ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ

ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ

ರಾಗ ತೋಡಿ/ಅಟ್ಟ ತಾಳ ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ || ಪಲ್ಲವಿ || ಚಾರತನವ ಬಿಡೊ ಜಾನಕಿರಮಣನೆ ನಾರಿಯರೆಲ್ಲರು ನವನೀತ ಚೋರನೆಂದು ದೂರು ಹೇಳಲಿ ಸಾರಿ ಓಡಿದ ಶ್ರೀ ನೀಲಗಿರಿವಾಸ || ಅನು ಪಲ್ಲವಿ || ಅನಿರುಧ್ದ ಜನಾರ್ಧನ ಆನಂದ ನಿಲಯ ಹರಿ ಮುನಿ ಮೌನಿ ಸಹವಾಸ ಮುಚುಕುಂದ ವರದ ಘನ ನೀಲ ಮೇಘಶ್ಯಾಮ ಕಾಮಿತಾರ್ಥ ಕಮಲನಾಭ ಸನಕಾದಿವಂದ್ಯ ಸಾಗರಶಯನ ಸಾರಸನೇತ್ರ ಶಾಶ್ವತರೂಪ || ೧ || ಮುದ್ದುಕೊಟ್ಟೇನು ಬಾರೊ ಮುನಿಸದೇತಕೊ ತಂದೆ ಬುದ್ಧಿಕೇಳಯ್ಯ ನಮ್ಮ ಭದ್ರಾದಿರಮಣ ಹದ್ದನು ಏರಿಕೊಂಡು ಅಮರರ ಕೂಡಿ ಆಡಿ ಬುದ್ದನಾಥನೆ ಬೆಣ್ಣೆಕದ್ದ ಕಳ್ಳನೆ ಕಸ್ತೂರಿ ರಂಗನೆ || ೨ || ನರಹರಿ ಮಾಧವ ವಿಷ್ಣು ನಂದನಂದನನೆ ಶರಧಿ ಬಂಧನ ನಿನಗೆ ಶರಣುವ ಹೊಂದಿದೆ ಸೇರಿದ ಮೇಲೆ ನಿನ್ನ ಬೆರೆದ ಅಪ್ಪಯ್ಯ ರಂಗ ಶರಣಮಂದಾರ ಶೇಷಗಿರೀಶ ವರದ ಪುರಂದರವಿಠಲ || ೩ || ~~~*~~~ ಆನಂದನಿಲಯ - ಬೆಟ್ಟದ ಮೇಲಿನ ಗುಡಿಯಲ್ಲಿರುವ ವಿಮಾನದ ಹೆಸರು ಮುನಿಸದೇತಕೊ - ಮುನಿಸುವುದೇತಕೋ; ಸಿಟ್ಟುಗೊಳ್ಳುವುದು ಯಾತಕ್ಕೆ. ಭದ್ರಾದಿರಮಣ - ಭದ್ರಾಚಲದಲ್ಲಿರುವ ದೇವರು ಹದ್ದನು - ಗರುಡನನ್ನು ಶರಧಿ ಬಂಧನ - ರಾಮಾವತಾರದಲ್ಲಿ. [ಪುರಂದರ ಸಾಹಿತ್ಯ ದರ್ಶನ - ಭಾಗ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು