ಅಂತರಂಗದಲಿ ಹರಿಯ ಕಾಣದವ

(ರಾಗ ರೇಗುಪ್ತಿ ಛಾಪುತಾಳ) ಅಂತರಂಗದಲಿ ಹರಿಯ ಕಾಣದವ ಹುಟ್ಟುಕುರುಡನೊ ||ಪ|| ಸಂತತ ಶ್ರೀಕೃಷ್ಣಚರಿತೆ ಕೇಳದವ ಜಡಮತಿ ಕಿವುಡನೊ , ಎಂದೆಂದಿಗು || ಅ|| ಹರುಷದಿಂದಲಿ ಹರಿಯ ಪೂಜೆ ಮಾಡದವ ಕರವು ಮುರಿದವನೊ ಸುರವರನ ಮುಂದೆ ಶ್ರೀಕೃಷ್ಣಾ ಎಂದು ಕುಣಿಯದವ ಕುಂಟನೊ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಳ್ಳೆಗಾರ ನಿನ್ನ ಕಂದ

(ರಾಗ ಪೀಲು ಅಟತಾಳ) ಕೊಳ್ಳೆಗಾರ ನಿನ್ನ ಕಂದ , ಗೋಪಿ ,ಗೋಪಾಲಕೃಷ್ಣ ಮುಕುಂದ ||ಪ|| ಉಳ್ಳ ಬೆಣ್ಣೆಯನೆಲ್ಲ ತಿಂದ ಬಹು ಕ್ಷುಲ್ಲಕನಲ್ಲೆ ಗೋವಿಂದ ಗುಲ್ಲು ಮಾಡದೆ ರಾತ್ರಿ ಬಂದ ನಮ್ಮ ಎಲ್ಲ ಮಾನವ ಸೂರೆಗೊಂಡ ಬಲು ಭಂಡ ಬಲು ಭಂಡ ಉದ್ದಂಡ ಪ್ರಚಂಡ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಮ ಗೋವಿಂದ ಸೀತಾರಾಮ ಗೋವಿಂದ

( ರಾಗ ಸೌರಾಷ್ಟ್ರ ಅಟತಾಳ) ರಾಮ ಗೋವಿಂದ ಸೀತಾರಾಮ ಗೋವಿಂದ || ತೃಪ್ತಿ ಅಹುದೆ(/ಹೌದೆ) ಹೆತ್ತ ತಾಯಿ ಇಕ್ಕದನಕ ಭಕ್ತಿ ಅಹುದೆ(/ಹೌದೆ) ಭಕ್ತಜನರ ಸಲಹದನಕ ಮುಕ್ತಿ ಅಹುದೆ(/ಹೌದೆ) ಭಾವಶುದ್ದಿ ಇಲ್ಲದನಕ ಚಿತ್ತಶುದ್ದಿ ಆತ್ಮನಿಜವು ತಿಳಿಯದನಕ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು

( ರಾಗ ಕಾಂಭೋಜ ಝಂಪೆತಾಳ) ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ ||ಪ|| ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿತಗತವಾದ ಅತಿ ಪಾಪವನ್ನು ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪೂರ್ವಜನ್ಮದಲಿ ನಾ ಮಾಡಿದ ಅಘದಿಂದ

( ರಾಗ ಕಾಂಭೋಜ ಝಂಪೆತಾಳ) ಪೂರ್ವಜನ್ಮದಲಿ ನಾ ಮಾಡಿದ ಅಘದಿಂದ ಊರ್ವಿಯೊಳು ಜನಿಸಿದೆನೊ ಕೃಷ್ಣ ಕಾರುಣ್ಯನಿಧಿಯೆನ್ನ ಕಾಯಬೇಕಯ್ಯ ಹರಿ ವಾರಿಜನಾಭ ಶ್ರೀಕೃಷ್ಣ || ಪ|| ಹುಟ್ಟಿದಂದಿಂದಿಗೂ ಸುಖವೆಂಬುದನು ಅರಿಯೆ ಕಷ್ಟವಾಗಿರುತಿಹುದು ಕೃಷ್ಣ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪುಂಡರೀಕವರದ ಪಂಢರಿರಾಯನ

( ರಾಗ ಶ್ರೀ ಆದಿತಾಳ) ಪುಂಡರೀಕವರದ ಪಂಢರಿರಾಯನ ಕೇಳವ್ವ ಕೇಳೆ || ಪ|| ಗೋಕುಲದೊಳಗೆ ತಾನಿಪ್ಪ, ಮೂರು ಲೋಕಕೆ ತಾನಪ್ಪ ಕೊಳಲ ಧ್ವನಿಯ ಮಾಡುತಲಿಪ್ಪ, ನಮ್ಮ ತುರುಗಳ ಕಾಯುತಲಿಪ್ಪ || ವೃಂದಾವನದೊಳು ನಿಂದ, ನಂದನಕಂದ ಗೋವಿಂದ ಕೊಳಲ ಧ್ವನಿ ಬಹು ಚಂದ, ಮೂಜಗವ ಪಾಲಿಪ ಮುಕುಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪೊಂಗೊಳಲನೂದುತಿಹ ಯದುಕುಲೋತ್ತುಂಗ

( ರಾಗ ಆನಂದಭೈರವಿ ಅಟತಾಳ) ಪೊಂಗೊಳಲನೂದುತಿಹ ಯದುಕುಲೋತ್ತುಂಗ ||ಪ|| ತಿಂಗಳಪಾಂಗನೆ ರಜತಶುಭಾಂಗ || ಅ|| ಸಲಿಲಚರ ಧರಾಧರನು ಇಳೆಧರೋಜ್ವಲನೇತ್ರ ಬಲಿಯ ಬೇಡಿದನು ಭೃಗುಕುಲದಿ ಜನಿಸಿ ಬಲಿದ ಬಿಲ್ಲನೆ ಮುರಿದು ಲಲನೆಯರ ಒಳನಾಗಿ ಹೂಳರ ಸಂಬೋಧಿಸಿದ ಚೆಲುವ ಹಯವವೇರ್ದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪೋಗುವುದುಚಿತವೆ

( ರಾಗ ತುಜಾವಂತು ಆದಿತಾಳ) ಪೋಗುವುದುಚಿತವೆ ಮಾಧವ ಮಧುರೆಗೆ ಬಾಗುವೆ ಎಲೊ ನಿನಗೆ ನಾಗಶಯನ ನಿನ್ನಗಲಿ ಒಂದು ಕ್ಷಣ ಹೇಗೆ ಸೈರಿಸುವೆವೊ ಆಗಮನುತ ಕೃಷ್ಣ || ಪ || ಅಕ್ರೂರನೆಂಬುವನಿಲ್ಲಿಗೇತಕೆ ಬಂದ, ಚಕ್ರಧರಗು ನಮಗು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಿಂಡಾಂಡದೊಳಗಿನ ಗಂಡನ ಕಾಣದೆ

( ರಾಗ ಧನಶ್ರೀ ಆದಿತಾಳ)

 

ಪಿಂಡಾಂಡದೊಳಗಿನ ಗಂಡನ ಕಾಣದೆ

ಮುಂಡೇರಾದರು ಪಂಡಿತರು ||ಪ||

ಕುಂಡಲಿಶಯನಪದಪುಂಡರೀಕವನು ಹೃ-

ತ್ಪುಂಡರೀಕದೊಳು ಕಂಡು ಭಜಿಸದೆ || ಅ||

 

ಆಧಾರ ಮೊದಲಾದ ಆರು ಚಕ್ರ ಮೀರಿ

ನಾದಬಿಂದು ಕಳೆಯದ ಬಳಿಕ ಶೋಧಿಸಿ

ಸುಧೆಯ ಪ್ರಸಾದವನುಣದೆ

ವಾದಿಸಿ ಸಭೆಯೊಳು ಒಂದನು ತಿಳಿಯದೆ ||

 

ನಾದದೊಳಗೆ ಸುನಾದದಿ ಓಂಕಾರ

ಪದವ ಚಿತ್ತ ಪರಿಣಾಮವಾಗದೆ

ವೇದಾಂತರೂಪ ತದ್ರೂಪ ಚಿದ್ರೂಪವ

ಓದಿಸಿ ಮನದೊಳು ಒಂದನು ಅರಿಯದೆ ||

 

ನವನಾದ ಮಧ್ಯದಿ ಪವನ ಸುತ್ತಿ ಪಣೆ

ಶಿವನ ತ್ರಿಪುಟದಿ ಸ್ಥಿರವಾಗದೆ

ಭವರೋಗ ವೈದ್ಯನ ಧ್ಯಾನವ ಮಾಡಿ

ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಾವನ ನವಪಾವನ

( ರಾಗ ಆನಂದಭೈರವಿ ಛಾಪುತಾಳ) ಪಾವನ ನವಪಾವನ ನವಪಾವನ ನವಜಗಕೆ || ತುಳಸಿ ನಡೆ ಕೈ ಪಾವನ ದಳವೊಂದಿಡೆ ಕಿವಿ ಪಾವನ ಸ್ಥಳದ ಮೃತ್ತಿಕೆಯಿಡಲು ಪಣೆಯು ಪಾವನವು || ಬೆಳೆದ ಬೃಂದಾವನವ ಬಳಸಿ ಬಂದವ ಪಾವನ ತುಳಸಿ ತೀರ್ಥವ ತೆಕೊಂಡಾತನ ತನುವು ಪಾವನವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು