ಏನು ಕೌತುಕವೊ

ಏನು ಕೌತುಕವೊ

( ರಾಗ ಸಾವೇರಿ. ಝಂಪೆ ತಾಳ) ಏನು ಕೌತುಕವೊ ಕೃಷ್ಣ ತಾನೆ ಕನಸಿನೊಳು ಮಾನವರ ತೆರನಂತೆ ಮರುಳಾಡಿಸಿದನೆನ್ನ ||ಪ|| ಹಿಂದೆ ಮಾಡಿದ ಪದವ ಒಂದು ಹೇಳೆಂದೆನುತ ಮುಂದೆ ಅದರಂದವನು ಎಲ್ಲ ತಾ ಪೇಳ್ದ ಒಂದು ದೋಸೆಯ ತನಗೆ ತಂದು ಕೊಡು ಎಂದೆನಲು ತಿಂದು ಮೀಸಲು ಕೊಡೆನು ಎಂದು ಹೇಳಿದನು || ಮೋಸ ಹೋದೆನು ನಾನು ದೋಸೆಯನು ಹರಿಗೆ ಆ- ಪೋಶನವನಿಕ್ಕದಾಪೋಶಿಸಿದೆನು ಮೀಸಲಾರದು ಅಹುದು ದೋಷವಿಲ್ಲೆಂದೆನುತ ಆಸುರದ ಮಾತುಗಳ ವಾಸಿ ತೋರಿದನು || ಎಳೆಯ ಪ್ರಾಯದೊಳಿರುವ ಚೆಲುವೆಯೊರ್ವಳು ಬಂದು ಹೊಳೆಯೊಳಗೆ ಈಜಾಡಿ ನಲಿವುದನು ನೋಡಿ ನಳಿನಮುಖಿಯನು ಮೇಲೆ ಕರೆಸಲಾ ಮೈಲಿಗೆಯ ತೊಳಕೊಂಡು ಒಳಹಿಂಕಿ ಬಂದುದನು ಕಂಡೆ || ಈ ರೀತಿ ಸಿರಿವಾರಿಜಾಕ್ಷನು ಕೃಷ್ಣ ತೋರಿದನು ಸ್ವಪ್ನ ಕಣ್ಣಾರೆ ನೋಡಿದನು ಹಾರಿ ಹೋಯಿತು ಕಷ್ಟ ಸೂರೆಗೊಂಡೆನು ಸಿರಿಯ ಏರಿ ಬಂದುದು ಶುಭದ ವಾರಿಧಿಯು ಮುಂದೆ || ಈ ಮಹಾಮೂರ್ತಿಯನು ಜಾವ ಪರಿಯಂತರದಿ ಕಾಮಿಸಿಯೆ ನೋಡಿದೆನು ಸೌಮನಸ್ಯದಲಿ ಆ ಮಹಾಹರಿಯ ಪರಧಾಮವನು ಕೈಗೊಂಡು ಭೂಮಿಪತಿಯಾಗಿರ್ದ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು