ರಾಯಬಾರೋ ತಂದೆತಾಯಿ ಬಾರೋ ನಮ್ಮನ್ ಕಾಯಿ ಬಾರೋ

ರಾ ಗ - ಆನಂದಭೈರವಿ : ತಾ ಳ - ಏಕತಾಳ ರಾಯಬಾರೋ ತಂದೆತಾಯಿ ಬಾರೋ ನಮ್ಮನ್ ಕಾಯಿ ಬಾರೋ ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ | ಪ | ಭಾಸುರಚರಿತನೆ ಭೂಸುರವಂದ್ಯನೆ ಶ್ರೀಸುಧೀಂದ್ರಾರ್ಯರ ವರಪುತ್ರ ರಾಯ ಬಾರೋ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾದವರಾಯ ಬೃಂದಾವನದೊಳು

ಯಾದವರಾಯ ಬೃಂದಾವನದೊಳು ವೇಣು ನಾದವ ಮಾಡುತಿರೆ ||ಪ|| ರಾಧಾ ಮುಂತಾದ ಗೋಪಿಯರೆಲ್ಲ ಮಧುಸೂದನ ನಿನ್ನನು ಸೇವಿಸುತಿರೆ ಸುರರು ಅಂಬರದಿ ಸಂದಣಿಸಿರೆ ಅಪ್ಸರ ಸ್ತ್ರೀಯರು ಮೈ ಮರೆತಿರೇ||ಅನುಪಲ್ಲವಿ|| ಕರದಲಿ ಕೊಳಲನು ಊದುತ ಪಾಡುತ ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ಕೃಷ್ಣಯ್ಯ

ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ರಂಗಯ್ಯ |ಪ| ಬಾರೋ ನಿನ್ನ ಮುಖ ತೊರೋ ನಿನ್ನ ಸರಿ ಯಾರೋ ಜಗದರಾಶೀಲನೆ|ಅ.ಪ| ಅಂದುಗೆ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಂಧಿಮಿ ಧಿಮಿಧಿಮಿ ಧಿಮಿ ಎನುತ ಪೊಂಗೊಳಲನೂದುತ ಬಾರಯ್ಯ| ಕಂಕಣ ಕರದಲ್ಲಿ ಹೊನ್ನುಂಗುರ ಹೊಳೆಯುತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂದಲ್ಲ ಎರಡಲ್ಲ ನೊಂದ ಜೀವಕೆ ದುಃಖ

( ರಾಗ ಕೇದಾರಗೌಳ ತ್ರಿಪುಟತಾಳ) ಒಂದಲ್ಲ ಎರಡಲ್ಲ ನೊಂದ ಜೀವಕೆ ದುಃಖ ಒಂದೊಂದು ಕ್ಷಣಕೆ ಅನಂತ ದುಃಖ ||ಪ|| ಬಸಿರಿನೊಳಗೆ ದುಃಖ ಶಿಶುತನದಲಿ ದುಃಖ ಎಸೆವ ಕೌಮಾರ ಯೌವನದ ದುಃಖ ವಶವಲ್ಲದ ದುಃಖ ವಾರ್ಧಿಕ್ಯದ ದುಃಖ ಸತಿ ಸುತ ಮಿತ್ರರು ಕಾಡುವ ದುಃಖ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಮ್ಮೆ ನೆನೆಯಲು ನಮ್ಮ ದೇವ

( ರಾಗ ಯದುಕುಲಕಾಂಭೋಜ ಆದಿತಾಳ) ಒಮ್ಮೆ ನೆನೆಯಲು ನಮ್ಮ ದೇವ ||ಪ|| ಗಮ್ಮನೆ ಓಡಿಬರುವ ಬೊಮ್ಮನಯ್ಯನು ಬೇಗ ||ಅ|| ಪಂಡರಿನಾಥನು ಪಾಂಡವರ ಮಿತ್ರನು ಕೊಂಡಾಡುವರ ಮನೆ ತೊಂಡನಾಗುವನು || ವಯ್ಯಾರ ನಡೆಗಾರ ಹೊಯ್ಲು ಮಾಡುವ ಚೋರ ಮುಯ್ಯಕ್ಕೆ ಮುಯ್ಯ ತೆಗೆವ ಅಯ್ಯನಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ

( ರಾಗ ಮಾಯಾಮಾಳವಗೌಳ ಆದಿತಾಳ) ಒಂಭತ್ತು ಬಾಗಿಲೊಳು ಒಂದೇ ದೀವಿಗೆ ಹಚ್ಚಿ ನಂಬಿಕಿಲ್ಲದ ಸಂಸಾರ ಮಾಡಿದೆನೆ ಸೂವಿಯಾ ಬೀಬಿ ||ಪ|| ತನುವೆಂಬ ಕಲ್ಲಿನೊಳು ಮನವೆಂಬೊ ಧಾನ್ಯವ ತುಂಬಿ ವನವನದು ನವಬೇಳೆ ಬೀಸಿದನೆ || ಅಷ್ಟ ಕರ್ತೃಗಳೆಂಬೊ ಅಷ್ಟ ನವಧಾನ್ಯವ ತಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಳ್ಳೇದೊಳ್ಳೇದು

( ರಾಗ ಕಾಪಿ ಆದಿತಾಳ) ಒಳ್ಳೇದೊಳ್ಳೇದು ಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದ್ಯಾ ಬಲ್ಲಿದತನವೆ ||ಪ|| ಬಿಡೆ ಬಿಡನೊ ಎನ್ನ ಒಡೆಯ ತಿರುಮಲ ನಿನ್ನ ಉಡಿಯ ಪೀತಾಂಬರ ಪಿಡಿದು ಸಲ್ಲಿಸಿಕೊಂಬೆ || ಎರವು ಮರವು ಮಾಡಿ ತಿರುಗಿಸಿ ಎನ್ನ ಕೊರಳಿಗೆ ನಿನ್ನ ಚರಣ ಕಟ್ಟಿಕೊಂಬೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಡೆಯ ಹರಿಸರ್ವೋತ್ತಮನೆಂಬ

( ರಾಗ ಧನಶ್ರೀ ಆದಿತಾಳ) ಒಡೆಯ ಹರಿಸರ್ವೋತ್ತಮನೆಂಬ ದೃಢ ಜ್ಞಾನಿಗಳೆ ವೈಷ್ಣವರಲ್ಲದೆ ,ಇಂಥ ತುಡುಗ ಮುಂಡೆಗಂಡರಿಗಿನ್ನು ವೈಷ್ಣವ ಸಲ್ಲುವದೆ || ಗಡ್ಡ ಮೀಸೆ ಬೋಳಿಸಿಕೊಂಡು ಗೊಡ್ಡು ನಾಮ ತೀಡಿಕೊಂಡು ಅಡ್ಡಾದಿಡ್ಡಿ ಮುದ್ರೆಗಳ ಬಡಿದುಕೊಂಡಿನ್ನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ವರುಷ ಕಾರಣವಲ್ಲ ಹರಿ ಭಜನೆಗೆ

( ರಾಗ ಕಾಂಭೋಜ ಅಟತಾಳ) ವರುಷ ಕಾರಣವಲ್ಲ ಹರಿ ಭಜನೆಗೆ ||ಪ|| ಅರಿತು ತತ್ವಜ್ಞರು ಕೇಳಿ ಸನ್ಮುದದಿ ||ಅ|| ತರಳತನದಲಿ ಕಂಡ ಹರಿಯ ಧ್ರುವರಾಯನು ಹಿರಿಯತಾನವನಪ್ಪ ಕಂಡನೇನೋ ತರಳ ಪ್ರಹ್ಲಾದನು ನರಹರಿಯ ತಾ ಕಂಡ ಹಿರಿಯನವನಪ್ಪ ತಾ ಮರೆಯಲಿಲ್ಲೇನೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಾರಿಜನಾಭನ ಕರುಣವೆ ಸ್ಥಿರ

( ರಾಗ ಬಿಲಹರಿ ಛಾಪುತಾಳ) ವಾರಿಜನಾಭನ ಕರುಣವೆ ಸ್ಥಿರ, ಸಂಸಾರ ಎರವು ಕೇಳಾತ್ಮ ||ಪ|| ಜಾರುತದಾಯುಷ್ಯ ದೂರದ ಮುಕುತಿಗೆ ದಾರಿ ಸಥಿಯು ಕೇಳಾತ್ಮ ||ಅ|| ಕೆರೆಯ ಕಟ್ಟಿಸು ಪೂದೋಟವ ಹಾಕಿಸು, ಸೆರೆಯ ಬಿಡಿಸು ಪುಣ್ಯಾತ್ಮ ಅರಿಯದೆ ಮನೆಗೆ ಬಂದವರಿಂಗಶನವಿತ್ತು, ಪರಮ ಪದವಿ ಪಡೆಯಾತ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು