಅ || ತುಲಸೀವನದಲ್ಲಿ ಇಹನೆಂಬೋದು ಶ್ರುತಿ ಸಾರುತಿದೆ ಕೇಳಿ ತುಲಸೀದರ್ಶನದಿಂದ ದುರಿತಗಳೆಲ್ಲ ಹರಿದು ಹೋಗೋದು ಕೇಳಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಿದುರನ ಭಾಗ್ಯವಿದು

( ರಾಗ ಕನ್ನಡಕಾಂಭೋಜ ಏಕತಾಳ) ವಿದುರನ ಭಾಗ್ಯವಿದು ಈ ಪದುಮಜಾಂಡ ತಲೆದೂಗುತಲಿದಕೋ ||ಪ|| ಕುರುರಾಯನ ಖಳಶ್ರೇಷ್ಠನ ರವಿಜನ ಗುರು ಗಾಂಗೇಯನ ಯದುವರನು ಜರೆದು ರಥವ ನಡೆಸುತ ಬೀದಿಯೊಳಗೆ ಬರುತಿರೆ ಜನರಿಗೆ ಸೋಜಿಗವೆನಿಸುತ || ಹೃದಯದೊಳಗೆ ನೆಲೆಗೊಂಡಿಹ ಹರಿಯನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಿಧಿನಿಷೇಧ ನಿನ್ನವರಿಗೆಂತೋ ಹರಿಯೆ

( ರಾಗ ಮುಖಾರಿ ಆದಿತಾಳ) ವಿಧಿನಿಷೇಧ ನಿನ್ನವರಿಗೆಂತೋ ಹರಿಯೆ || ವಿಧಿ ನಿನ್ನ ಸ್ಮರಣೆ ನಿಷೇಧ ವಿಸ್ಮೃತಿಯೆಂಬ ವಿಧಿಯನೊಂದನು ಬಲ್ಲವಗಲ್ಲದೆ ||ಪ|| ಮಿಂದದ್ದೆ ಗಂಗಾದಿ ಪುಣ್ಯ ತೀರ್ಥಂಗಳು ಬಂದದ್ದೆ ಪುಣ್ಯಕಾಲ ಸಾಧುಜನರು ನಿಂದದ್ದೆ ಗಯಾ ವಾರಾಣಸಿ ಕುರುಕ್ಷೇತ್ರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಾಸುದೇವ ನಿನ್ನ ಮರ್ಮ ಕರ್ಮಂಗಳ

( ರಾಗ ಸೌರಾಷ್ಟ್ರ ಛಾಪುತಾಳ) ವಾಸುದೇವ ನಿನ್ನ ಮರ್ಮ ಕರ್ಮಂಗಳ ದೇಶದೊಳಗೆ ನಾ ಹೇಳಲೊ ||ಪ|| ಬೇಸರದೆ ಎನ್ನ ಹೃದಯಕಮಲದಲ್ಲಿ ವಾಸವಾಗಿ ಸುಮ್ಮನಿದ್ದು ಕಾಯೊ, ಹರಿವಾಸುದೇವ || ತರಳತನದಲ್ಲಿ ತುರುವು ಕಾಯ ಹೋಗಿ ಒರಳಿಗೆ ಕಟ್ಟಿದ್ದು ಹೇಳಲೊ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಾಸಕೆ ಯೋಗ್ಯವಲ್ಲ ಗೋಕುಲವಿನ್ನು

( ರಾಗ ಸುರುಟಿ ಆದಿತಾಳ) ವಾಸಕೆ ಯೋಗ್ಯವಲ್ಲ ಗೋಕುಲವಿನ್ನು ಬೇಸರವಾಯಿತಲ್ಲ ||ಪ|| ದೋಷ ರಹಿತ ಸೋಳ ಸಾಸಿರ ಹೆಂಗಳ ಶೇಷಶಯನ ಕೃಷ್ಣ ಮೋಸ ಮಾಡಿದ ಮೇಲೆ ||ಅ|| ರಂಗ ಮಧುರೆಗೆಂದು ಅಕ್ರೂರನ ಸಂಗಡ ಪೋದನಂತೆ ಆಂಗಜನಯ್ಯನ ಸಂಗವಿಲ್ಲದ ಮೇಲೆ ಹೆಂಗಳ ಜನ್ಮವಿನ್ನೇತಕೆ ಸುಡಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತನುವೆಂಬ ದೊಡ್ಡ ದೋಣಿಯಲಿ

ತನುವೆಂಬ ದೊಡ್ಡ ದೋಣಿಯಲಿ ಹರಿಯ ನಾಮವೆಂಬ ಭಾಂಡವ ತುಂಬಿ ವ್ಯವಹಾರವನು ಮಾಡುವೆನಯ್ಯಾ ಇಂದ್ರಿಯಗಳೆಂಬ ಸುಂಕಿಗರು ಅಡ್ದಾದರೆ ಮುಕುಂದನ ಮುದ್ರೆಯ ತೋರಿ ಹೊಳೆಯ ದಾಟುವೆನಯ್ಯಾ ಪುರಂದರವಿಠಲನಲ್ಲಿಗೆ ಪೋಗಿ ಮುಕುತಿ ಸುಖದ ಲಾಭವ ಪಡೆವೆ ನಾ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧನದಾಸೆ ದೈನ್ಯ ಪಡಿಸುತಿದೆ

ಧನದಾಸೆ ದೈನ್ಯ ಪಡಿಸುತಿದೆ ವನಿತೆಯರಾಸೆ ಓಡಾಡಿಸುತಿದೆ ಮನದಾಸೆ ಮಂತ್ರವ ಕೆಡಿಸುತಿದೆ ಮನೆವಾರ್ತೆಯಾಸೆ ಮನವ ಬಾಧಿಸುತಿದೆ ಇನಿತರಾಸೆಯ ಬಿಡಿಸಿ ನಿನ್ನ ಚರಣಂಗಳ ನೆನೆವಂತೆ ಮಾಡೊ ಪುರಂದರವಿಠಲ _________________________ ಗುರಿಯನೆಚ್ಚವನೆ ಬಿಲ್ಲಾಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರಿಗಾರಾಗುವರೊ ಆಪತ್ತು ಕಾಲಕ್ಕೆ

ಆರಿಗಾರಾಗುವರೊ ಆಪತ್ತು ಕಾಲಕ್ಕೆ ಆರಿಗಾರೊದಗುವರೊ ಸಂಪತ್ತು ಕಾಲಕ್ಕೆ ಆರಿಂದ ಬಪ್ಪುವುದು ಆರಿಂದ ತಪ್ಪುವುದು ಆರಿಸಿ ನೋಡುವುದು ಇದರ ಕಾರಣವನು ಇದಕಾರು ವಾರಣದಲ್ಲಿ ನೋಡಿ ಆರೋಪಿಸಲು ಎಲ್ಲಾ ಭಾರ ಅವಗೆ ಕಾರುಣ್ಯಮೂರುತಿ ಗೋಪಾಲವಿಠಲ ಈರೀತಿ ಅರಿದವಗೆ ಇಲ್ಲೇ ಪೊರೆವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು