ನೀನೆ ಗತಿ ನೀನೆ ಮತಿ

ನೀನೆ ಗತಿ ನೀನೆ ಮತಿ

(ರಾಗ ಪೂರ್ವಿ. ಝಂಪೆ ತಾಳ ) ನೀನೆ ಗತಿ ನೀನೆ ಮತಿ ನೀನೆ ಸ್ವಾಮಿ ನೀನಲ್ಲದನ್ಯತ್ರ ದೈವಗಳ ನಾನರಿಯೆ || ನಿನ್ನ ಪಾದಾರವಿಂದದ ಸೇವೆಯ ಮಾಡಿ ನಿನ್ನ ಧ್ಯಾನದಲಿರುವ ಹಾಗೆ ಮಾಡು ನಿನ್ನ ದಾಸರ ಸಂಗದಿಂದ ದೂರಿಡದೆನಗೆ ಸನ್ಮಾರ್ಗದಿರಿಸೊ ಜಗದೀಶ ಅಘನಾಶ || ಕಮಲನಾಭಿಯಲಿ ಬೊಮ್ಮನ ಪುಟ್ಟಿಸಿದೆ ಹರಿಯೆ ಕಮಲಸಖ ಕೋಟಿಪ್ರಕಾಶ ಈಶ ಕಮಲಕರತಳದೆ ಅಭಯವನಿತ್ತು ಭಕುತರಿಗೆ ಕಮಲಾಕ್ಷನೆನಿಸಿದೆಯೊ ಕಮಲಾರಮಣ || ಶಿಶುಪಾಲದಂತ ವಕ್ತ್ರರ ಶಿರವ ಛೇದಿಸಿದೆ ಪಶುಪತಿಯ ಆಭರಣವೈರಿವಾಹನನೆ ಅಸುರಕುಲ ಸಂಹರಿಸಿ ಭಕ್ತಜನರನು ಪೊರೆದೆ ವಸುಧೇಶ ಪುರಂದರವಿಠಲರಾಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು