ವೇಂಕಟಾಚಲನಿಲಯಂ

ರಾಗ ಸಿಂಧು ಭೈರವಿ/ತಾಳ ಆದಿ ವೇಂಕಟಾಚಲನಿಲಯಂ ವೈಕುಂಠಪುರವಾಸಂ ಪಂಕಜನೇತ್ರಂ ಪರಮಪವಿತ್ರಂ ಶಂಖಚಕ್ರಧರಂ ಚಿನ್ಮಯರೂಪಂ || ಪಲ್ಲವಿ || ಅಂಬುಜೋಧ್ಭವ ವಿನುತಂ ಅಗಣಿತಗುಣನಾಮಂ ತುಂಬುರುನಾರದ ಗಾನವಿಲೋಲಂ ಅಂಬುಧಿಶಯನಂ ಆತ್ಮಾಭಿರಾಮಂ || ೧ || ನೌಮಿ ಪಾಂಡವ ಪಕ್ಷಂ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೇಂಕಟರಮಣನೆ ಬಾರೊ

ರಾಗ ಶಂಕರಾಭರಣ/ಅಟ್ಟ ತಾಳ ವೇಂಕಟರಮಣನೆ ಬಾರೊ ಶೇಷಾಚಲವಾಸನೆ ಬಾರೊ ಪಂಕಜನಾಭ ಪರಮ ಪವಿತ್ರ ಶಂಕರಮಿತ್ರನೆ ಬಾರೊ || ಪಲ್ಲವಿ || ಮುದ್ದು ಮುಖದ ಮಗುವೆ ನಿನಗೆ ಮುದ್ದು ಕೊಡುವೆನು ಬಾರೊ ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೊ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿಯೆನ್ನು, ಹರಿಯೆನ್ನು...

ರಾಗ ಕಾಪಿ/ಅಟ್ಟ ತಾಳ ಹರಿಯೆನ್ನು, ಹರಿಯೆನ್ನು, ಹರಿಯೆನ್ನು ಪ್ರಾಣಿ || ಪಲ್ಲವಿ || ಹರಿಯೆನ್ನದಿದ್ದರೆ ನರಹರಿಯಾಣಿ || ಅನು ಪಲ್ಲವಿ || ಹೆಂಡಿರು ಮಕ್ಕಳು ಹೆರವರು ಪ್ರಾಣಿ ಕೊಂಡು ಹೋಗುವಾಗ ಒಬ್ಬರ ಕಾಣಿ || ೧ || ದಾನವಿಲ್ಲದೆ ದ್ರವ್ಯ ಗಳಿಸಿದೆ ಪ್ರಾಣಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಮ ರಾಮೆನ್ನಿರೋ...

ರಾಗ ಸೌರಾಷ್ಟ್ರ/ಅಟ್ಟ ತಾಳ ರಾಮ ರಾಮೆನ್ನಿರೋ ನರಜನ್ಮ ಸ್ಥಿರವಲ್ಲ ರಾಮ ರಾಮ || ಪಲ್ಲವಿ || ಇಂಥ ಕೋಮಲಾಂಗನ ನಾಮ ಆ ವೇಳೆಗೊದಗದು ರಾಮ ರಾಮ || ಅನುಪಲ್ಲವಿ || ಆರಿಗೆ ಆರಿಲ್ಲ ತನಗೆ ತಾನಲ್ಲದೆ ರಾಮ ರಾಮ ತನ್ನ ನಾರಿಯು ಮೊದಲಾದವರು ಸರಿ ಬಾರರು ರಾಮ ರಾಮ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಧುಕರ ವೃತ್ತಿ ಎನ್ನದು

ರಾಗ ಭೈರವಿ /ಆದಿ ತಾಳ ಮಧುಕರ ವೃತ್ತಿ ಎನ್ನದು ಅದು ಬಲು ಚೆನ್ನದು || ಪಲ್ಲವಿ || ಪದುಮನಾಭನ ಪಾದಪದುಮ ಮಧುಪವೆಂಬ || ಅನು ಪಲ್ಲವಿ || ಕಾಲಿಗೆ ಗೆಜ್ಜೆ ಕಟ್ಟಿ ನೀಲ ವರ್ಣನ ಗುಣ ಆಲಾಪಿಸುತ್ತ ಬಲು ಓಲಗ ಮಾಡುವಂಥ || ೧ || ರಂಗನಾಥನ ಗುಣ ಹಿಂಗದೆ ಪಾಡುತ್ತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ

ರಾಗ ನವರೋಜು /ಆದಿ ತಾಳ ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ || ಪಲ್ಲವಿ || ಕಣಕ ಕುಟ್ಟೋ ಅಲ್ಲಿಗೆ ಹೋಗಿ ಹಣಿಕಿ ಇಣಿಕಿ ನೋಡುವಿರಿ ಕಣಕ ಕುಟ್ಟೋ ಒನಕೆಲಿ ಬಡಿದರೆ ಕುಂಯಿ ಕುಂಯಿ ರಾಗವ ಹಾಡುವಿರಿ || ೧ || ಹುಗ್ಗಿ ಮಾಡೋ ಅಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡುವಿರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಮಾ ಸಮುದ್ರನ ಕುಮಾರಿ ನಿನ್ನಯ ಸಮಾನರ್ಯಾರಮ್ಮ ...

ಆರಭಿ - ಆದಿತಾಳ ರಮಾ ಸಮುದ್ರನ ಕುಮಾರಿ ನಿನ್ನಯ ಸಮಾನರ್ಯಾರಮ್ಮ |ಪ| ಸುಮಾಸ್ತ್ರನಯ್ಯನೆದೆ ಮೇಲೆ ಸತತ ಬ ಹುಮಾನದಲಿ ಮೆರೆವ ಮಹಾಮಹಿಮಳೇ |ಅ| ಕನಕ ಮುಕುಟ ಮಂಡಿತ ಕುಟಲಾಳಕಜಾಲೇ | ಶ್ರೀ ಚಂ ದನ ಕುಂಕುಮ ಕಸ್ತುರಿ ತಿಲಕಾಂಕಿತ ಫಾಲೇ|
ದಾಸ ಸಾಹಿತ್ಯ ಪ್ರಕಾರ

ಕರುಣದಿ ಕಣ್ಣು ತೆರೆಯೆ ...

ಧನಾಸರಿ - ಆದಿತಾಳ ಕರುಣದಿ ಕಣ್ಣು ತೆರೆಯೆ | ಬಾರಮ್ಮ ಸಿರಿಯೇ |ಪ| ಧರಣಿಯೊಳಗೆ ಸುಂ | ದರತರ ಕೊಲ್ಹಾ ಪುರ ಸಿಂಹಾಸನದಿ ಮೆರೆವ ದೊರಿಯೆ |ಅ| ವಿಧಿ ಭವಾದಿಗಳ ಸದನಗಳಿಗೆ ಅ ಭ್ಯುದಯ ಕಟಾಕ್ಷದ ಸುಧೆಯವಗರೆಯೆ ಸುಂದರಾನನರವಿಂದದ ಮಲ್ಲಿಗೆ ಮಂದಹಾಸ ಮಕರಂದವ ಸುರಿಯೆ
ದಾಸ ಸಾಹಿತ್ಯ ಪ್ರಕಾರ

ವಾಸುದೇವನಾಶ್ರಯಿಸದ ...

ಬೇಹಾಗ್ - ಆದಿತಾಳ ವಾಸುದೇವನಾಶ್ರಯಿಸದ ಉಪಾಸನ್ಯಾತಕೆ| ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ|| |ಪ| ಹೃದಯ ಶುದ್ಧವಾಗದೆ ಉದಯ ಸ್ನಾನವ್ಯಾತಕೆ ಬದಿಯಲಿಹ ಸುವಸ್ತುಕಾಣದ ಜ್ಞಾನವ್ಯಾತಕೆ ಉದರಕುದಿಯು ಶಾಂತಿ ಹೊಂದದ ಸಾಧನವ್ಯಾತಕೆ
ದಾಸ ಸಾಹಿತ್ಯ ಪ್ರಕಾರ

ಅಲ್ಲಿ ನೋಡಲು ರಾಮ

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ||ಪಲ್ಲವಿ|| ರಾವಣನ ಮೂಲಬಲ ಕಂಡು ಕಪಿಸೇನೆ ಆವಾಗಲೇ ಬೆದರಿ ಓಡಿದವು ಈವೇಳೆ ನರನಾಗಿ ಇರಬಾರದೆಂದೆಣಿಸಿ ದೇವ ರಾಮಚ್ಂದ್ರ ಜಗವೆಲ್ಲಾ ತಾನಾದ||1|| ಅವನಿಗೆ ಇವ ರಾಮ ಇವನಿಗೆ ಅವ ರಾಮ
ದಾಸ ಸಾಹಿತ್ಯ ಪ್ರಕಾರ
ಬರೆದವರು