ವಹವ್ವಾರೆ ಮೆಣಸಿನಕಾಯಿ

( ರಾಗ ನಾದನಾಮಕ್ರಿಯೆ ಏಕತಾಳ) ವಹವ್ವಾರೆ ಮೆಣಸಿನಕಾಯಿ ಒಣರೊಟ್ಟಿಗೆ ತಂದೆನೊ ತಾಯಿ ||ಪ|| ಹುಟ್ಟುತಲಿ ಹಸಿರಾಗುತ ಕಂಡೆ ನಟ್ಟ ನಡುವೆ ಕೆಂಪಾಗುತ ಕಂಡೆ ಕಟ್ಟೆರಾಯನ ಬಹು ರುಚಿಯೆಂಬೆ || ಒಂದೆರಡರೆದರೆ ಬಹು ರುಚಿಯೆಂಬೆ ಮೇಲೆರಡರೆದರೆ ಬಹು ಖಾರೆಂಬೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾತಕೆ ನೋಡುತಿ

( ರಾಗ ಪೂರ್ವಿಕಲ್ಯಾಣಿ ಆದಿತಾಳ) ಯಾತಕೆ ನೋಡುತಿ ಯಮನ ಪಾಶಕೆ ಬೀಳುತಿ ನಾಥ ನಾರಾಯಣ ಹರಿ ಕೃಷ್ಣ ಎಂಬುವ ಕೀರ್ತನೆಯನು ದೂಷಿಸಿ ನಗುತಿ ||ಅ|| ಮೂಢತನದಿ ಮಲಮೂತ್ರದ ಭಾಂಡಕೆ ಬಹು ಶೃಂಗಾರವ ಮಾಡುತಿ ಗಾಢಾಂಧಕಾರದ ಮದ ಉನ್ಮತ್ತದಿ ಕವಿದು ಮುಗ್ಗುಂಡಿಗೆ ಬೀಳುತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಧ್ಯಾನದಲಿ ಶಕ್ತಿಯ ಕೊಡೊ

ನಿನ್ನ ಧ್ಯಾನದಲಿ ಶಕ್ತಿಯ ಕೊಡೊ ಅನ್ಯದಲಿ ವಿರಕ್ತಿಯ ಕೊಡೊ ನಿನ್ನ ನೋಡುವ ಯುಕ್ತಿಯ ಕೊಡೊ ನಿನ್ನ ಪಾಡುವ ಭಕ್ತಿಯ ಕೊಡೊ ನಿನ್ಹತ್ತಿ ಬರುವ ಸಂಪತ್ತಿಯ ಕೊಡೊ ಚಿತ್ತದಿ ತತ್ವದ ಕೃತ್ಯವ ತೋರೊ ಮತ್ತೆ ತುದಿಯಲಿ ಎನಗೆ ಮುಕ್ತಿಯ ಕೊಡೊ ಭವ ಕತ್ತಲೆಯೆನಗೆ ಮುತ್ತಿದೆ
ದಾಸ ಸಾಹಿತ್ಯ ಪ್ರಕಾರ

ಜಯ ಹರಿಯೊಂಬುದೆ ಸುದಿನವು

ಜಯ ಹರಿಯೊಂಬುದೆ ಸುದಿನವು ಜಯ ಹರಿಯೆಂಬುದೆ ತಾರಾಬಲವು ಜಯ ಹರಿಯೆಂಬುದೆ ಚಂದ್ರಬಲವು ಜಯ ಹರಿಯೆಂಬುದೆ ವಿದ್ಯಾಬಲವು ಜಯ ಹರಿಯೆಂಬುದೆ ದೈವಬಲವು ಜಯ ಹರಿ ಪುರಂದರವಿಠಲನ ಬಲವಯ್ಯಾ ಸುಜನರಿಗೆ || ________________________ ಗಜ ತುರಗ ಸಹಸ್ರದಾನ ಗೋಕುಲ ಕೋಟಿ ದಾನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಶೋದೆ ನಿನ್ನ ಕಂದಗೆ ಏಸು ರೂಪವೆ

( ರಾಗ ಧನಶ್ರೀ ಆದಿತಾಳ) ಯಶೋದೆ ನಿನ್ನ ಕಂದಗೆ ಏಸು ರೂಪವೆ ||ಪ|| ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೆ ||ಅ|| ಹಸುಗಳ ಕರೆವಲ್ಲಿ ಹಲವು ರೂಪ ತೋರುವ ಬಿಸಿಯ ಹಾಲಿಡುವಲ್ಲಿ ಬೆನ್ನ ಹಿಂದೆ ಇರುವ ಮೊಸರ ಕಡೆಯುವಲ್ಲಿ ಮುಂದೆ ತಾ ನಿಂತಿರುವ ಹಸನಾಗಿ ಮೋಸ ಮಾಡಿ ಬೆಣ್ಣೆಯ ಮೆಲುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾರೆತ್ತ ಪೋದರೇನು ಊರೆತ್ತ ಬೆಂದರೇನು

( ರಾಗ ಕಾಂಭೋಜ ಝಂಪೆತಾಳ) ಯಾರೆತ್ತ ಪೋದರೇನು ಊರೆತ್ತ ಬೆಂದರೇನು ಪೂರ್ವಪ್ರಾಪ್ತಿ ತನಗಲ್ಲದುಂಟೆ ಮನವೆ || ಹಗಲೆ ತಾರಕೆಗಳು ಹಾರಿ ಆಡಿದರೇನು ಬೈಗು ಭಾಸ್ಕರ ಮೂಡಿ ಬೆಳಗಾದರೇನು ಹಗೆಯವರ ಮನೆಯಲ್ಲಿ ಹಗರಣಾದರೆ ಏನು ನಿಗಮಗೋಚರನಂಘ್ರಿ ನೆನೆ ಕಂಡ್ಯ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾರ ಮಗನಮ್ಮ ರಂಗಯ್ಯ

( ರಾಗ ಜಂಜೂಟಿ ಛಾಪುತಾಳ) ಯಾರ ಮಗನಮ್ಮ ರಂಗಯ್ಯ ||ಪ|| ಯಾರ ಮಗನಮ್ಮ ದಾರಿಯ ಕಟ್ಟುವ ಯಾರಿಗು ಇವನ ದಾರಿಯು ತಿಳಿಯುದೆ || ಕಾಂತೆ ಕೇಳು ಏಕಾಂತದಿ ಮಲಗಿದ್ದೆ ಕಾಂತನೆಂತೆ ಏಕಾಂತಕೆ ಕರೆದನೆ || ಅರವಿಂದಾನನೆ ಕೇಳು ಅರೆಮೊರೆಯಿಲ್ಲದೆ ಅರೆಕಟ್ಟಿ ಎನ್ನ ಅಧರಮುದ್ದಿಕ್ಕಿದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾಕೆ ನಿರ್ದಯನಾದೆ

( ರಾಗ ಕಾಂಭೋಜ ಝಂಪೆತಾಳ) ಯಾಕೆ ನಿರ್ದಯನಾದೆ ಎಲೊ ದೇವನೆ ||ಪ|| ಶ್ರೀಕಾಂತ ಎನ ಮೇಲೆ ಎಳ್ಳಷ್ಟು ದಯವಿಲ್ಲ ||ಅ|| ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು ಹಿಂಗದೆ ಪ್ರಹ್ಲಾದನಪ್ಪಿಕೊಂಡೆ ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ ಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾಕೆ ಕಕುಲಾತಿ ಪಡುವೆ

( ರಾಗ ಕಲ್ಯಾಣಿ ಅಟತಾಳ) ಯಾಕೆ ಕಕುಲಾತಿ ಪಡುವೆ ಎಲೆ ಮರುಳೆ ||ಪ|| ಲೋಕ ಮೂರನು ಆಳ್ವ ಶ್ರೀನಿವಾಸನು ನಮ್ಮ ಸಾಕಲಾರದೆ ಬಿಡುವನೆ ಮರುಳೆ ||ಅ|| ಕಲ್ಲುಪಡೆಯಲ್ಲಿ ಹುಟ್ಟಿರುವ ಮಂಡೂಕಕೆ ಅಲ್ಲಿ ತಂದಿಡುವರಾರೋ ಎಲ್ಲವನು ತೊರೆದಿರುವ ಅರಣ್ಯವಾಸಿಯನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾಕೆ ಕಡೆಗಣ್ಣಿಂದ ನೋಡುವೆ

( ರಾಗ ರೇಗುಪ್ತಿ ಅಟತಾಳ) ಯಾಕೆ ಕಡೆಗಣ್ಣಿಂದ ನೋಡುವೆ, ಕೃಷ್ಣ ನೀ ಕರುಣಾಕರನಲ್ಲವೆ ||ಪ|| ಭಕ್ತವತ್ಸಲ ನೀನಲ್ಲವೆ, ಕೃಷ್ಣ ಚಿತ್ಸುಖದಾತ ನೀನಲ್ಲವೆ ಅತ್ಯಂತ ಅಪರಾಧಿ ನಾನಾದಡೇನಯ್ಯ ಇತ್ತಿತ್ತ ಬಾರೆನ್ನಬಾರದೆ ರಂಗ || ಇಂದಿರೆಯರಸ ನೀನಲ್ಲವೆ, ಬಹು
ದಾಸ ಸಾಹಿತ್ಯ ಪ್ರಕಾರ
ಬರೆದವರು