ಕ್ಷೇತ್ರ ದರ್ಶನ

ಕಂದನ ಕಾಣಿರೇನೆ ಗೋಪಿಯ ಕಂದ

ರಾಗ ಸಾವೇರಿ/ಚಾಪು ತಾಳ ಕಂದನ ಕಾಣಿರೇನೆ ಗೋಪಿಯ ಕಂದ || ಪಲ್ಲವಿ || ಕಂದನಲ್ಲವೆ ಎನ್ನ ಕುಂದಣದರಗಿಣಿಯೆ || ಅನು ಪಲ್ಲವಿ || ಉಂಗುರನಿಟ್ಟಿದ್ದೆ ಉಡಿದಾರ ಕಟ್ಟಿದ್ದೆ ಬಂಗಾರದ ಟೊಪ್ಪಿಗೆ ತಲೆಯ ಮೇಲಿಟ್ಟ || ೧ || ರೊಟ್ಟಿಯ ಸುಟ್ಟಿದ್ದೆ ತುಪ್ಪವ ಕಾಸಿದ್ದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡು ಕಂಡು ನೀಯೆನ್ನ ಕೈಬಿಡುವರೆ

ರಾಗ ಮೋಹನ/ಖಂಡಚಾಪು ಕಂಡು ಕಂಡು ನೀಯೆನ್ನ ಕೈಬಿಡುವರೆ ಪುಂಡರೀಕಾಕ್ಷ ಪುರುಷೋತ್ತಮ ಹರೇ || ಪಲ್ಲವಿ || ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನೈ ನೀರಜಾಕ್ಷ ತಂದೆತಾಯಿಯು ನೀನೆ ಬಂಧುಬಳಗವು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುರಹರ ನಗಧರ ನೀನೆ ಗತಿ

ರಾಗ ಆರಭಿ/ತಾಳ ಆದಿ ಮುರಹರ ನಗಧರ ನೀನೆ ಗತಿ || ಪಲ್ಲವಿ || ಧರಣೀ ಲಕ್ಷ್ಮೀಕಾಂತ ನೀನೆ ಗತಿ || ಅನುಪಲ್ಲವಿ || ಶಕಟಮರ್ದನ ಶರಣಾಗತವತ್ಸಲ ಮಕರ ಕುಂಡಲಧರ ನೀನೆ ಗತಿ ಅಕಳಂಕಚರಿತ ಆದಿನಾರಾಯಣ ರುಕುಮಿಣಿಪತಿ ಕೃಷ್ಣ ನೀನೆ ಗತಿ || ೧ || ಮನೆಮನೆಗಳ ಪೊಕ್ಕು ಕೆನೆ ಹಾಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೇಣುನಾದ ಬಾರೋ ಶ್ರೀ ವೇಂಕಟರಮಣ ಬಾರೋ

ರಾಗ ಶಂಕರಾಭರಣ/ಆದಿ ತಾಳ ವೇಣುನಾದ ಬಾರೋ ಶ್ರೀ ವೇಂಕಟರಮಣ ಬಾರೋ ಬಾಣನ ಭಂಗಿಸಿದಂಥ ಭಾವಜನಯ್ಯನೆ ಬಾರೋ || ಪಲ್ಲವಿ || ಪೂತನಿಯ ಮೊಲೆಯುಂಡ ನವನೀತ ಚೋರನೆ ಬಾರೋ ಭೀತ ರಾವಣನ ಸಂಹರಿಸಿದ ಸೀತಾನಾಯಕ ಬಾರೋ || ೧ || ಬಿಲ್ಲ ಮುರಿದು ಮಲ್ಲರ ಗೆದ್ದ ಫುಲ್ಲಭನಾಭನೆ ಬಾರೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನಿರಲು ನಮಗೇತರ ಭಯವೋ

ರಾಗ ಕಾಪಿ/ಚಾಪು ತಾಳ ನೀನಿರಲು ನಮಗೇತರ ಭಯವೋ ಸನಕಾದಿ ಪ್ರಿಯ ತಿರುವೇಂಗಳಯ್ಯ || ಪಲ್ಲವಿ || ಚರಣದಿಂದುದಿಸಿದವಳ ಸುತನ ಮೊಮ್ಮಗನ ಸತಿ ಭರದಿಂದ ನಿಮ್ಮ ಸ್ತೋತ್ರ ಮಾಡಲು ಹರುಷದಿಂದ ಕೇಳಿ ನಲಿದೈವರ ನಾರಿ ಲಜ್ಜೆಯ ಕಾಯಿದ ಕರುಣ ದಯಾಸಿಂಧು || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ

ರಾಗ ತೋಡಿ/ಅಟ್ಟ ತಾಳ ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ || ಪಲ್ಲವಿ || ಚಾರತನವ ಬಿಡೊ ಜಾನಕಿರಮಣನೆ ನಾರಿಯರೆಲ್ಲರು ನವನೀತ ಚೋರನೆಂದು ದೂರು ಹೇಳಲಿ ಸಾರಿ ಓಡಿದ ಶ್ರೀ ನೀಲಗಿರಿವಾಸ || ಅನು ಪಲ್ಲವಿ || ಅನಿರುಧ್ದ ಜನಾರ್ಧನ ಆನಂದ ನಿಲಯ ಹರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕನಸುಕಂಡೆನೆ ಮನದಲ್ಲಿ

ರಾಗ ದ್ವಿಜಾನಂತಿ/ಅಟ್ಟ ತಾಳ ಕನಸುಕಂಡೆನೆ ಮನದಲ್ಲಿ ಕಳವಳಗೊಂಡೆನೆ ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ || ಪಲ್ಲವಿ || ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ ಪೋಲ್ವ ನಾಮವ ಇಟ್ಟು ಅಂದುಗೆ ಘಲುಗೆನ್ನುತ ಎನ ಮುಂದೆ ಬಂದು ನಿಂತಿದ್ದನಲ್ಲೆ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೇಂಕಟೇಶ ದಯಮಾಡೋ

ರಾಗ ಆನಂದ ಭೈರವಿ/ಅಟ್ಟ ತಾಳ ವೇಂಕಟೇಶ ದಯಮಾಡೋ ವೇದವೇದ್ಯನೆ ಪಂಕಜಾಕ್ಷ ಅಭಯವಿತ್ತು ರಕ್ಷಿಸೆನ್ನ ಬೇಗನೆ || ಪಲ್ಲವಿ || ಚಿತ್ತ ಚಂಚಲವ ಬಿಡಿಸೋ ಮತ್ತೆ ಕ್ರೋಧವ ಓಡಿಸೊ ಭಾಂತಿ ವಿಷಯಂಗಳು ಬೇಡ ಕಂತುಪಿತ ನಾರಾಯಣ || ೧ || ಸೃಷ್ಟಿ ಮೂರರೊಳಗೆ ನೀನೆ ಕಷ್ಟಬಡಿಸುವರೇನೊ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾನೇನು ಮಾಡಿದೆನೋ

ರಾಗ ಮೋಹನ/ಅಟ್ಟ ತಾಳ ನಾನೇನು ಮಾಡಿದೆನೋ ವೆಂಕಟರಾಯ ನೀನೆನ್ನ ಕಾಯಬೇಕೋ || ಪಲ್ಲವಿ || ಮಾನಾಪಮಾನವು ನಿನ್ನದು ಎನಗೇನು ದೀನರಕ್ಷಕ ತಿರುಪತಿಯ ವೆಂಕಟರಾಯ || ಅನು ಪಲ್ಲವಿ || ರಕ್ಕಸನಲ್ಲವೇನೋ ಪ್ರಹ್ಲಾದನು ಚಿಕ್ಕವ ಧ್ರುವನಲ್ಲವೆ ಉಕ್ಕಿ ಬರುವ ಕರ್ಮ ಮಾಡಿದಜಮಿಳ ನಿಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೇಂಕಟೇಶ ಬೇಡಿಕೊಂಬೆ

ರಾಗ ಆರಭಿ/ಆದಿ ತಾಳ ವೇಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ, ಬ್ರಹ್ಮ || ಪಲ್ಲವಿ || ಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ || ಅನು ಪಲ್ಲವಿ || ನಷ್ಟ ಮೊದಲಾದಂಥ ಕಷ್ಟ ಬಿಡಿಸೋ, ನಿನ್ನ ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ ಇಷ್ಟ ಭಕ್ತ ಜನರೊಳು ಎನ್ನ ಸೇರಿಸೊ ಈ
ದಾಸ ಸಾಹಿತ್ಯ ಪ್ರಕಾರ