ಪ್ರಾಚೀನ ಕರ್ಮವು ಬಿಡಲರಿಯದು

( ರಾಗ ಮುಖಾರಿ. ಝಂಪೆ ತಾಳ) ಪ್ರಾಚೀನ ಕರ್ಮವು ಬಿಡಲರಿಯದು ಯೋಚನೆಯ ಮಾಡಿ ನೀ ಬಳಲ ಬೇಡ || ಪ|| ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬರುತಿರಲು ತನ್ನಿಂದ ತಾನೆ ತಿಳಿಯಲರಿಯದೆ ಇನ್ನು ದೇಹವನು ಆಶ್ರಯಿಸಿ ಫಲವೇನು ಉನ್ನಂತ ಹರುಷದಲಿ ಮನದಿ ಯೋಚಿಸುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪರಾಕು ಭೀಮನೆಂದು

( ರಾಗ ದೇವಗಾಂಧಾರ. ಆದಿ ತಾಳಾ) ಪರಾಕು ಭೀಮನೆಂದು ಸ್ತುತಿಸಿದೆ ಪಾಲಿಸಬೇಕನ್ನ ||ಪ|| ಸರೋರುಹಾಸನ ಕೌರವನಾಶನಗಿನ್ನು ಸಂಭ್ರಮ ಮೋದಕ ಪಲ್ಲವಪಾಣಿ ||ಅ|| ವಾಣಿಯೊಡೆಯ ಎನ್ನ ಧಿಕ್ಕರಿಸಿ ನಿ- ರ್ವಾಣ ಮಾಡಿ ದಂಡಪಾಣಿ ಸಜ್ಜನಕೆಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಾಪೋಸು ಹೋದುವಲ್ಲ ಸ್ವಾಮಿ

( ರಾಗ ಶಂಕರಾಭರಣ. ಆದಿ ತಾಳ / ರಾಗ ಮಧ್ಯಮವತಿ ಅಟತಾಳ) ಪಾಪೋಸು ಹೋದುವಲ್ಲ ಸ್ವಾಮಿ ಎನ್ನ ||ಪ|| ಅಪಾರ ದಿನಗಳಿಂದ ಆರ್ಜನೆ ಮಾಡಿದ ||ಅ|| ಉರಗಾದ್ರಿಯಲಿ ಸ್ವಾಮಿ ಪುಷ್ಕರಣಿ ಮೊದಲಾದ ಪರಿಪರಿ ತೀರ್ಥಸ್ನಾನಗಳ ಮಾಡಿ ಹರಿದಾಸರ ಕೂಡಿ ಗಿರಿರಾಯನ ಮೂರ್ತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ

( ರಾಗ ಶ್ರೀ. ಅಟ ತಾಳ) ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ ಪಾಲಿಸೆ ಎನ್ನನು ಪಾಲಾಬ್ಧಿಸಂಜಾತೆ ||ಪ|| ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ ||ಅ|| ವೇದಾಭಿಮಾನಿ ಸಾರಸಾಕ್ಷಿ ಶ್ರೀಧರರಮಣಿ ಕಾದುಕೋ ನಿನ್ನಯ ಪಾದ ಸೇವಕರನ್ನು ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪದುಮನಾಭ ಪರಮಪುರುಷ

( ರಾಗ ಮಲಹರಿ. ತ್ರಿಪುಟ ತಾಳ) ಪದುಮನಾಭ ಪರಮಪುರುಷ ಪರಂಜ್ಯೋತಿಸ್ವರೂಪ ವಿದುರವಂದ್ಯಾ ವಿಮಲಚರಿತ ವಿಹಂಗಾದಿರೋಹಣ || ಉದಧಿವಾಸ ಉರಗಶಯನ ಉನ್ನತೋನ್ನತ ಮಹಿಮಾ ಯದುಕುಲೋತ್ತಮ ಯಜ್ಞರಕ್ಷಕ ಅಜ್ಞಶಿಕ್ಷಕ ರಾಮನಾಮ || ವಿಭೀಷಣಪಾಲಕ ನಮೋ ನಮೋ ಇಭವರದಾಯಕ ನಮೋ ನಮೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂದೆ ಮನದಿ ನಾನಿಂದು ನಮಿಸುವೆ

( ರಾಗ ಯದುಕುಲಕಾಂಭೋಜ. ಛಾಪು ತಾಳ) ಒಂದೆ ಮನದಿ ನಾನಿಂದು ನಮಿಸುವೆ ಸಿಂಧುಶಯನನೆ ಮಂದಹಾಸನೆ ||ಪ|| ಬಂದ ದುರಿತಗಳೊಂದು ಕೂಡದೆ ತಂದೆ ಸಲಹಬೇಕೋ ||ಅ|| ನಿನ್ನ ಹೊರತು ನಾನನ್ಯರೊಬ್ಬರ ಇನ್ನು ಕಾಣೆನೊ ಎನ್ನ ಸಾಕುವ ಚೆನ್ನಾಗಿ ಪ್ರಸನ್ನನಾಗೆಲೊ ಘನ್ನ ಮಹಿಮ ನೀನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಳ್ಳಿತೀ ಶಕುನ ಫಲವಿಂದೆಮಗೆ

( ರಾಗ ಕಾಮವರ್ಧನಿ/ಪಂತುವರಾಳಿ. ಝಂಪೆ ತಾಳ) ಒಳ್ಳಿತೀ ಶಕುನ ಫಲವಿಂದೆಮಗೆ ||ಪ|| ಲಕ್ಷ್ಮೀವಲ್ಲಭನ ಸೇವೆ ದೊರಕೊಂಬುದೇ ರಮಣಿ (/ ಜಲಜನಾಕ್ಷನೊಲುಮೆಯಾಗುವದು ಕೇಳ್ ಕೆಳದಿ) ||ಅ|| ವಾಮ ಗರುಡನ ನೋಡು ವಾಯಸದ ಬಲ ನೋಡು ಕೋಮಲಾಂಗಿಯರೇರ ಉದಕುಂಭ ನೋಡು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನನೆ ನಂಬಿದೆ ನೀರಜನಯನ

(ರಾಗ ಆನಂದಭೈರವಿ. ಏಕ ತಾಳ ) ನಿನ್ನನೆ ನಂಬಿದೆ ನೀರಜನಯನ ಎನ್ನ ಪಾಲಿಸೊ ಇಂದಿರಾರಮಣ || ಗೌತಮ ಮುನಿಯ ಶಾಪದಲಿ ಅಹಲ್ಯೆಯು ಪಥದೊಳು ಶಿಲೆಯಾಗಿ ಮಲಗಿರಲು ಪತಿತಪಾವನ ನಿನ್ನ ಪಾದ ಸೋಕೆ ಸತಿಯಾಗೆ ಅತಿಶಯದಿ ಭಕುತರನು ಕಾಯಿದನೆಂಬೋದು ಕೇಳಿ || ಬಲವಂತ ಉತ್ತಾನಪಾದರಾಯನಣುಗನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ನೀನೆ ಗತಿಯೆಂದು

( ರಾಗ ಧನಶ್ರೀ. ಅಟ ತಾಳ) ಹರಿ ನೀನೆ ಗತಿಯೆಂದು ನೆರೆ ನಂಬಿದವರನು ಮರೆತಿರುವುದು ನ್ಯಾಯವೆ ||ಪ|| ಗರುಡಗಮನ ನೀ ಸಿರಿಲೋಲನಾಗಿರೆ ಅರಸಿ ಎನ್ನನು ಕಾಯ್ವ ದೊರೆಗಳಿನ್ನಾರಯ್ಯ ||ಅ|| ಮುಟ್ಟಿ ಪೂಜಿಸಿ ನಿನ್ನ ಇಷ್ಟವ ಬೇಡುವ ದೃಷ್ಟಿ ಎನ್ನೊಳಗಿದೆಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸುಮ್ಮನಿರು ಸುಮ್ಮನಿರು

( ರಾಗ ಕಾಂಭೋಜ. ಝಂಪೆ ತಾಳ) ಸುಮ್ಮನಿರು ಸುಮ್ಮನಿರು ಬೇಡಿಕೊಂಬೆ ||ಪ|| ಈ ಮಹಿಯೊಳತಿಶಯದ ಗುಮ್ಮ ಬಂದಿದಕೋ ||ಅ|| ಐದು ಮುಖ ಮತ್ತೆ ಮೂರೈದು ಕಣ್ಣುಗಳಿಂದ ಐದು ಮುಖದೊಳಗ್ನಿಕಿಡಿ ಉದುರಿಸಿ ಐದೆರಡು ತೋಳುಗಳ ನೀಡಿ ಒಲಿದಾಡಿಸುತ ಐದುಬಾಣನ ಗೆದ್ದ ಗುಮ್ಮ ಬಂದಿದಕೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು