ನೀರೆ ನೀ ಕರೆತಾರೆ ಮಾರಸುಂದರನ

(ರಾಗ ಕೋರೆ ಅಟತಾಳ) ನೀರೆ ನೀ ಕರೆತಾರೆ ಮಾರಸುಂದರನ ಮಾರಸುಂದರನ ಸುಕುಮಾರಸುಂದರನ ||ಪ|| ಗೊಲ್ಲರ ಮನೆಯೊಳಗಿದ್ದ ಪಾಲ್ಮೊಸರ ಮೆಲ್ಲನೆ ಮೆಲ್ಲುವ ವಲ್ಲಭ ಶ್ರೀ ಹರಿಯ || ಯಾದವರೆಲ್ಲ ಆದರಿಸಿದನ ವೇದವೇದಾಂತನ ಯಾದವಪ್ರಿಯನ || ವರಗೌರಿಪುರದಲ್ಲಿ ವಾಸವಾಗಿಹನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪತಿಭಕುತಿ ಇಲ್ಲದಿಹ ಸತಿಯ ಸಂಗ

( ರಾಗ ಕಾಂಭೋಜ. ಛಾಪು ತಾಳ) ಪತಿಭಕುತಿ ಇಲ್ಲದಿಹ ಸತಿಯ ಸಂಗ ವ್ರತಗೆಟ್ಟು ಸುಖ ಪಡೆಯಲಿಲ್ಲವೋ ರಂಗ ||ಪ|| ಗಂಡ ಬಂದರೆ ಎದ್ದು ನಿಲ್ಲದೆ ಮಂಚದ ಮೇಲೆ ಚಂದದಲಿ ಕುಳಿತು ಮಾತಾಡುತಿಹಳ ಅಂದೆಲ್ಲವನು ಮೀರಿ ಕಾಡಿ ಬೇಡುವ ಸತಿಯು ಗಂಡುತೊತ್ತಿನ ಸಂಗವಭಿಮಾನ ಭಂಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಂದಾನು ಯಮನು

(ರಾಗ ಪೂರ್ವಿ ಅಟತಾಳ ) ಬಂದಾನು ಯಮನು , ದುಷ್ಟರ ಕೊಂದಾನು ಯಮನು ||ಪ|| ಕೆರೆ ಭಾವಿ ಕಟ್ಟುವರಿಲ್ಲಿ , ದೊಡ್ಡ ದೊರೆತನವಾಳುವರಲ್ಲಿ ಕರೆದೆನ್ನ ಇಕ್ಕುವರಿಲ್ಲಿ , ಸಿರಿಸಂಪನ್ನರಾಗಿಹರಲ್ಲಿ || ಗಂಡನ ಬೈಯುವರಿಲ್ಲಿ , ಯಮದಂಡ ಹೊರಿಸುವರಲ್ಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೋಗಬೇಡ ನಿಗಮಾನುತ ಮಧುರೆಗೆ

(ರಾಗ ದ್ವಿಜಾವಂತಿ ಆದಿತಾಳ) ಹೋಗಬೇಡ ನಿಗಮಾನುತ ಮಧುರೆಗೆ ಹೋಗಬೇಡ ಹರಿಯೇ ||ಪ|| ಪೋಗುವೆ ನೀ ಪುನರಾಗಮವೆಂದಿಗೆ ಹೇಗೆ ತಾಳುವೆವೊ ನಾಗಮರ್ದನ ಕೃಷ್ಣ ||ಅ|| ಬಾಲತನದಲಿ ಬಲು ಲೀಲೆಗಳಿಂದ ಗೋಪಾಲರೊಡಗೂಡಿ ಬಾಳ ಪ್ರೇಮದಿ ನಮ್ಮಾಲಯದೊಳಪೊಕ್ಕು ಪಾಲು ಬೆಣ್ಣೆಯ ಬೇಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹುಶ್ಶೂನ್ನ ಬಣ್ಣದ ಹಕ್ಕಿ

(ರಾಗ ಪಂತುವರಾಳಿ ಅಟತಾಳ) ಹುಶ್ಶೂನ್ನ ಬಣ್ಣದ ಹಕ್ಕಿ ||ಪ|| ನಮ್ಮ ಜಗದೀಶ ರಂಗನ ಒಯ್ದಿರು ಹಕ್ಕಿ ||ಅ|| ಅರಿಯದ ಶಿಶುವನೆ ಗರಿಯ ಮೇಲಿರಿಸಿ ಹರಿದಾಡುವರೆ ಆಕಾಶದಲ್ಲಿ ಮರದ ತುದಿಯ ಮಾವಿನ ಹಣ್ಣ ಸವಿವುತ್ತ ಮರಳಿ ಮರಳಿ ನೀ ಬಾರಣ್ಣ ಹಕ್ಕಿ || ಹಾಳು ಹಾಳಗೊಂಡು ಹಲವು ಬಣ್ಣದ ಹಕ್ಕಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಿಷ ಕುಡಿಯುತೇನೆ ನೋಡು

(ರಾಗ ಪಂತುವರಾಳಿ ಆದಿತಾಳ ) ವಿಷ ಕುಡಿಯುತೇನೆ ನೋಡು , ನೋಡು ಗಂಡ ವಿಷ ಕುಡಿಯುತೇನೆ ನೋಡು ||ಪ|| ವಿಷ ಕುಡಿಯುತೇನೆ ಹಸನಾಗಿರು ಹಂಸದಂತೆ ದೇಹವ ಹತಮಾಡುತೇನೆ ||ಅ|| ಕಬ್ಬಿನ ರಸದೊಳಗೆ , ಗಸಗಸೆ ರುಬ್ಬಿಯೆ ನೀ ಬೆರೆಸಿ ಹಬ್ಬು ಜೇನುತುಪ್ಪ , ತಂಪಿಗೆ ಯಾಲಕ್ಕಿಪುಡಿ ಹಾಕಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡಿ ದಣಿಯವು ಕಂಗಳು

(ರಾಗ ಸಾವೇರಿ ಝಂಪೆ ತಾಳ ) ನೋಡಿ ದಣಿಯವು ಕಂಗಳು ರೂಢಿಯೊಳಗತ್ಯಧಿಕ ರಂಗೇಶನತಿ ಚೆಲುವ || ಪ|| ಕೆಂದಾವರೆಯ ಪೋಲ್ವ ಪದಗಳಿಗೆ ನವರತ್ನ ಅಂದುಗೆಯ ಮೇಲೆ ಹೊಂಗೆಜ್ಜೆ ಪೊಳೆಯೆ ಅಂದದಿಂ ಸಕಲ ದೇವೋತ್ತಮರ ಮುಕುಟದೊಲ- ವಿಂದ ಬೆಳಗುತಿಹ ಕೋಮಲ ಪದಾಬ್ಜಗಳ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡದಿರು ಪರ ಸ್ತ್ರೀಯರ

(ರಾಗ ಆನಂದಭೈರವಿ ಝಂಪೆತಾಳ )

 

ನೋಡದಿರು ಪರ ಸ್ತ್ರೀಯರ ||ಪ||

ನೋಡಿದರೆ ಕೇಡಹದು ತಪ್ಪದಿದಕೋ ||ಅ||

 

ನೋಡಿದರೆ ಸ್ತ್ರೀಹತ್ಯವು, ನುಡಿಸಿ ಮಾತಾಡಿದರೆ ಗೋಹತ್ಯವು

ಕಾಡಿದರೆ ಶಿಶುಹತ್ಯವು ಮೈಗೂಡಿದರೆ ಬ್ರಹ್ಮಹತ್ಯವು ||

 

ಎರಳೆಗಂಗಳರೊಲುಮೆಗೆ ಮರುಳಾಗಿ ಬರಿದೆ ನೀ ಕೆಡಬೇಡವೋ

ದುರುಳ ಯಮಲೋಕದಲ್ಲಿ ಕರೆದೊಯ್ದು ಉರಿಗಂಬವಪ್ಪಿಸುವರೋ ||

 

ಮರುಳು ಮಾನವನೆ ಕೇಳೋ ಪರಸತಿಯು ಉರಿಯೆಂದು ನೋಡು ನಿತ್ಯ

ವರದ ಪುರಂದರವಿಠಲನ ನೆನೆದರೆ ಸ್ಥಿರವಾದ ಮುಕುತಿಯಹುದು ||

ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಒಲುಮೆಗೆ ನಾನು ಈಡೇನೊ

(ರಾಗ ಕಾಂಭೋಜ ಝಂಪೆತಾಳ ) ನಿನ್ನ ಒಲುಮೆಗೆ ನಾನು ಈಡೇನೊ ರಂಗ ||ಪ|| ಸಣ್ಣವನು ನಾನಯ್ಯ ಪನ್ನಗಾಚಲವಾಸ ||ಅ|| ಅಜಿತ ನಾಮಕ ನೀನು, ಅಲ್ಪ ಶಕ್ತನು ನಾನು ಕುಜನ ದೂಷಕ ನೀನು, ಅವರ ಮಿತ್ರನು ನಾನು ವ್ರಜದ ಸ್ತ್ರೀಯರ ಮನವ ಸೂರೆಗೊಂಡ ಸ್ವಾಮಿ ಅಜನ ಪೆತ್ತ ನಿನಗೆ ಸರಿಯಾರು ಪೇಳಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ನಾಮವಿದ್ದರೆ ಸಾಕೋ

(ರಾಗ ಪಂತುವರಾಳಿ/ಕಾಮವರ್ಧನಿ ಅಟ ತಾಳ ) ನಿನ್ನ ನಾಮವಿದ್ದರೆ ಸಾಕೋ ||ಪ|| ಮುನಿದರೆ ಮುನಿ ನಿನ್ನಾಣೆ ಶ್ರೀ ರಾಮ ||ಅ|| ಹೊದ್ದಿದ ಪಾಪವನೆಲ್ಲ ಛಿನ್ನಚಿದ್ರವ ಮಾಡಿ ಖಂಡಿಸಿ ಬಿಡುವ ಎದ್ದರೆ ಸಂಕಟ ಬರುವ ಎನ್ನ ಮುದ್ದಿಸಿ ಮುಂದಕೆ ಮುಕ್ತಿಯ ಕೊಡುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು