ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ

(ರಾಗ ಕಾಂಭೋಜ ಝಂಪೆತಾಳ ) ಈ ಪರಿಯ ಸೊಬಗು ಇನ್ನಾವ ದೇವರಲಿ ಕಾಣೆ ||ಪ|| ಗೋಪೀಜನಪ್ರೀಯ ಗೋಪಾಲಗಲ್ಲದೆ ||ಅ|| ದೊರೆಯತನದಲಿ ನೋಡೆ ಧರಣಿದೇವಿಗೆ ರಮಣ ಸಿರಿಯತನದಲಿ ನೋಡೆ ಶ್ರೀಕಾಂತನು ಹಿರಿಯತನದಲಿ ನೋಡೆ ಸರಸಿಜೋದ್ಭವನಯ್ಯ ಗುರುವುತನದಲಿ ನೋಡೆ ಜಗದಾದಿ ಗುರುವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾಳುವಿಕೆಗಿಂತ ತಪವು ಇಲ್ಲ

ತಾಳುವಿಕೆಗಿಂತ ತಪವು ಇಲ್ಲ ಕೇಳಬಲ್ಲವರಿಗೆ ಹೇಳುವೆನು ಸೊಲ್ಲ| ದುಷ್ಟ ಮನುಜರು ಪೇಳ್ವ ನಿಷ್ಠುರದ ನುಡಿ ತಾಳು ಕಷ್ಟ ಬಂದರೆ ತಾಳು ಕಂಗೆಡದೆ ತಾಳು| ನೆಟ್ಟ ಸಸಿ ಫಲ ಬರುವ ತನಕ ಶಾಂತಿಯ ತಾಳು ಕಟ್ಟು ಬುತ್ತಿಯ ಮುಂದೆ ಉಣಲುಂಟು ತಾಳು|| ಹಳಿದು ಹಂಗಿಸುವಂಥ ಹಗೆಯ ಮಾತನು ತಾಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿ ಭಜನೆ ಮಾಡೋ

ಹರಿ ಭಜನೆ ಮಾಡೋ ನಿರಂತರ |ಪ| ಪರಗತಿಗಿದು ನಿರ್ಧಾರ ನೋಡೊ |ಅ.ಪ| ಮೊದಲೆ ತೋರತದೆ ಮಧುರ ವಿಷಯ ಸುಖ ಕಡೆಯಲ್ಲಿ ದುಃಖ ಅನೇಕ| ವೇದಶಾಸ್ತ್ರಗಳನೋದಿದರೇನು ಸಾಧನೆಗಿದು ನಿರ್ಧಾರ| ಸಾರವೋ ಬಹು ಸಂಸಾರ ವಿಮೋಚಕ ಸೇರೋ ಹಯವದನನ್ನ|
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಡೆ ನಾ ಉಡುಪಿಯ ಕೃಷ್ಣರಾಯನ್ನ

(ರಾಗ ನೀಲಾಂಬರಿ ಅಟತಾಳ) ಕಂಡೆ ನಾ ಉಡುಪಿಯ ಕೃಷ್ಣರಾಯನ್ನ , ಭೂ- ಮಂಡಲದೊಳಗೆ ಉ- ದ್ದಂಡ ಮೋಹಿಪನ ||ಪ|| ಸಮುದ್ರವ ನಾ ಕಂಡು ಸ್ನಾನಾದಿಗಳ ಮಾಡಿ ಚಂದ್ರಮೌಳೀಶ್ವರನ ಚರಣಕೆರಗಿ ಆಮೇಲೆ ನಾಬಂದು ಅನಂತೇಶ್ವರನ್ನ ಕಂಡು ಹನುಮಂತನ ಪಾಡಿ ಮನದಿ ನಿಲಿಸಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜೇನು ಬಂದಿದೆ , ಜನರು ಜೇನು ಕೊಳ್ಳಿರೋ

ರಾಗ ಕಾಂಭೋಜ ಆದಿತಾಳ ಜೇನು ಬಂದಿದೆ , ಜನರು ಜೇನು ಕೊಳ್ಳಿರೋ ||ಪ|| ಮಧುರವಾದ ಕೊಂಬುಜೇನು ಮಾಧವನ ನಾಮಸ್ಮರಣೆ ಸದರವಾದ ಜನರಿಗಿಲ್ಲ ಜನನಮರಣ ಒಯ್ಹಬ್ಯಾಗೆ ಸತ್ತಸಾಯದವರಿಗೆ ಪರ ಇಹಂಗಳೆರಡು ಉಂಟು, ನಮ್ಮ ಪದ್ಮನಾಭನ ನಾಮಸ್ಮರಣೆ ಸದನ ಮಾಡಿಕೊಂಬವರಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಡೊಂಕು ಬಾಲದ ನಾಯಕರೆ

(ರಾಗ ನವರೋಜು ಆದಿತಾಳ) ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ ||ಪ|| ಕಣಕ ಕುಟ್ಟೋ ಅಲ್ಲಿಗೆ ಹೋಗಿ ಹಣಿಕಿ ಹಣಿಕಿ ನೋಡುವಿರಿ ಕಣಕ ಕುಟ್ಟೋ ಒನಕೆಲಿ ಬಡೆದರೆ ಕೈಂ ಕುಂಯಿ ರಾಗವ ಮಾಡುವಿರಿ || ಹುಗ್ಗಿ ಮಾಡೋ ಅಲ್ಲಿಗೆ ತಗ್ಗಿ ಬಗ್ಗಿ ನೋಡುವಿರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರುಣಾಕರ ನೀನೆಂಬುವದೇತಕೋ

(ರಾಗ ಧನಶ್ರೀ ಆದಿತಾಳ ) ಕರುಣಾಕರ ನೀನೆಂಬುವದೇತಕೋ ಭರವಸೆಯಿಲ್ಲೆನಗೆ ||ಪ|| ಪರಿಪರಿಯಲಿ ಈ ಜನ್ಮವನಿತ್ತು ತಿರುಗಿ ತಿರುಗಿ ಮನ ಕರಗಿಸುವುದ ಕಂಡು || ಕರಿಧ್ರುವ ಬಲಿ ಪಾಂಚಾಲಿ ಅಹಲ್ಯೆಯ ಪೊರೆದವ ನೀನಂತೆ ಅರಿತು ವಿಚಾರಿಸಿ ನೋಡಲದೆಲ್ಲವು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣ ನಿನ್ನ ನಾಮದ

(ರಾಗ ಅಸಾವೇರಿ ಅಟತಾಳ) ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ಬಾಯಿಗೆ ಬರಲಿ, ಬಾ ರಂಗ ||ಪ|| ಆಡುವಾಗ ನಲಿದಾಡುವಾಗಲಿ ನೋಡುತ ನಿಂದು ಮಾತಾಡುವಾಗ ಕೇಡುತನದಿಂದ ಕೂಡಿ ಈ ಭವದೊಳು ಮಾಡಿದ ಪಾಪವು ಓಡಿ ಹೋಗುವ ಹಾಗೆ || ಉರಿ ಬಂದಾಗಲಿ ಛಳಿ ಬಂದಾಗಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿನಾಮ ಕೀರ್ತನೆ ಅನುದಿನ

(ರಾಗ ಧನಶ್ರೀ. ಆದಿತಾಳ ) ಹರಿನಾಮ ಕೀರ್ತನೆ ಅನುದಿನ ಮಾಳ್ಪಗೆ ನರಕ ಭಯಗಳುಂಟೆ ||ಪ|| ಹರಿನಾಮವೊಂದೆ ಯಮನಾಳ್ಗಳನೊದೆದು ಅಜಮಿಳನಿಗೆ ಸುಕ್ಷೇಮವಿತ್ತ ಹರಿ ||ಅ|| ಕೇಸರಿಗಂಜದ ಮೃಗವುಂಟೆ ದಿನೇಶನಿಗಂಜದ ತಮವುಂಟೆ ವಾಸುದೇವ ವೈಕುಂಠ ಜಗನ್ಮಯ ಕೇಶವ ಕೃಷ್ಣಾ ಎಂದುಚ್ಚರಿಸುತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿತ್ಯವಲ್ಲ ಅನಿತ್ಯ ದೇಹವಿದಣ್ಣ

(ರಾಗ ಕಾಂಭೋಜ. ಛಾಪು ತಾಳ ) ನಿತ್ಯವಲ್ಲ ಅನಿತ್ಯ ದೇಹವಿದಣ್ಣ ||ಪ|| ಮತ್ತೆ ಮುರಾರಿ ಕೃಷ್ಣನ ನೆನೆಯಲು ಮುಕ್ತಿಗೆ ಸಾಧನವಣ್ಣ ಪ್ರಾಣಿ ||ಅ|| ಮಾನಿನಿಯರ ಕುಚಕೆ ಮರುಳಾಗದಿರು ಮಾಂಸದ ಗಂಟುಗಳಲ್ಲಿ ನಾನಾ ಪರಿಯಲಿ ಮೋಹವ ಪಡದಿರು ಹೀನ ಮೂತ್ರದ ಕುಳಿಯಲ್ಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು