ಲಾಲಿ ಲಾಲಿ ರಂಗಯ್ಯಗೆ ( / ಕೃಷ್ಣಯ್ಯಗೆ)

ಲಾಲಿ ಲಾಲಿ ರಂಗಯ್ಯಗೆ ( / ಕೃಷ್ಣಯ್ಯಗೆ)

(ರಾಗ ಕೇದಾರಗೌಳ. ಅಟ ತಾಳ ) ಲಾಲಿ ಲಾಲಿ ರಂಗಯ್ಯಗೆ ( / ಕೃಷ್ಣಯ್ಯಗೆ) ಲಾಲಿ ಲಾಲಿ ||ಪ|| ಗೋಕುಲದಲಿ ಪುಟ್ಟಿದವನಿಗೆ ಲಾಲಿ ಗೋವುಗಳನು ನೆರೆ ಕಾಯ್ದವಗೆ ಲಾಲಿ ಗೋವರ್ಗಳ ಜಗಪಿತನಿಗೆ ಲಾಲಿ ಗೋವಿಂದ ಪರಮ ವಿನೋದಿಗೆ ಲಾಲಿ || ಗಗನವ ಮುರಿಯಲೊದ್ದವನಿಗೆ ಲಾಲಿ ನಿಗಮವ ತಂದಿತ್ತವನಿಗೆ ಲಾಲಿ ಹಗೆಯ ತೊಟ್ಟು ಕೊಂದವನಿಗೆ ಲಾಲಿ ಜಗವನುದರದಿ ಧರಿಸಿದವನಿಗೆ ಲಾಲಿ || ನಖದಲಿ ಗಂಗೆಯ ಪಡೆದವಂಗೆ ಲಾಲಿ ಶಕಟನ ಮುರಿದಿಟ್ಟವನಿಗೆ ಲಾಲಿ ನಿಖಿಲ ದೈತ್ಯದಲ್ಲಣನಿಗೆ ಲಾಲಿ ರುಕುಮಿಣೀಶ ಸುರವಂದಿತಗೆ ಲಾಲಿ || ಬೆಟ್ಟಿಲಿ ಬೆಟ್ಟವ ಹೊತ್ತವಗೆ ಲಾಲಿ ಜಟ್ಟಿಗಳನು ತರಿದೊಟ್ಟಿದವಗೆ ಲಾಲಿ ಮೆಟ್ಟಿ ಭೂಮಿಯನಳೆದವಗೆ ಲಾಲಿ ಕಟ್ಟುಗ್ರ ಶ್ರೀ ನರಸಿಂಹಗೆ ಲಾಲಿ || ಶರಧಿಗೆ ಸೇತು ಕಟ್ಟಿದವಗೆ ಲಾಲಿ ಸುರರ ಸೆರೆಯ ಬಿಡಿಸಿದಾತಗೆ ಲಾಲಿ ಕರಿ ಮೊರೆಯಿಡಲೊದಗಿದವಗೆ ಲಾಲಿ ವರದ ಪುರಂದರವಿಠಲಗೆ ಲಾಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು