ವೇಂಕಟೇಶ ದಯಮಾಡೋ

ವೇಂಕಟೇಶ ದಯಮಾಡೋ

ರಾಗ ಆನಂದ ಭೈರವಿ/ಅಟ್ಟ ತಾಳ ವೇಂಕಟೇಶ ದಯಮಾಡೋ ವೇದವೇದ್ಯನೆ ಪಂಕಜಾಕ್ಷ ಅಭಯವಿತ್ತು ರಕ್ಷಿಸೆನ್ನ ಬೇಗನೆ || ಪಲ್ಲವಿ || ಚಿತ್ತ ಚಂಚಲವ ಬಿಡಿಸೋ ಮತ್ತೆ ಕ್ರೋಧವ ಓಡಿಸೊ ಭಾಂತಿ ವಿಷಯಂಗಳು ಬೇಡ ಕಂತುಪಿತ ನಾರಾಯಣ || ೧ || ಸೃಷ್ಟಿ ಮೂರರೊಳಗೆ ನೀನೆ ಕಷ್ಟಬಡಿಸುವರೇನೊ ನಷ್ಟ ತನ್ನ ನೋಡಬೇಡೊ ದೃಷ್ಟಿಸಿ ನೋಡೊ ದಯಾಳೊ || ೨ || ಭಾಳ ಅಪರಾಧಿ ನಾನು ನಿನ್ನ ಬಳಿಗೆ ಬಂದೆ ನಾನು ಒಲಿದು ಎನ್ನ ರಕ್ಷಿಸಯ್ಯ ಮೇಲುಗಿರಿ ಪುರಂದರವಿಠಲ || ೩ || ~~~*~~~ ಸೃಷ್ಟಿ ಮೂರರೊಳಗೆ - ಮೂರು ಲೋಕದಲ್ಲಿ. ದೃಷ್ಟಿಸಿ ನೋಡೋ - ನನ್ನ ಕಡೆ ಕಣ್ಣನ್ನು ಹರಿಸು. ಭಾಳ - ಬಹಳ ಮೇಲುಗಿರಿ - ಏಳು ಬೆಟ್ಟಗಳಲ್ಲಿ ಮೇಲಿನದು, ವೆಂಕಟಾಚಲ. [ ಪುರಂದರ ಸಾಹಿತ್ಯ ದರ್ಶನ - ಭಾಗ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು