ಹಾಲು ಉಕ್ಕಿತೋ ರಂಗ ಹಾದಿಯ ಬಿಡೊ

ಹಾಲು ಉಕ್ಕಿತೋ ರಂಗ ಹಾದಿಯ ಬಿಡೊ

( ರಾಗ ಪುನ್ನಾಗವರಾಳಿ. ಅಟ ತಾಳ) ಹಾಲು ಉಕ್ಕಿತೋ ರಂಗ ಹಾದಿಯ ಬಿಡೊ ||ಪ|| ಹಾಲು ಬೇಕೇನೋ ನಿನಗೆ ಸೆರಗ ಬಿಡೊ ||ಅ|| ಕರವ ಪಿಡಿದರೆನ್ನ ನೌರಸಮುತ್ತಿನ ಸರಗಳು ಹರಿದಾವು ಮುಟ್ಟದಿರೊ ರಂಗ ಭರದಿ ಮುದ್ದು ಕೊಡುವರೇನೊ ಅತ್ತತ್ತ ಸರಿಯೋ ನಮ್ಮವರು ಕಂಡಾರು ಕೃಷ್ಣ || ಪುರುಷನುಳ್ಳವಳು ನಾ ಪುರುಷರು ಕೇಳ್ಯಾರು ಗುರುತು ಕಂಡರೆ ಕೊಲೆಯ ಕೊಂದಾರು ಸರಸವಾಡಲು ಬೇಡ ಸಡಲೋವು ಮುಡಿಹುವ್ವು ಸುರತ ಬೇಕಾದರೆ ಬರುವೆ ವನದೊಳಗೆ || ತಟ್ಟನೆ ತುಟಿಯ ಚುಂಬಿಸುವರೇನೊ ನೀನು ರಟ್ಟು ಮಾಡದಿರೊ ರಾಜ್ಯದೊಳಗೆ ಗುಟ್ಟಿನಿಂದಲಿ ತವಕದಿ ಎನ್ನ ಕೂಡೊ ಅಟ್ಟಹಾಸದಿ ಮೆರೆವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು