ಪುಂಡರೀಕವರದ ಪಂಢರಿರಾಯನ

ಪುಂಡರೀಕವರದ ಪಂಢರಿರಾಯನ

( ರಾಗ ಶ್ರೀ ಆದಿತಾಳ) ಪುಂಡರೀಕವರದ ಪಂಢರಿರಾಯನ ಕೇಳವ್ವ ಕೇಳೆ || ಪ|| ಗೋಕುಲದೊಳಗೆ ತಾನಿಪ್ಪ, ಮೂರು ಲೋಕಕೆ ತಾನಪ್ಪ ಕೊಳಲ ಧ್ವನಿಯ ಮಾಡುತಲಿಪ್ಪ, ನಮ್ಮ ತುರುಗಳ ಕಾಯುತಲಿಪ್ಪ || ವೃಂದಾವನದೊಳು ನಿಂದ, ನಂದನಕಂದ ಗೋವಿಂದ ಕೊಳಲ ಧ್ವನಿ ಬಹು ಚಂದ, ಮೂಜಗವ ಪಾಲಿಪ ಮುಕುಂದ || ಸುರತರುವಿನ ನೆರಳಲ್ಲಿ, ಇವನ ಹೆಗಲಿನ ಮೇಲೆ ಕೊಡಲಿ ನೆರೆದಿಹ ಗೋಪಿಯರಲ್ಲಿ, ಗೋಪಾಲರಾಡುತ ಲೀಲೆಗಳಲ್ಲಿ || ಕರ್ಪೂರ(ದ) ವೀಳ್ಯವ ಮೆಲುವ, ನಮ್ಮ ಕಸ್ತೂರಿತಿಲಕ ಉಂಗುರವ ಮುತ್ತಿನ ಓಲೆ ವರಚೆಲುವ, ವಿಸ್ತರದಿ ಹದಿನಾಲ್ಕು ಲೋಕ ಪೊರೆವ || ಹಿಮಕರಚರಣದ ಕರನ, ಮೂಜಗ ಪಾಲಿಪ ಕರುಣ ಅಮರರಿಗೆ ಒಲಿದವನ, ನಮ್ಮ ಪುರಂದರವಿಠಲರಾಯನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು