ಯಾರೇ ಬಂದವರು ಮನೆಗೆ

( ರಾಗ ಸೌರಾಷ್ಟ್ರ. ಅಟ ತಾಳ) ಯಾರೇ ಬಂದವರು ಮನೆಗೆ ಮ- ತ್ಯಾರೇ ಬಂದವರು ||ಪ|| ನಾರಾಯಣ ಕೃಷ್ಣನಾಥನಲ್ಲದೆ ಬೇರೆ || ವಜ್ರರೇಖೆಗಳಿವೆ ಮನೆಯಲ್ಲಿ, ಕಾಲ ಗೆಜ್ಜೆ ಧ್ವನಿ ಕೇಳಿ ಬರುತಿದೆ ವಜ್ರಮಾಣಿಕ್ಯವೆಲ್ಲ ಹರಿದು ಬಿದ್ದಿವೆ ಮಜ್ಜಿಗೆಯೊಳಗೆ ಕಾಣ್ವ ಬೆಣ್ಣೆಯ ಕಾಣೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಮನೆಲ್ಲ್ಯೂ ಕಾಣೆನೆಂದು.

( ರಾಗ ಮುಖಾರಿ / ಶಿವರಂಜನಿ. ಝಂಪೆ ತಾಳ) ಯಮನೆಲ್ಲ್ಯೂ ಕಾಣೆನೆಂದು ಹೇಳಬೇಡ ||ಪ|| ಯಮನೇ ರಾಮಚಂದ್ರ ಸಂದೇಹ ಬೇಡ ||ಅ|| ನಂಬಿದ ವಿಭೀಷಣಗೆ ರಾಮನಾದ ನಂಬದಿದ್ದ ರಾವಣನಿಗೆ ಯಮನೆ ಆದ || ನಂಬಿದ ಅರ್ಜುನನಿಗೆ ಬಂಟನಾದ ನಂಬದಿದ್ದ ಕೌರವನಿಗೆ ಕಂಟಕನಾದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಮನ ಶಾಸನ ಕೇಳೊ ಜೀವ

( ರಾಗ ಯದುಕುಲಕಾಂಭೋಜ. ಅಟ ತಾಳ) ಯಮನ ಶಾಸನ ಕೇಳೊ ಜೀವ ಇದು ಸಂಶಯವಿಲ್ಲೆಂದು ಎಣಿಸು ಸ್ವಭಾವ ||ಪ|| ಪರ ಸತಿಯರ ನೋಡಿದವಗೆ ಪತ್ತು ಕೊರಡು ಕೆಂಪಗೆ ಕಾಸಿ ಕುಕ್ಕಿ ಕಣ್ಣೊಳಗೆ ಎರಡು ಗುಡ್ಡನು ಪೀಕೋರವಗೆ ಸೀಸವ ಕರಗಿಸಿ ಪೊಯ್ಯುವರೊ ಅವನ ಕಿವಿಯೊಳಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಋತುಮತಿ ಬಿಡು ಬಿಡು ಸೆರಗ

( ರಾಗ ಯದುಕುಲಕಾಂಭೋಜಿ. ಅಟ ತಾಳ) ಋತುಮತಿ ಬಿಡು ಬಿಡು ಸೆರಗ, ನೀ ಋತುವಾಧರೆ ನಾ ರತಿ ಕೊಡ ಬರುವೆ ಅಣ್ಣಯ್ಯ ಕೃಷ್ಣ ಬಿಡೊ ಸೆರಗ, ನಾ ಅಣ್ಣನಲ್ಲವೆ ನಿನ್ನ ಅಣ್ಣನ ಭಾವ ||೧|| ಭಾವಯ್ಯ ಕೃಷ್ಣ ಬಿಡೊ ಸೆರಗ, ನಾ ಭಾವನಲ್ಲವೆ ನಿನ್ನ ಭಾವನ ತಮ್ಮ ತಮ್ಮಯ್ಯ ಕೃಷ್ಣ ಬಿಡೊ ಸೆರಗ, ನಾ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮೊದಲೊಂದಿಪೆ ನಿಮಗೆ ಗಣನಾಥ

ಮೊದಲೊಂದಿಪೆ ನಿಮಗೆ ಗಣನಾಥ ||ಪ| ನಮಗೆ ಬಂದ ವಿಘ್ನಗಳ ಕಳೆ ಗಣನಾಥ |ಅ ಪ| ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ ಸಂದ ರಣದಲಿ ಗಣನಾಥ |೧| ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿಮ್ಮ ಪಾದ ಸಾಧಿಸಿದ ರಾಜ್ಯ ಗಣನಾಥ |೨|
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಡು ಬೇಗ ದಿವ್ಯಮತಿ ಸರಸ್ವತಿ

ಕೊಡು ಬೇಗ ದಿವ್ಯಮತಿ ಸರಸ್ವತಿ |ಪ| ಮ್ರುಡ ಹರಿಹಯ ಮುಖರೊಡೆಯಳೆ ನಿನ್ನಯ | ಅಡಿಗಳಿಗೆರಗುವೆ ಅಮ್ಮ ಬ್ರಹ್ಮನ ರಾಣಿ |ಅ ಪ| ಇಂದಿರಾ ರಮಣನ ಹಿರಿಯ ಸೊಸೆಯು ನೀನು | ಬಂದೆನ್ನ ವದನದಿ ನಿಂದು ನಾಮವ ನುಡಿಸೆ |೧|
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜನುಮ ಜನುಮದಲಿ ಎನಗಿರಲಿ| ಹನುಮ ಭೀಮ ಮಧ್ವ ಮುನಿಗಳ ಸೇವೆಯು

ಜನುಮ ಜನುಮದಲಿ ಎನಗಿರಲಿ| ಹನುಮ ಭೀಮ ಮಧ್ವ ಮುನಿಗಳ ಸೇವೆಯು |ಪ| ಮಾತ್ಯರೀಷನ ಪ್ರೀತನಾಗಿ ಬಲು | ತಾತನು ಸುಲಭದಿ ವಲಯವನು | ಕೋತಿಯ ರೂಪದಿ ಭೂತಳದೀ ಬಲು | ಖ್ಯಾತಿಯ ಪಡೆದ ರಾಮದೂತನ ಸೇವೆಯು |೧| ಹರನ ಭಕುತ ಜರಾಸಂಧನ ಕಾಯವ | ತರಿದು ಮುರಿದು ಬಲು ಸುಲಭದಲಿ |
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಭೋಯತಿವರದೇಂದ್ರ | ಶ್ರೀಗುರು ರಾಯ ರಾಘವೇಂದ್ರ

ಭೋಯತಿವರದೇಂದ್ರ | ಶ್ರೀಗುರು ರಾಯ ರಾಘವೇಂದ್ರ |ಪ| ಕಾಯೋ ಎನ್ನ ಶುಭ | ಕಾಯೋ ಭಜಿಸುವೆನು | ಕಾಯೋ ತವಕ ಚಂದ್ರ |ಅ ಪ| ಕಂಡ ಕಂಡ ಕಡೆಗೆ ತಿರುಗುತ ಬೆಂಡಾದೆನು ಕೊನೆಗೆ | ಕಂಡ ಕಂಡವರ ಕೊಂಡಾಡುತ ನಿಮ್ಮ ಕಂಡೆ ಕಟ್ಟ ಕಡೆಗೆ |೧| ನೇಮವು ಎನಗೆಲ್ಲಿ ಇರುವುದು ಕಾಮಾಧಮನಲ್ಲಿ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗ ಬಾರೋ ಪಾಂಡುರಂಗ

( ರಾಗ ಶಂಕರಾಭರಣ. ಆದಿ ತಾಳ) ರಂಗ ಬಾರೋ ಪಾಂಡುರಂಗ ಬಾರೋ ಶ್ರೀ ||ಪ || ರಂಗ ಬಾರೋ ನರಸಿಂಗ ಬಾರೋ ||ಅ || ಕಂದ ಬಾರೋ ಎನ್ನ ತಂದೆ ಬಾರೋ ಇಂದಿರಾರಮಣ ಮುಕುಂದ ಬಾರೋ || ಅಪ್ಪಬಾರೋ ತಿಮ್ಮಪ್ಪ ಬಾರೋ ,ಕಂ- ದರ್ಪನಯ್ಯನೆ ಕಂಚಿವರದ ಬಾರೋ || ಅಣ್ಣ ಬಾರೋ ಎನ್ನ ಚಿನ್ನ ಬಾರೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗ ಬಾರೋ ಕೃಷ್ಣ ಬಾರೋ

( ರಾಗ ಮೋಹನ. ಏಕ ತಾಳ) ರಂಗ ಬಾರೋ ಕೃಷ್ಣ ಬಾರೋ ||ಪ || ಮಂಗಳಾತ್ಮಕ ಮನಸಿಜಯ್ಯನೆ ಅಂಗಜಜನಕ ಕಾಳಿಂಗಮರ್ದನ ಬಾರೋ ||ಅ || ಪುಂಡರೀಕಾಕ್ಷ ಶ್ರೀ ರಾಮಚಂದ್ರ ಬಾರೋ, ಕೋ- ದಂಡವನೆ ಪಿಡಿದ ಮುಕುಂದ ಬಾರೋ ಪಾಂಡುಸುತರ ಕಾಯಿದ ಪರಬ್ರಹ್ಮ ಬಾರೋ , ಉ- ದ್ದಂಡ ರೂಪ ತಾಳಿದ ನರಸಿಂಹನೆ ಬಾರೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು