ಕೊಳ್ಳೆಗಾರ ನಿನ್ನ ಕಂದ

ಕೊಳ್ಳೆಗಾರ ನಿನ್ನ ಕಂದ

(ರಾಗ ಪೀಲು ಅಟತಾಳ) ಕೊಳ್ಳೆಗಾರ ನಿನ್ನ ಕಂದ , ಗೋಪಿ ,ಗೋಪಾಲಕೃಷ್ಣ ಮುಕುಂದ ||ಪ|| ಉಳ್ಳ ಬೆಣ್ಣೆಯನೆಲ್ಲ ತಿಂದ ಬಹು ಕ್ಷುಲ್ಲಕನಲ್ಲೆ ಗೋವಿಂದ ಗುಲ್ಲು ಮಾಡದೆ ರಾತ್ರಿ ಬಂದ ನಮ್ಮ ಎಲ್ಲ ಮಾನವ ಸೂರೆಗೊಂಡ ಬಲು ಭಂಡ ಬಲು ಭಂಡ ಉದ್ದಂಡ ಪ್ರಚಂಡ ರುಕ್ಮಿಣಿಗಂಡ ಅಂಡಜವಾಹನ ಪುಂಡರೀಕಾಕ್ಷನು || ಚಿಕ್ಕಮಕ್ಕಳ ಬೆದರಿಸಿ ಮನೆ ಹೊಕ್ಕು ನಮ್ಮ ಹೊರಡಿಸಿ ಅಕ್ಕ ಹಾಲು ಗಡಿಗೆ ಇಳಿಸಿ ಕುಡಿದು ಸಿಕ್ಕದೆ ಓಡುವ ಸರಸಿ ಅವನು ತ್ರಾಣಿ ಅವನು ತ್ರಾಣಿ ಅವರಾಣೆ ಇವರಾಣೆ ಕಣ್ಣಾಣೆ ಕಾಣೆ ಚೋರನು ಸಿಕ್ಕ ಜಾಣೆ || ದೊರೆಯ ಮಗನಾದರೇನು ಈ ಧರೆಯ ತಾನಾಳಿದರೇನು ಮೊರೆಯ ಕೇಳು ಗೋಪಮ್ಮ ನಮ್ಮ ಸರಸವಾಡಿ ಪೋದನಮ್ಮ ಊರಿಲ್ಲಾ ಊರಿಲ್ಲಾ ದಿಕ್ಕಿಲ್ಲಾ ನಾವೆಲ್ಲಾ ನಿಲ್ಲುವರಲ್ಲಾ ಪುರಂದರವಿಠಲನ ದುಡುಕು ಒಂದೊಂದಲ್ಲಾ ||
ದಾಸ ಸಾಹಿತ್ಯ ಪ್ರಕಾರ
ಬರೆದವರು