ವೇಣುನಾದ ಬಾರೋ ಶ್ರೀ ವೇಂಕಟರಮಣ ಬಾರೋ

ರಾಗ ಶಂಕರಾಭರಣ/ಆದಿ ತಾಳ ವೇಣುನಾದ ಬಾರೋ ಶ್ರೀ ವೇಂಕಟರಮಣ ಬಾರೋ ಬಾಣನ ಭಂಗಿಸಿದಂಥ ಭಾವಜನಯ್ಯನೆ ಬಾರೋ || ಪಲ್ಲವಿ || ಪೂತನಿಯ ಮೊಲೆಯುಂಡ ನವನೀತ ಚೋರನೆ ಬಾರೋ ಭೀತ ರಾವಣನ ಸಂಹರಿಸಿದ ಸೀತಾನಾಯಕ ಬಾರೋ || ೧ || ಬಿಲ್ಲ ಮುರಿದು ಮಲ್ಲರ ಗೆದ್ದ ಫುಲ್ಲಭನಾಭನೆ ಬಾರೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸೀತೆಯ ಭೂಮಿ ಜಾತೆಯ

ಸೀತೆಯ ಭೂಮಿ ಜಾತೆಯ

ಜಗನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಸೀತೆಯ||

 

ಕ್ಷೀರವಾರಿಧಿಯ ಕುಮಾರಿಯ ತನ್ನ

ಸೇರಿದವರ ಭಯಹಾರೆಯ

ತೋರುವಳು ಮುಕ್ತಿದಾರಿಯ

ಸರ್ವಸಾರ ಸುಂದರ ಶ್ರೀ ನಾರಿಯ ||ಸೀತೆಯ||

 

ವಿಜಯ ವಿಠಲನ ರಾಣಿಯ

ಪಂಕಜ ಮಾಲೆ ಪಿಡಿದ ಪಾಣಿಯ

ವಿಜಯಲಕ್ಷ್ಮಿ ಗಜಗಮನೆಯ

ಸುಜನ ವಂದಿತೆ ಅಳಿವೇಣಿಯ ||ಸೀತೆಯ||

ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಶ್ರೀ ಪುರಂದರದಾಸರು - ಎಮ್.ಎಲ್.ವಸಂತಕುಮಾರಿ ಅವರಿಂದ ಕಿರುಬರಹ

ಸಂಗೀತ ಕಲಾನಿಧಿ ಡಾ.ಎಮ್.ಎಲ್. ವಸಂತಕುಮಾರಿ ಅವರು ಪುರಂದರದಾಸರ ರಚನೆಗಳು ಹಾಡುಗಾರಿಕೆಯಲ್ಲಿ ಕರ್ನಾಟಕದ ಹೊರಗೆ ಪ್ರಸಿದ್ಧಿಯನ್ನು ಪಡೆಯಲು ಕಾರಣರಾದವರಲ್ಲಿ ಒಬ್ಬ ಮುಖ್ಯ ಸಂಗೀತಗಾರರು. ಅವರ ಒಂದು ಬರಹ ಇಲ್ಲಿದೆ: ಮೂಲ ತಮಿಳು ಲೇಖನ: ಡಾ.ವಸಂತಕುಮಾರಿ

ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ

ಪಲ್ಲವಿ: ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ ಪಾಮರ ಜನರಿಗೆ ಸಾಮಾನ್ಯವಲ್ಲ ಅನುಪಲ್ಲವಿ: ಸಾಮಜ ವರದನ ಪ್ರೇಮದಿ ನೆನೆವುದು ತಾಮಸ ಬುದ್ಧಿಯ ತಾ ತಗ್ಗಿಸದೆ ಚರಣಗಳು: 1: ಅಂತರ ಮಲಿನವಳಿಯಬೇಕು ಸಂತತ ಶ್ರವಣದಿ ಶ್ರೀಕಾಂತನ ಚರಿತ ಕೇಳಲು ಬೇಕು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನಿರಲು ನಮಗೇತರ ಭಯವೋ

ರಾಗ ಕಾಪಿ/ಚಾಪು ತಾಳ ನೀನಿರಲು ನಮಗೇತರ ಭಯವೋ ಸನಕಾದಿ ಪ್ರಿಯ ತಿರುವೇಂಗಳಯ್ಯ || ಪಲ್ಲವಿ || ಚರಣದಿಂದುದಿಸಿದವಳ ಸುತನ ಮೊಮ್ಮಗನ ಸತಿ ಭರದಿಂದ ನಿಮ್ಮ ಸ್ತೋತ್ರ ಮಾಡಲು ಹರುಷದಿಂದ ಕೇಳಿ ನಲಿದೈವರ ನಾರಿ ಲಜ್ಜೆಯ ಕಾಯಿದ ಕರುಣ ದಯಾಸಿಂಧು || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ

ರಾಗ ತೋಡಿ/ಅಟ್ಟ ತಾಳ ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ || ಪಲ್ಲವಿ || ಚಾರತನವ ಬಿಡೊ ಜಾನಕಿರಮಣನೆ ನಾರಿಯರೆಲ್ಲರು ನವನೀತ ಚೋರನೆಂದು ದೂರು ಹೇಳಲಿ ಸಾರಿ ಓಡಿದ ಶ್ರೀ ನೀಲಗಿರಿವಾಸ || ಅನು ಪಲ್ಲವಿ || ಅನಿರುಧ್ದ ಜನಾರ್ಧನ ಆನಂದ ನಿಲಯ ಹರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕನಸುಕಂಡೆನೆ ಮನದಲ್ಲಿ

ರಾಗ ದ್ವಿಜಾನಂತಿ/ಅಟ್ಟ ತಾಳ ಕನಸುಕಂಡೆನೆ ಮನದಲ್ಲಿ ಕಳವಳಗೊಂಡೆನೆ ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ || ಪಲ್ಲವಿ || ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ ಪೋಲ್ವ ನಾಮವ ಇಟ್ಟು ಅಂದುಗೆ ಘಲುಗೆನ್ನುತ ಎನ ಮುಂದೆ ಬಂದು ನಿಂತಿದ್ದನಲ್ಲೆ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೇಂಕಟೇಶ ದಯಮಾಡೋ

ರಾಗ ಆನಂದ ಭೈರವಿ/ಅಟ್ಟ ತಾಳ ವೇಂಕಟೇಶ ದಯಮಾಡೋ ವೇದವೇದ್ಯನೆ ಪಂಕಜಾಕ್ಷ ಅಭಯವಿತ್ತು ರಕ್ಷಿಸೆನ್ನ ಬೇಗನೆ || ಪಲ್ಲವಿ || ಚಿತ್ತ ಚಂಚಲವ ಬಿಡಿಸೋ ಮತ್ತೆ ಕ್ರೋಧವ ಓಡಿಸೊ ಭಾಂತಿ ವಿಷಯಂಗಳು ಬೇಡ ಕಂತುಪಿತ ನಾರಾಯಣ || ೧ || ಸೃಷ್ಟಿ ಮೂರರೊಳಗೆ ನೀನೆ ಕಷ್ಟಬಡಿಸುವರೇನೊ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾನೇನು ಮಾಡಿದೆನೋ

ರಾಗ ಮೋಹನ/ಅಟ್ಟ ತಾಳ ನಾನೇನು ಮಾಡಿದೆನೋ ವೆಂಕಟರಾಯ ನೀನೆನ್ನ ಕಾಯಬೇಕೋ || ಪಲ್ಲವಿ || ಮಾನಾಪಮಾನವು ನಿನ್ನದು ಎನಗೇನು ದೀನರಕ್ಷಕ ತಿರುಪತಿಯ ವೆಂಕಟರಾಯ || ಅನು ಪಲ್ಲವಿ || ರಕ್ಕಸನಲ್ಲವೇನೋ ಪ್ರಹ್ಲಾದನು ಚಿಕ್ಕವ ಧ್ರುವನಲ್ಲವೆ ಉಕ್ಕಿ ಬರುವ ಕರ್ಮ ಮಾಡಿದಜಮಿಳ ನಿಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣ ಎನ್ನಿರೋ

ರಾಗ ಕಮಾಚ್/ಅಟ್ಟ ತಾಳ ನಾರಾಯಣ ಎನ್ನಿರೋ, ಶ್ರೀ ನರಹರಿ ಪಾರಾಯಣ ಮಾಡಿರೋ || ಪಲ್ಲವಿ || ನಾರಾಯಣನೆಂದು ಅಜಮಿಳನು ಕೈವಲ್ಯ ಸೇರಿದನೆಂಬೊ ಸುದ್ದಿಯ ಕೇಳಿ ಅರಿಯಿರಾ || ಅನು ಪಲ್ಲವಿ || ಕಾಶಿಗೆ ಹೋಗಲೇಕೆ, ಕಾವಡಿ ಪೊತ್ತು ಬೇಸತ್ತು ತಿರುಗಲೇಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು