Skip to main content

ಗೋಪಾಲದಾಸ

ಭಾವಾಷ್ಟ ಪುಷ್ಪಂಗಳ ದೇವಗೆ ಅರ್ಪಿಸುವ

   ಧ್ರುವ ತಾಳ

ಭಾವಾಷ್ಟ ಪುಷ್ಪಂಗಳ ದೇವಗೆ ಅರ್ಪಿಸುವ

ಭಾವನೆಯನು ಕೇಳಿ ಭಕ್ತಜನರು

ಜೀವರಿಂದ ಈ ಧರ್ಮ ಎಂದಿಗೆ ಆದದಲ್ಲ

ದೇವನಲ್ಲೇವೆ ಇಂಥ ಗುಣಗಳುಂಟು

ಭಾವಾಷ್ಟ ಪುಷ್ಪ ಗುಣವ ದೇವನಲ್ಲಿಪ್ಪವೆಂದು

ಜೀವ ತಿಳಿದರೆ ಉದ್ಧಾರ ಉಂಟು

ಜೀವರೆಂಬುವರು ಕರ್ಮ ಬದ್ಧರು ಇನ್ನು

ದೇವನು ಕರ್ಮ ತ್ರಿಗುಣಾದಿ ರಹಿತ

ಜೀವರಿಂದಲಿ ಅತ್ಯಂತ ಭೇದ ಸಾಕಾರ ಹರಿ

ಯಾವತ್ತರಾದಿ ವ್ಯಾಪ್ತ ಎಣಿ ಇಲ್ಲದ ಮೂರ್ತಿ

ಪಾವನಾಂಗ ಪಾಪನಾಶ ನಿತ್ಯತೃಪ್ತಾ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಅಂಬಕಾದಲ್ಲಿದ್ದ ಕಂಭರೂಪದಿ ಹರಿಯ

ಅಂಬಕಾದಲ್ಲಿದ್ದ ಕಂಭರೂಪದಿ ಹರಿಯ

ಅಂಭ್ರಮಣಿ ಕಂಭಕ್ಕೆ ಸುತ್ತಲೂ ಗುಣರೂಪ

ಶಂಭುವಂದಿತ ವತ್ಸಸಂಭ್ರಮದಲಿ ಇರಲು

ಅಂಬುಜಸಮನ ಗುರುತಂದೆ ಗೋಪಾಲವಿಠಲನ

ಬೆಂಬಿದದೆ ತೋರೋ ಪ್ರಾಣ

 

--ಗೋಪಾಲದಾಸರು

 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ

ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ
ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣಿಲ್ಲದಿರುವ ಕುರುಡ ಮೇಲಯ್ಯ
ಪುಣ್ಯಪಾಪವರಿಯದೆ ಬದುಕುವ ಮನು-
ಜನಿಗಿಂತ ನಾಯಿಕುನ್ನಿ ಲೇಸಯ್ಯ ಕುಲ-
ಹೀನನಾದರು ಸುಖ ದುಃಖಗಳನು
ನಿನ್ನಿಂದಾಯಿತೆಂಬ ಮತಿ
ಚೆನ್ನಾಗಿ ತಿಳಿಸಯ್ಯ ಗೋಪಾಲವಿಠಲ

--- ಗೋಪಾಲದಾಸರು

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

ಗುರು ರಾಘವೇಂದ್ರರ ಚರಣ ಕಮಲವನ್ನು ಸ್ಮಸುವ ಮನುಜಗೆ

ರಾಗ - ಧನ್ಯಾಶ್ರೀ : ತಾಳ - ಏಕತಾಳ

ಗುರು ರಾಘವೇಂದ್ರರ ಚರಣ ಕಮಲವನ್ನು ಸ್ಮಸುವ ಮನುಜಗೆ | ಪ |

ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲ ಕರಿಯು ಕಂಡ ಸಿಂಹನ ತೆರನಾಗುವುದಯ್ಯ | ಅ ಪ |

ಗುರುಮಧ್ವಮತವೆಂಬ ವರ ಕ್ಷೀರಾಂಬುಧಿಯಲ್ಲಿ ಹರಿ ಧರಿಸಿದ ಶಶಿಯಂತುದಿಸಿ |

ದಾಸ ಸಾಹಿತ್ಯ ಪ್ರಕಾರ: 
ಬರೆದವರು: 

Pages