ನಿನ್ನ ಭಕುತಿಯನು ಬೀರೋ

ನಿನ್ನ ಭಕುತಿಯನು ಬೀರೋ

(ರಾಗ ಶಂಕರಾಭರಣ. ತ್ರಿಪುಟ ತಾಳ ) ನಿನ್ನ ಭಕುತಿಯೆನು ಬೀರೋ, ದೇವ ಎನ್ನ ಮನ್ನಿಸಿ ಸಲಹುವರಾರೋ ||ಪ|| ಸನ್ನುತ ಸನ್ಮಾರ್ಗ ತೋರೋ, ಪ್ರ- ಸನ್ನ ರಕ್ಷಕ ಬೇಗ ಬಾರೋ ||ಅ.ಪ|| ಪನ್ನಗಶಯನ ಲಕ್ಷ್ಮೀಶ, ವೇದ- ಸನ್ನುತಪಾದ ಸರ್ವೇಶ ಇನ್ನು ಬಿಡಿಸೊ ಮೋಹಪಾಶ ಆ- ಪನ್ನ ರಕ್ಷಕ ಶ್ರೀನಿವಾಸ || ನಾರದ ಗಾನವಿಲೋಲ, ಸ್ವಾಮಿ ಭೂರಿ ಭಕ್ತರ ಪರಿಪಾಲ ಭೂರಮಣ ಕರುಣಾಲವಾಲ ನೀರದಶ್ಯಾಮ ಗೋಪಾಲ || ಕರಿರಾಜ ವರದ-ಪ್ರಮೇಯ , ಎನ್ನ ಅರಿತು ಪಾಲಿಸೊ ಯೋಗಿಧ್ಯೇಯ ಸುರಮುನಿ ಹೃದಯನಿಕಾಯ, ಗುರು ಪುರಂದರವಿಠಲರೇಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು