ಆನಂದ ಆನಂದ ಮತ್ತೆ ಪರಮಾನಂದ
ಆನಂದ ಆನಂದ ಮತ್ತೆ ಪರಮಾನಂದ
ಆನಂದ ಕಂದನೊಲಿಯೆ ಏನಂದಿದ್ದೇ ವೇದ ವೃಂದ ||ಪ||
ಅ ಮೊದಲು ಶಕಾರಂತ ಆ ಮಹಾ ವರ್ಣಗಳೆಲ್ಲಾ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||೧||
ಜಲ ಕಾಷ್ಟ ಶೈಲ ಗಗನ ನೆಲ ಪಾವಕ
ತರು ಫಲ ಪುಷ್ಪಗಳಲ್ಲಿ ಹರಿ ವ್ಯಾಪ್ತನೆಂದರಿತವರಿಗೆ ||೨||
ಪೋಪುದು, ಬರುತಿಪ್ಪುದು, ಕೋಪ ಶಾಂತಿ ಮಾಡುವುದು
ರೂಪ ಲಾವಣ್ಯವು ಹರಿಯ ವ್ಯಾಪಾರವೆಂದರಿತವರಿಗೆ ||೩||
ಮಧ್ವ ಶಾಸ್ತ್ರ ಪ್ರವಚನ ಮುದ್ದು ಕೃಷ್ಣ ದರುಶನ
ಶುದ್ಧ ವಿಜಯವಿಠಲನ ಪೊಂದಿ ಕೊಂಡಾಡುವವರಿಗೆ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments