ಆರು ಸರಿ ನಿನಗೆ ಬೊಮ್ಮಾಂಡದೊಳಗೆ

ಆರು ಸರಿ ನಿನಗೆ ಬೊಮ್ಮಾಂಡದೊಳಗೆ

( ರಾಗ ಸಾವೇರಿ ಝಂಪೆ ತಾಳ) ಆರು ಸರಿ ನಿನಗೆ ಬೊಮ್ಮಾಂಡದೊಳಗೆ ವೀರ ರಾಮನ ಬಂಟ ಧೀರ ಹನುಮಂತ ||ಪ|| ತೆಂಕ ಜಲಧಿಯ ಲಘುವಿಂದ ದಾಟಿ ಅಕ- ಳಂಕ ರಾಮನ ಬೆರಳ ಮುದ್ರಿಕೆಯನು ಲಂಕಾವಿದೆಂದು ಕೊಟ್ಟವನಿಜೆಯ ಸಂತೈಸಿ ಲಂಕೆಯನುರುಪಿದೆ ನಿಶ್ಶಂಕ ಹನುಮಂತ || ಅಂಡಲೆದು ದಶವದನನ ಸುರಪಡೆಗಳ ಕಡಿದು ಖಂಡತುಂಡನು ಮಾಡಿ ಕಲಿ ರಾಮರ ದಂಡಿಲೊಬ್ಬರ ನೋಯದಂತೆ ಕಾದಿಸಿ ಖಳರ ಹಿಂಡುಗಳ ಕೂಡ ಉದ್ದಂಡ ಹನುಮಂತ || ಅಸುರ ಬಲ ವಾನರರ ಕುಸುರಿ ಅರಿಯಲು ಭರ- ವಸೆಯಿಂದ ಸಂಜೀವನವ ತಂದು ಅಸುಬಿ ವಾನರರಿಗೋಸುಗ ಗಿರಿಯನೆತ್ತಿ ಚಿ- ಮ್ಮಿಸಿ ನೆಲಕೆ ನಿಲಿಸಿದೆ ನೀ ಅಸಮ ಹನುಮಂತ || ಪರರಿಗಸದಳವೆನಿಪ ನಿಜಬಲರೊಡೆಯ ಪಂಥ ಸಿರಿಯುರಕ್ಕೆರಗಿ ಎಸೆದಾಗ ಬೀಳೆ ಅರಸು ರಾಮರ ಪಂಥಕಡ್ಡಲಾದೆನು ಎಂದು ಮರುಗಿದ ಮಹಾತ್ಮನುದ್ದುರುಟು ಹನುಮಂತ || ಭೂಮಿಜಾತೆಯ ಮುಖಾಂಬುಜಮಿತ್ರನಾದ ಸಿರಿ ರಾಮ ಗುರು ಪುರಂದರ ವಿಠಲನು ತಾ ಮನದಿ ನಿಶ್ಚಯಿಸಿ ಬೇಡೆನಲು ತವ ಪಾದ ದಾ ಮಹಾಸೇವೆ ಸಾಕೆಂದ ಹನುಮಂತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು