ವೈದ್ಯನ ನಾನರಿಯೆ

( ರಾಗ ಸುರುಟಿ ಅಟತಾಳ) ವೈದ್ಯನ ನಾನರಿಯೆ, ಭವರೋಗವೈದ್ಯ ನೀನೇ ಹರಿಯೇ ||ಪ|| ಭವರೋಗಕೆ ಬಂಧು ನೀನೆ ||ಅ|| ಕೃಷ್ಣ ನೀ ಕೈ ಪಿಡಿದು ಕಪಟದಿ ಉಷ್ಣವಾಯು ಜರಿದು ವಿಷ್ಣುಭಕ್ತಿ ನಿನ್ನ ಸೇವೆ ಎನಗಿತ್ತು ಉತ್ಕೃಷ್ಟನ ಮಾಡೆನ್ನ ಕಷ್ಟ ಪಡಿಸದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಊರ ದೇವರ ಮಾಡಬೇಕಣ್ಣ

( ರಾಗ ನಾದನಾಮಕ್ರಿಯೆ ಅಟತಾಳ) ಊರ ದೇವರ ಮಾಡಬೇಕಣ್ಣ, ತನ್ನೊಳಗೆ ತಾನೆ, ಊರ ದೇವರ ಮಾಡಬೇಕಣ್ಣ ||ಪ|| ಊರ ದೇವರ ಮಾಡಿರೆಂದು ಸಾರುತಿದೆ ಶ್ರುತಿ ಸ್ಮೃತಿಗಳು ದ್ವಾರಗಳ ಒಂಭತ್ತು ಮುಚ್ಚಿ ನಿಲ್ಲಿಸಿ ಧ್ಯಾನ ಭ್ರೂಮಧ್ಯದಿ ||ಅ| ಎಷ್ಟು ಯುಗಗಳು ತೀರಿ ಹೋಯಿತಣ್ಣ, ದೇವರ ಮಾಡದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡು ನೋಡು ನೋಡು

(ರಾಗ ಕಾಂಭೋಜ ಆದಿತಾಳ ) ನೋಡು ನೋಡು ನೋಡು ಕಂಡ್ಯ ಹೀಗೆ ಮಾಡುತಾನೆ ಗಾಡಿಗಾರ ನಿನ್ನ ಮಗ ಕೃಷ್ಣರಾಯ ಕಾಣೆ ||ಪ|| ಸೆರಗ ಪಿಡಿದು ಬಂದು ನಮ್ಮ ಸ್ತನವ ಪಿಡಿವುತಾನೆ ಮರೆಗೆ ನಿಂತು ಕರದಿ ಸನ್ನೆ ತಿರುಗಿ ಮಾಡುತಾನೆ ಎರಳಯಂತೆ ಎರಗಿ ಬಂದು ಮೇಲೆ ಬೀಳುತಾನೆ, ಈ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡೆ ಗೋಪಿ ನೋಡೆ

(ರಾಗ ಕನ್ನಡಕಾಂಭೋಜ ಏಕತಾಳ ) ನೋಡೆ ಗೋಪಿ ನೋಡೆ ಗಾಡಿಗಾರ ಕೃಷ್ಣನ ದುಡುಕು ಮಾಡುವ ಮಾಟಂಗಳೆಲ್ಲ ||ಪ|| ಅಡಿಗಡಿಗೆ ಮಡದಿಯರುಟ್ಟಿರುವ ಬಿಡದೆ ನಿರಿಗಳ ಮೆಲ್ಲನೆ ಹರಡುವ ಜಡಿಜಡಿದುಡಿಯ ಮೇಲಿಹೋ ಮಕ್ಕಳ ಕೆಡಹಿ ತೊರೆದ ಮೊಲೆಗಳನುಂಬವನ || ಏನೆಂದಳದಿರೋ ಕೃಷ್ಣಾ ಎಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡಬಾರದು ಎಂದಿಂದಿಗೂ

(ರಾಗ ಖಮಾಸ್ ಆದಿತಾಳ ) ನೋಡಬಾರದು ಎಂದಿಂದಿಗೂ ನೋಡಬಾರದು ಈ ಮೂರ್ಖನ್ನ ಈ ಘಾತಕನ ಈ ಪಾಪಿಯ ||ಪ|| ನೋಡಿದರೆ ಸೂರ್ಯನ್ನ ನೋಡಿ ಪರಮಾತ್ಮನ ಸ್ಮರಿಸಬೇಕು ||ಅ|| ಅಶ್ರದ್ಧೆಯಿಂದ ಹರಿಚಿಹ್ನೆ ಇಲ್ಲದವರ ವಿಶ್ವಾಸಘಾತಕ ವೇಷಧಾರಿಯರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನನೆ ನಂಬಿದೆನು ನೀನೆನ್ನ ಸಲಹಯ್ಯ

(ರಾಗ ಕೇದಾರಗೌಳ ಝಂಪೆತಾಳ ) ನಿನ್ನನೆ ನಂಬಿದೆನು ನೀನೆನ್ನ ಸಲಹಯ್ಯ ಎನ್ನ ಗುಣ ದೋಷಗಳ ಎಣಿಸಬೇಡಯ್ಯ ||ಪ|| ಆಸೆಯೆಂಬುದು ಅಜನ ಲೋಕಕ್ಕೆ ಮುಟ್ಟುತಿದೆ ಬೇಸರದೆ ಸ್ತ್ರೀಯರೊಳು ಬುದ್ಧಿಯೆನಗೆ ವಾಸುದೇವನೆ ಸ್ಮರನೆ ಒಮ್ಮೆ ಮಾಡಿದವನಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ನಂಬಿದೆ ನೀರದಶ್ಯಾಮ

(ರಾಗ ಆನಂದಭೈರವಿ ಛಾಪುತಾಳ ) ನಿನ್ನ ನಂಬಿದೆ ನೀರದಶ್ಯಾಮ ||ಪ|| ಎನ್ನ ಪಾಲಿಸೊ ಸೀತಾರಾಮ ||ಅ|| ಪಾರವಿಲ್ಲದೆ ಸಂಸಾರವು ಅಪಾರವಾರಿಧಿಯೊಳು ಮುಣುಗಿದೆ ನಾನು ನಾರಿ ಸುತರು ತನ್ನವರೆಂದು ಭ್ರಾಂತಿಯಲಿ ಬಿದ್ದು ನೊಂದೆನೊ ಹರಿಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ನಾಮವ ನೆನೆದು

(ರಾಗ ನೀಲಾಂಬರಿ ಏಕತಾಳ ) ನಿನ್ನ ನಾಮವ ನೆನೆದು ಪುನೀತನಾದೆನೊ ಮನ್ನಿಸಿ ಸಲಹಯ್ಯ ಮದನಜನಕ ಕಲ್ಯಾಣ ಕರಿವರದ ||ಪ|| ಮಹಾರಣ್ಯ ಸರಸ್ಸಿನಲ್ಲಿ ಮಕರಿ ಬಾಯೊಳಗೆ ಸಿಲ್ಕಿಕೊಂಡು ಮಹಾಸಾಮಜನ ಕರಪಿಡಿದೆಳೆವಾಗ ಸಹಾಯ ಒಬ್ಬರ ಕಾಣೆ ಗಹನದಲಿ ಅಹೋ ವರದಾ ಎಂದು ಕೂಗಿದಾ ಕ್ಷಣದಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಮಗನ ಗಾಳಿ ಘನವಮ್ಮ

(ರಾಗ ಬಿಲಹರಿ ಛಾಪುತಾಳ ) ನಿನ್ನ ಮಗನ ಗಾಳಿ ಘನವಮ್ಮ ಕರೆದು ರಂಗಗೆ ಬುದ್ಧಿ ಪೇಳೆ ಗೋಪ್ಯಮ್ಮ ||ಪ|| ಹಾಲು ಕಾಯುವಲ್ಲಿ ಇವನ ಗಾಳಿ ಘನವಮ್ಮ ಕಾಲು ತಂದು ಕೇಲಿನೊಳಗೆ ಅದ್ದಿ ಪೋದನಮ್ಮ ಕೋಲತಂದು ಕೊಲ್ಲಪೋದರೆ ಅಮ್ಮ ಲೀಲೆಯಿಂದ ಓಡಿ ಪೋದನಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಮಗನ ಬಾಧೆ

(ರಾಗ ಸೌರಾಷ್ಟ್ರ ಅಟತಾಳ ) ನಿನ್ನ ಮಗನ ಬಾಧೆ ಬಲು ಘನವಾಗಿದೆ ಇನ್ನೆಷ್ಟು ತಾಳುವೆವೆ, ಗೋಪಿ ಬಿನ್ನಣೆಯನು ಬಿಡು ಬಹು ದುಷ್ಟನು ಕೇಳೆ ಇನ್ನೆಷ್ಟು ಸೈರಿಪೆವೆ ||ಪ|| ಹಾಲು ಮೊಸರು ಮಜ್ಜಿಗೆ ಭಾಂಡವನೆಲ್ಲ ಕೋಲಲಿ ಬಡಿದಿಟ್ಟನೆ ಗೋಪಿ ಪೇಳುವುದಿನ್ನೇನು ನಮ್ಮಂಥ ಬಡವರ
ದಾಸ ಸಾಹಿತ್ಯ ಪ್ರಕಾರ
ಬರೆದವರು