ಪೋಗುವುದುಚಿತವೆ

ಪೋಗುವುದುಚಿತವೆ

( ರಾಗ ತುಜಾವಂತು ಆದಿತಾಳ) ಪೋಗುವುದುಚಿತವೆ ಮಾಧವ ಮಧುರೆಗೆ ಬಾಗುವೆ ಎಲೊ ನಿನಗೆ ನಾಗಶಯನ ನಿನ್ನಗಲಿ ಒಂದು ಕ್ಷಣ ಹೇಗೆ ಸೈರಿಸುವೆವೊ ಆಗಮನುತ ಕೃಷ್ಣ || ಪ || ಅಕ್ರೂರನೆಂಬುವನಿಲ್ಲಿಗೇತಕೆ ಬಂದ, ಚಕ್ರಧರಗು ನಮಗು ಸತ್ಕ್ರೀಡೆಗಳನೆಲ್ಲ ಕೆಡಿಸಬೇಕನುತಲಿ, ವಕ್ರನಂದದಲಿ ಬಂದು ಚಕ್ರಧರನೆ ಪೋಗಬೇಡ ನೀ ಮಧುರೆಗೆ, ಅಕ್ಕರದಿಂದಲಿ ಅಭಯ ಕೊಡೆಲೊ ಕೃಷ್ಣ || ಹುಟ್ಟಿಸಿದವರನು ಭ್ರಷ್ಟ ಮಾಡುವರೇನೊ, ಕೃಷ್ಣರಾಯನೆ ನೀನು ಎಷ್ಟು ಹೇಳಿದರು ಒಂದಿಷ್ಟು ದಯ ಬಾರದೆ, ಬೆನ್ನಟ್ಟಿದಲ್ಲದೆ ಬಿಡವೊ ಕೃಷ್ಣಯ್ಯ ನಿನ್ನೊಳು ಇಷ್ಟು ಗುಣಂಗಳ, ಭ್ರಷ್ಟವ ಮಾಡದೆ ಕೃಷ್ಣರಾಯನೆ ಬೇಗ || ಮಾರನ ಬಾದೆಗೆ ಅಗಲಿ ನೀ ಮಧುರಾ-ಪುರಕಾಗಿ ಹೋಗುವರೆ ಸೇರಿದವರನೆಲ್ಲ ಮೀರಿ ನೀ ಪೋದರೆ , ಯಾರೆಲೊ ಗತಿ ನಮಗೆ ವರದ ಶ್ರೀಪುರಂದರವಿಟ್ಠಲರಾಯನೆ, ಸೆರಗೊಡ್ಡಿ ಬೇಡುವೆವೊ ನಿಲ್ಲು ನಿಲ್ಲೆಲೊ ಕೃಷ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು