ಹರಿ ದರುಶನಕಾಗಿ ನಾರದರು ಬರಲು

( ರಾಗ ಸಾವೇರಿ. ತ್ರಿಪುಟ ತಾಳ) ಹರಿ ದರುಶನಕಾಗಿ ನಾರದರು ಬರಲು ಸಿರಿದೇವಿ ಹೊರಗಿನ ಬಾಗಿಲಲ್ಲಿದ್ದಳು ||ಪ|| ಕರಕಮಲ ಮುಗಿದು ದೊರೆ ಸಮಯವೇನೆನಲು ನಾರೀಮಣಿ ಲಕುಮಿ ಅರುಹುವಳಾಗ ||ಅ|| ವರ ದೇವತಾರ್ಚನೆ ಅರಮನೆಯೊಳಗೆ ಭರದಿಂದ ಕುಳಿತಿಪ್ಪ ಪರಮಾತ್ಮನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲಾಲಿ ಲಾಲಿ ರಂಗಯ್ಯಗೆ ( / ಕೃಷ್ಣಯ್ಯಗೆ)

(ರಾಗ ಕೇದಾರಗೌಳ. ಅಟ ತಾಳ ) ಲಾಲಿ ಲಾಲಿ ರಂಗಯ್ಯಗೆ ( / ಕೃಷ್ಣಯ್ಯಗೆ) ಲಾಲಿ ಲಾಲಿ ||ಪ|| ಗೋಕುಲದಲಿ ಪುಟ್ಟಿದವನಿಗೆ ಲಾಲಿ ಗೋವುಗಳನು ನೆರೆ ಕಾಯ್ದವಗೆ ಲಾಲಿ ಗೋವರ್ಗಳ ಜಗಪಿತನಿಗೆ ಲಾಲಿ ಗೋವಿಂದ ಪರಮ ವಿನೋದಿಗೆ ಲಾಲಿ || ಗಗನವ ಮುರಿಯಲೊದ್ದವನಿಗೆ ಲಾಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನಸು ನಿನ್ನ ಮೇಲೆ ಬಹಳ

(ರಾಗ ಮಧುಮಾಧವಿ. ಆಟ ತಾಳ )

 

ಮನಸು ನಿನ್ನ ಮೇಲೆ ಬಹಳ

ಎನಗನುಕೂಲವಾಗೋದು ಹೇಳ ||ಪ ||

ಮನಸಿಜನಾಟದಿ ಕೂಡುವೆನೆಂದರೆ

ಮನುಜರೆಲ್ಲರು ಕಾಯುವರೆನ್ನ ||ಅ ||

 

ನೆರೆಹೊರೆ ಮನೆಯವರೆಲ್ಲ, ಎನ್ನ

ನೆರಳ ಕಂಡರೆ ಸೇರರಲ್ಲ

ಸರಿಸಖಿಯರೆಲ್ಲ ಸುಮ್ಮನೆ ದೂರ್ವರು

ಬರಿ ಮಾತನಾಡಲು ಸಮಯ ಸಿಗದಲ್ಲ ||

 

ಗಂಡನೆಂಬವನು ಉದ್ದಂಡ, ಎನ್ನ

ಕಂಡರೆ ಕೋಪ ಪ್ರಚಂಡ

ಭಂಡುಗೇಡ್ಯತ್ತಿಗೆ ದಂಡಿಸುವಳು ಕೇಳೆ

ಕಂಡರಿಬ್ಬರನ್ನು ಖಂಡಿಸುವನು ಪ್ರಿಯ ||

 

ಚದುರ ಪುರಂದರವಿಠಲ, ನಾಳೆ

ಮದುವೆ ನಮ್ಮನೇಲಿ ಗದ್ದಲ

ಅದರ ಸಂದಣಿಯಲಿ ಯಾವ್ಯಾವ ಪರಿಯಲಿ

ಮುದದಿಂದ ಕೂಡುವೆ ಮದನತಂತ್ರದಲ್ಲಿ ||

ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಟಿಯಲ್ಲಿ ಕರವಿಟ್ಟನು, ಜಗದೀಶನು

(ರಾಗ ತೋಡಿ ಛಾಪುತಾಳ) ಕಟಿಯಲ್ಲಿ ಕರವಿಟ್ಟನು, ಜಗದೀಶನು ||ಪ|| ರಾಜಸೂಯಯಾಗದಲ್ಲಿ ರಾಜೇಶ್ವರ ರಾಜರು ಮೊದಲಾದ ಸುರರೆಲ್ಲರು ಭೋಜನವನ್ನೆ ಮಾಡಿದೆಂಜಲು ಮೊದಲಾದ್ದು ರಾಜೀವಾಕ್ಷನು ಎತ್ತಿದಾಯಾಸದಿಂದಲೋ || ಗೊಲ್ಲಬಾಲಕರೊಡಗೂಡಿ ತಾ ಬಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಲ್ಲಿ ನಮ್ಮ ಶಾಸ್ತ್ರ ಮಾರುವುದಿಲ್ಲ

(ರಾಗ ಪೂರ್ವಿ ಅಟತಾಳ) ಇಲ್ಲಿ ನಮ್ಮ ಶಾಸ್ತ್ರ ಮಾರುವುದಿಲ್ಲ ಸುಮ್ಮನಿದ್ದರೆ ದಾರು ಕೇಳುವರಿಲ್ಲ ||ಪ|| ಏಡಿ ಕಡಗವಿಟ್ಟು ಫಲವೇನಿಲ್ಲ ಬೇಡ ಮುತ್ತಿನ ಬೆಲೆ ಏನು ತಾ ಬಲ್ಲ ಕಾಡ್ಹಳ್ಳಿ ಗೌಡ ತಾನರಸಾಗಲಿಲ್ಲ ವೇದಶಾಸ್ತ್ರಕೆ ಮೂಢ ತಲೆದೂಗಲಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದು ನಾನೇನು ಸುಕೃತವ ಮಾಡಿದೆನೊ

(ರಾಗ ಮಧ್ಯಮಾವತಿ ಏಕತಾಳ) ಇಂದು ನಾನೇನು ಸುಕೃತವ ಮಾಡಿದೆನೊ ಮಂಗಳಮಹಿಮ ವೆಂಕಟ ಬಂದ ಮನೆಗೆ ||ಪ|| ಹಾರ ಕೇಯೂರ ಹೊನ್ನುಂಗುರ ಬೆರಳ ಹಾರದ ನಡುವೆ ಹಾಕಿದ ಏಳು ಪದಕ ತೋರಮುತ್ತಿನ ಕಂಠಮಾಲೆ ಮಾಲಿಕೆಯ ಮೇಲುಗಿರಿಯ ವೆಂಕಟ ಬಂದ ಮನೆಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇತ್ತತ್ತು ಓಡಿ ನೀ ಘಾಸಿಪಡಲು ಬೇಡ

( ರಾಗ ಭೂರಿಕಲ್ಯಾಣಿ ಅಟತಾಳ ) ಇತ್ತತ್ತು ಓಡಿ ನೀ ಘಾಸಿಪಡಲು ಬೇಡ ಎತ್ತೂ ಇಹನು ಕೃಷ್ಣನು ||ಪ|| ಶುದ್ಧಮನದಿಂದ ಇದ್ದ ಎಡೆಯಲಿ ಬುದ್ಧಿಯ ಅವನಲಿ ನಿಲ್ಲಿಸಬೇಕಯ್ಯ ||ಅ|| ಒಡಲೆಂಬ ಮನೆಯಲ್ಲಿ ನೀನು ಇರುತಿರ್ದಿ ಕಡಲಶಯನ ಕೃಷ್ಣನು ಒಡಗೂಡಿ ಮರುತನ್ನ ಮಾಯವ ಮುಂದಿದ್ದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಡುಕೃಪೆಯಿಂದಲಿ ಹರಿ ಒಲಿದವನಿಗೆ

(ರಾಗ ಶಂಕರಾಭರಣ ಆದಿತಾಲ) ಕಡುಕೃಪೆಯಿಂದಲಿ ಹರಿ ಒಲಿದವನಿಗೆ ನಡೆನುಡಿ ಸತ್ಯವೆ ಸಾಕ್ಷಿ ದೃಢಭಕ್ತಿಯಿಂದಲಿ ಉಣಲಿಕ್ಕಿದವರಿಗೆ ಷಡುರಸಾನ್ನವೆ ಸಾಕ್ಷಿ || ಮಡದಿ ಮಕ್ಕಳಿಗೆ ಒಡವೆಯನೀಯದಗೆ ಕಡುದಾರಿದ್ರ್ಯವೆ ಸಾಕ್ಷಿ ಪಡೆದೊಡವೆಯ ಧರ್ಮಕೆ ಈಯದವ ಬಾಯಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈಶ ನಿನ್ನ ಚರಣ ಭಜನೆ

ಈಶ ನಿನ್ನ ಚರಣ ಭಜನೆ । ಆಶೆಯಿಂದ ಮಾಡುವೆನು । ದೋಷರಾಶಿ ನಾಶ ಮಾಡು ಶ್ರೀಶ ಕೇಶವ ।।೧।। ಶರಣು ಹೊಕ್ಕೆನಯ್ಯ ಎನ್ನ । ಮರಣಸಮಯದಲ್ಲಿ ನಿನ್ನ । ಚರಣಸ್ಮರಣೆ ಕರುಣಿಸಯ್ಯ ನಾರಾಯಣಾ ।।೨।।
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರಿಗೆ ವಧುವಾದೆ ಅಂಬುಜಾಕ್ಷಿ

(ರಾಗ ಕಲ್ಯಾಣಿ ಆದಿತಾಳ) ಆರಿಗೆ ವಧುವಾದೆ ಅಂಬುಜಾಕ್ಷಿ ಕ್ಷೀರಾಬ್ಧಿಕನ್ನಿಕೆ ಶ್ರೀಮಹಾಲಕುಮಿ ||ಪ|| ಶರಧಿಬಂಧನ ರಾಮಚಂದ್ರಮೂರುತಿಗೋ ಪರಮಾತ್ಮ ಶ್ರೀ ಅನಂತಪದ್ಮನಾಭನಿಗೋ ಸರಸಿಜನಾಭ ಜನಾರ್ಧನಮೂರುತಿಗೋ ಎರಡು ಹೊಳೆಯ ರಂಗಪಟ್ಟಣವಾಸಗೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು