ತಿರುಪತಿ

ವೇಣುನಾದ ಬಾರೋ ಶ್ರೀ ವೇಂಕಟರಮಣ ಬಾರೋ

ರಾಗ ಶಂಕರಾಭರಣ/ಆದಿ ತಾಳ ವೇಣುನಾದ ಬಾರೋ ಶ್ರೀ ವೇಂಕಟರಮಣ ಬಾರೋ ಬಾಣನ ಭಂಗಿಸಿದಂಥ ಭಾವಜನಯ್ಯನೆ ಬಾರೋ || ಪಲ್ಲವಿ || ಪೂತನಿಯ ಮೊಲೆಯುಂಡ ನವನೀತ ಚೋರನೆ ಬಾರೋ ಭೀತ ರಾವಣನ ಸಂಹರಿಸಿದ ಸೀತಾನಾಯಕ ಬಾರೋ || ೧ || ಬಿಲ್ಲ ಮುರಿದು ಮಲ್ಲರ ಗೆದ್ದ ಫುಲ್ಲಭನಾಭನೆ ಬಾರೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀನಿರಲು ನಮಗೇತರ ಭಯವೋ

ರಾಗ ಕಾಪಿ/ಚಾಪು ತಾಳ ನೀನಿರಲು ನಮಗೇತರ ಭಯವೋ ಸನಕಾದಿ ಪ್ರಿಯ ತಿರುವೇಂಗಳಯ್ಯ || ಪಲ್ಲವಿ || ಚರಣದಿಂದುದಿಸಿದವಳ ಸುತನ ಮೊಮ್ಮಗನ ಸತಿ ಭರದಿಂದ ನಿಮ್ಮ ಸ್ತೋತ್ರ ಮಾಡಲು ಹರುಷದಿಂದ ಕೇಳಿ ನಲಿದೈವರ ನಾರಿ ಲಜ್ಜೆಯ ಕಾಯಿದ ಕರುಣ ದಯಾಸಿಂಧು || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ

ರಾಗ ತೋಡಿ/ಅಟ್ಟ ತಾಳ ಬಾರೋ ಬಾರಯ್ಯ ನಮ್ಮ ಬಾಲ ಗೋಪಾಲಕೃಷ್ಣ || ಪಲ್ಲವಿ || ಚಾರತನವ ಬಿಡೊ ಜಾನಕಿರಮಣನೆ ನಾರಿಯರೆಲ್ಲರು ನವನೀತ ಚೋರನೆಂದು ದೂರು ಹೇಳಲಿ ಸಾರಿ ಓಡಿದ ಶ್ರೀ ನೀಲಗಿರಿವಾಸ || ಅನು ಪಲ್ಲವಿ || ಅನಿರುಧ್ದ ಜನಾರ್ಧನ ಆನಂದ ನಿಲಯ ಹರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕನಸುಕಂಡೆನೆ ಮನದಲ್ಲಿ

ರಾಗ ದ್ವಿಜಾನಂತಿ/ಅಟ್ಟ ತಾಳ ಕನಸುಕಂಡೆನೆ ಮನದಲ್ಲಿ ಕಳವಳಗೊಂಡೆನೆ ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ || ಪಲ್ಲವಿ || ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ ಪೋಲ್ವ ನಾಮವ ಇಟ್ಟು ಅಂದುಗೆ ಘಲುಗೆನ್ನುತ ಎನ ಮುಂದೆ ಬಂದು ನಿಂತಿದ್ದನಲ್ಲೆ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೇಂಕಟೇಶ ದಯಮಾಡೋ

ರಾಗ ಆನಂದ ಭೈರವಿ/ಅಟ್ಟ ತಾಳ ವೇಂಕಟೇಶ ದಯಮಾಡೋ ವೇದವೇದ್ಯನೆ ಪಂಕಜಾಕ್ಷ ಅಭಯವಿತ್ತು ರಕ್ಷಿಸೆನ್ನ ಬೇಗನೆ || ಪಲ್ಲವಿ || ಚಿತ್ತ ಚಂಚಲವ ಬಿಡಿಸೋ ಮತ್ತೆ ಕ್ರೋಧವ ಓಡಿಸೊ ಭಾಂತಿ ವಿಷಯಂಗಳು ಬೇಡ ಕಂತುಪಿತ ನಾರಾಯಣ || ೧ || ಸೃಷ್ಟಿ ಮೂರರೊಳಗೆ ನೀನೆ ಕಷ್ಟಬಡಿಸುವರೇನೊ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾನೇನು ಮಾಡಿದೆನೋ

ರಾಗ ಮೋಹನ/ಅಟ್ಟ ತಾಳ ನಾನೇನು ಮಾಡಿದೆನೋ ವೆಂಕಟರಾಯ ನೀನೆನ್ನ ಕಾಯಬೇಕೋ || ಪಲ್ಲವಿ || ಮಾನಾಪಮಾನವು ನಿನ್ನದು ಎನಗೇನು ದೀನರಕ್ಷಕ ತಿರುಪತಿಯ ವೆಂಕಟರಾಯ || ಅನು ಪಲ್ಲವಿ || ರಕ್ಕಸನಲ್ಲವೇನೋ ಪ್ರಹ್ಲಾದನು ಚಿಕ್ಕವ ಧ್ರುವನಲ್ಲವೆ ಉಕ್ಕಿ ಬರುವ ಕರ್ಮ ಮಾಡಿದಜಮಿಳ ನಿಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೇಂಕಟೇಶ ಬೇಡಿಕೊಂಬೆ

ರಾಗ ಆರಭಿ/ಆದಿ ತಾಳ ವೇಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ, ಬ್ರಹ್ಮ || ಪಲ್ಲವಿ || ಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ || ಅನು ಪಲ್ಲವಿ || ನಷ್ಟ ಮೊದಲಾದಂಥ ಕಷ್ಟ ಬಿಡಿಸೋ, ನಿನ್ನ ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ ಇಷ್ಟ ಭಕ್ತ ಜನರೊಳು ಎನ್ನ ಸೇರಿಸೊ ಈ
ದಾಸ ಸಾಹಿತ್ಯ ಪ್ರಕಾರ

ನಿನ್ನ ನೋಡಿ ಧನ್ಯನಾದೆನೋ

ರಾಗ ಶಂಕರಾಭರಣ/ರೂಪಕ ತಾಳ ನಿನ್ನ ನೋಡಿ ಧನ್ಯನಾದೆನೋ, ಹೇ ಶ್ರೀನಿವಾಸ || ಪಲ್ಲವಿ || ನಿನ್ನ ನೋಡಿ ಧನ್ಯನಾದೆ ಎನ್ನ ಮನೋನಯನಕೀಗ ಲಿನ್ನು ದಯಮಾಡು ಸುಪ್ರಸನ್ನ ಸ್ವಾಮಿ ಪಾಂಡುರಂಗ || ಅನುಪಲ್ಲವಿ || ಪಕ್ಷಿವಾಹನ ಲಕ್ಷ್ಮೀರಮಣ ಲಕ್ಷ್ಮೀ ನಿನ್ನ ವಕ್ಷದಲ್ಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣ ತೇ ನಮೋ ನಮೋ

ರಾಗ ಪೀಲು/ಆದಿ ತಾಳ ನಾರಾಯಣ ತೇ ನಮೋ ನಮೋ ಭವ ನಾರದ ಸನ್ನುತ ನಮೋ ನಮೋ || ಪಲ್ಲವಿ || ಮುರಹರ ನಗಧರ ಮುಕುಂದ ಮಾಧವ ಗರುಡಗಮನ ಪಂಕಜ ನಾಭ ಪರಮಪುರುಷ ಭವ ಭಂಜನ ಕೇಶವ ನರಹರಿ ಶರೀರ ನಮೋ ನಮೋ || ೧ || ಜಲಧಿ ಶಯನ ರವಿ ಚಂದ್ರ ವಿಲೋಚನ ಜಲರುಹ ಭವನುತ ಚರಣ ಯುಗ ಬಲಿಭಂಜನ ಗೋವರ್ಧನವಲ್ಲಭ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾರಮ್ಮಯ್ಯ, ಯದುಕುಲ ವಾರಿಧಿ ಚಂದ್ರಮನ

ರಾಗ ನಾದನಾಮಕ್ರಿಯ/ಆದಿ ತಾಳ ತಾರಮ್ಮಯ್ಯ, ಯದುಕುಲ ವಾರಿಧಿ ಚಂದ್ರಮನ || ಪಲ್ಲವಿ || ಮಾರಜನಕನ ಮೋಹನಾಂಗನ ಸೇರಿ ಸುಖಿಸಲು ಹಾರೈಸಿ ಬಂದೆವು || ಅನು ಪಲ್ಲವಿ || ಬಿಲ್ಲ ಹಬ್ಬಗಳಂತೆ, ಅಲ್ಲಿ ಬೀದಿ ಶೃಂಗಾರವಂತೆ ಮಲ್ಲರ ಕಾಳಗ ಮದ್ದಾನೆಯಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು