ರಾಮ ಮಂತ್ರವ ಜಪಿಸೊ

ರಾಮ ಮಂತ್ರವ ಜಪಿಸೊ

( ರಾಗ ಮಧ್ಯಮಾವತಿ ಆದಿ ತಾಳ) ರಾಮ ಮಂತ್ರವ ಜಪಿಸೊ ಹೇ ಮನುಜಾ ||ಪ|| ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ || ಅ || ಕುಲಹೀನನಾದರು ಕೂಗಿ ಜಪಿಸುವ ಮಂತ್ರ ಸಲೆ ಬೀದಿಯೊಳು ಉಚ್ಚರಿಪ ಮಂತ್ರ (/ಜಲಜಪಾಣಿ ನಿತ್ಯ ಜಪಿಪ ಮಂತ್ರ) ಹಲವು ಪಾಪಂಗಳ ಹದಗೆಡಿಸುವ ಮಂತ್ರ (/ಕಲುಷಪರ್ವತಕಿದು ಕುಲಿಶವಾಗಿಪ್ಪ ಮಂತ್ರ) ಸುಲಭದಿಂದಲಿ ಸ್ವರ್ಗ(/ಮೋಕ್ಷ) ಸೂರೆ ಕೊಂಬುವ ಮಂತ್ರ || ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ ಸರ್ವ ಋಷಿಗಳಲ್ಲಿ ಸೇರಿದ ಮಂತ್ರ ದುರಿತ ಕಾನನಕಿದು ದಾವಾನಲ ಮಂತ್ರ ಪೊರೆದು ವಿಭೀಷಣಗೆ ಪಟ್ಟ ಕಟ್ಟಿದ ಮಂತ್ರ || ಜ್ಞಾನನಿಧಿ ನಮ್ಮ ಆನಂದತೀರ್ಥರು ಸಾನುರಾಗದಿ ನಿತ್ಯ ಸೇವಿಪ ಮಂತ್ರ ಭಾನುಕುಲಾಂಬುಧಿ ಸೋಮನೆನಿಪ ನಮ್ಮ ದೀನರಕ್ಷಕ ಪುರಂದರವಿಠಲನ ಮಂತ್ರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು