ಇಲ್ಲಿ ನಮ್ಮ ಶಾಸ್ತ್ರ ಮಾರುವುದಿಲ್ಲ

ಇಲ್ಲಿ ನಮ್ಮ ಶಾಸ್ತ್ರ ಮಾರುವುದಿಲ್ಲ

(ರಾಗ ಪೂರ್ವಿ ಅಟತಾಳ) ಇಲ್ಲಿ ನಮ್ಮ ಶಾಸ್ತ್ರ ಮಾರುವುದಿಲ್ಲ ಸುಮ್ಮನಿದ್ದರೆ ದಾರು ಕೇಳುವರಿಲ್ಲ ||ಪ|| ಏಡಿ ಕಡಗವಿಟ್ಟು ಫಲವೇನಿಲ್ಲ ಬೇಡ ಮುತ್ತಿನ ಬೆಲೆ ಏನು ತಾ ಬಲ್ಲ ಕಾಡ್ಹಳ್ಳಿ ಗೌಡ ತಾನರಸಾಗಲಿಲ್ಲ ವೇದಶಾಸ್ತ್ರಕೆ ಮೂಢ ತಲೆದೂಗಲಿಲ್ಲ || ಮೂಕ ತಾ ಮಾತಿನ ಸವಿಯೇನು ಬಲ್ಲ ಲೌಕಿಕ ಬೇನೆ ಸನ್ಯಾಸಿ ಏನು ಬಲ್ಲ ಕಾಕುಮಾನವ ಪುಣ್ಯಪಾಪೇನು ಬಲ್ಲ ಶ್ರೀ ಕೃಷ್ಣನ ನೆನೆಯದವ ಮಾನವನಲ್ಲ || ಕತ್ತೆಗೆ ಹೂರಣದ ರುಚಿ ತಿಳಿಯಲಿಲ್ಲ ತೊತ್ತಿಗೆ ಪತಿವ್ರತೆ ಗುಣ ಬರಲಿಲ್ಲ ಮುತ್ತಿನ ಹಾರ ಕಪಿಗೆ ಹಾಕ ಸಲ್ಲ ಕುತ್ತಿಗೆ ಕೊಯ್ವಗೆ ಕರುಣವೇ ಇಲ್ಲ || ಅಚ್ಚ ಹೆಣ್ಣಿನ ಸಂಗ ಷಂಡೇನು ಬಲ್ಲ ಮುಚ್ಚಿ ಮಾತ್ಹೇಳಿದರೆ ನ್ಯಾಯೇನು ಇಲ್ಲ ಸ್ವಚ್ಛ ದೀಪದ ಬೆಲಕು ಕುರುಡೇನು ಬಲ್ಲ ಮೊಚ್ಚೆಗಾರ ಸಕಲಾತ್ಯೇನು ಬಲ್ಲ || ಹೆಣ್ಣಿಗೆ ಜಾರತ್ವ ಗುಣ ತರವಲ್ಲ ತಣ್ಣೀರು ಬೇಸಿಗ್ಗೆ ಗುಣ ತೋರಿತಲ್ಲ ಘನ್ನ ಪುರಂದರವಿಠಲನ ಭಕ್ತರೇ ಅನ್ಯಾಯವರಿಯದೇ ಭವನೀಗ್ವರಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು