ಕಂಡವರಂತೆ ಎನ್ನನು ನೋಡಲಾಗದು

( ರಾಗ ತೋಡಿ ಛಾಪು ತಾಳ) ಕಂಡವರಂತೆ ಎನ್ನನು ನೋಡಲಾಗದು ಪುಂಡರೀಕದಳನಯನ ಪುರಾಣಪುರುಷೋತ್ತಮನೆ ||ಪ|| ಎಂಭತ್ತನಾಲ್ಕು ಲಕ್ಷಯೋನಿಗಳಿಂದ ಬಂದೆ , ನಾನು ಕುಂಭೀಪಾಕನರಕದೊಳಗೆ ನಿಂದೆ || ಸಂಸಾರಸಾಗರದೊಳು ಸಿಕ್ಕು ಬಳಲಿದೆ , ಬಹು ಹಿಂಸೆ ತಾಳಿದೆ ನೀನೆ ಎನಗೆ ಗತಿಯೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂಗೊಳಿಗೊಶವಿಲ್ಲವೆ ರಂಗನ ನೋಟ

(ರಾಗ ಪೂರ್ವಿ ಅಟತಾಳ) ಕಂಗೊಳಿಗೊಶವಿಲ್ಲವೆ ರಂಗನ ನೋಟ ||ಪ|| ಅಂಗಳದೊಳು ಬೆಳದಿಂಗಳು ತುಂಬಿತು ||ಅ|| ಚಂದನದಿಂದ ಕುಚಂಗಳ ತವಿಸಲು ಇಂದುಕಿರಣ ಬಂದು ಕುಂದಿಸಲು ಮಂದಮಾರುತದಲಿ ನಿಂದಿರಲಾರೆನೆ ಕಂದರ್ಪತಾಪವು ಹೋಹುದೇನೆ ಹೆಣ್ಣೆ || ಬಂಗಾರ ದೇಹಕೆ ಭಾರವಾಗಿಯಿದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಕೋ ಹಾಗಿಹನೆ ಇಕೋ ಹೀಗಿಹನೆ

(ರಾಗ ಹಿಂದೂಸ್ಥಾನಿ ದೇಶಿ ಆದಿತಾಳ ) ಅಕೋ ಹಾಗಿಹನೆ, ಇಕೋ ಹೀಗಿಹನೆ ಪರಬ್ರಹ್ಮ ಹೇಗಿಹನೆಂದರೆ ||ಪ|| ಕಾಲಿಲ್ಲದೆ ನಡೆಸುವ , ಕೈಯಿಲ್ಲದೆ ಹಿಡಿಸುವ ಹಲ್ಲಿಲ್ಲದೆ ತಿನಿಸುವ , ಹೊಟ್ಟಿಲ್ಲದೆ ಉಣಿಸುವ || ಕಣ್ಣಿಲ್ಲದೆ ಕಾಣಿಸುವ , ಕಿವಿಯಿಲ್ಲದೆ ಕೇಳಿಸುವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ

(ರಾಗ ಕಮಾಚ್ ಅಟತಾಳ) ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ ||ಪ|| ಕಂದಾ ಬೇಡವೊ ಮಣ್ಣು ತಿನ್ನಲಿ ಬೇಡವೊ ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ ||ಅ|| ಬೇಗನೆ ಏಳಯ್ಯ , ಮಣ್ಣಾಟ ಬಿಡೊ ನೀನು ಜೋಗಿ ಬರುತಾನಲ್ಲಿ ಅಂಜಿಸುವುದಕೀಗ || ತಾಯಿ ಮಾತನು ಒತ್ತಿ ಕರದಲಿ ಮಣ್ಣೊತ್ತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಲ್ಯಾಣಂ ತುಲಸಿ ಕಲ್ಯಾಣಂ

(ರಾಗ ಸೌರಾಷ್ಟ್ರ , ಆದಿತಾಳ) ಕಲ್ಯಾಣಂ ತುಲಸಿ ಕಲ್ಯಾಣಂ ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಲಸಿಗೆ ಬಲ್ಲಿದ ಶ್ರೀವಾಸುದೇವನಿಗೆ ||ಪ|| ಅಂಗಳದೊಳಗೆಲ್ಲ ತುಲಸಿಯ ವನಮಾಡಿ ಶೃಂಗಾರವ ಮಾಡಿ ಶೀಘ್ರದಿಂದ ಕಂಗಳ ಪಾಪವ ಪರಿಹರಿಸುವ ಮುದ್ದು ರಂಗ ಬಂದಲ್ಲಿ ತಾ ನೆಲೆಸಿದನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಟ್ಟಬೇಕು ಕಾಟದೆಮ್ಮೆ

(ರಾಗ ಆಹೇರಿ ಅಟತಾಳ) ಕಟ್ಟಬೇಕು ಕಾಟದೆಮ್ಮೆ ಅದರ ಹಯನ ಎಷ್ಟಾದರು ಉಣಬೇಕು ||ಪ|| ಹಮ್ಮುಯೆಂಬೋದೆ ಎಮ್ಮೆ , ಗಮ್ಮುಯೆಂಬೋದೆ ಹಗ್ಗ ಹೆಮ್ಮುಯೆಂಬೋದೆ ಅದಕೆ ಧಮ್ಮ ಗುದ್ದಿ ಸುಮ್ಮನ ಮನದಿಂದ ಹಾಲ್ಕರೆದು ಪರ - ಬೊಮ್ಮನಿಗರ್ಪಿಸಬೇಕು ನಿತ್ಯದಿ || ಚಂಡಿತನವೆಂಬ ಹಿಂಡಿ ಇಡಬೇಕು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಂದನೇಕೆ ಮಲಗನೆ

(ರಾಗ ಶಂಕರಾಭರಣ ಅಟತಾಳ) ಕಂದನೇಕೆ ಮಲಗನೆ , ಕೇಳೆಲೆ ಸಖಿ ||ಪ|| ಕಾಯಜಜನಕಗೇನಾಯಿತು ಇವಗೆ ಯಾವಳ ದೃಷ್ಟಿ ತಾಗಿತೆ ||ಅ|| ಕಂದನೇಕೆ ಕಣ್ಣ ಮುಚ್ಚನೆ ಇಂದು ನೀರದಡದಲ್ಲಿರುವನೆ , ಏ- ನೆಂದರು ಮುಖವೆತ್ತಿ ನೋಡನೆ , ಗೋ- ವಿಂದ ಬಾ ಎಂದರೆ ಬಾಯ ತೆರೆವನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು

(ರಾಗ ಭೈರವಿ ಅಟತಾಳ) ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು ನಾಯಿಕುನ್ನಿಗಳಂತೆ ಪರರ ಪೀಡಿಸುತ ||ಪ|| ಉದಯಕಾಲದಲೆದ್ದು ಸಂಧ್ಯಾವಿಧಿಯ ಬಿಟ್ಟು ಪದುಮನಾಭನ ಸ್ಮರಣೆ ಮೊದಲಿಲ್ಲದೆ ಮುದದಿ ನಿನ್ನರ್ಚಿಸದೆ ನರರ ಸದನವ ಪೊಕ್ಕು ಒದಗಿ ಸೇವೆಯ ಮಾಡಿ ಅವರ ಬಾಗಿಲನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೂಸು ಕಂಡೆವಮ್ಮ

(ರಾಗ ಪಂತುವರಾಳಿ , ಅಟತಾಳ) ಕೂಸು ಕಂಡೆವಮ್ಮ , ಅಮ್ಮ ನಿಮ್ಮ ಕೂಸು ಕಂಡೆವಮ್ಮ ||ಪ|| ಕಾಸಿಗೆ ವೀಸವ ಬಡ್ಡಿ ಗಳಿಸಿಕೊಂಡು ಶೇಷಗಿರಿಯ ಮೇಲೆ ವಾಸವಾಗಿದ್ದನೆ || ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು ಕಂಚಿ ಪಟ್ಟಣದಿ ಬಲ್ ಮಿಂಚಾಗಿದ್ದನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೈಮೀರಿ ಹೋದ ಮಾತಿಗೆ

(ರಾಗ ಸೌರಾಷ್ಟ್ರ ಅಟತಾಳ) ಕೈಮೀರಿ ಹೋದ ಮಾತಿಗೆ ಹುಡುಕಾಡಬಾರದು ||ಪ|| ಮಾತು ಕೇಳದ ಮಕ್ಕಳ ಹೆಸರು ತೆಗೆಯಬಾರದು , ತನ್ನ ಪ್ರೀತಿ ಇಲ್ಲದ ಪತಿಯ ಕಂಡು ಹಿಗ್ಗಬಾರದು || ಜಾರತ್ವ ಮಾಡೊ ಪತ್ನಿಯ ಕೂಡಿ ಅಳಬಾರದು ವೈರತ್ವ ಮಾಳ್ಪವರ ಸೊಲ್ಲು ಕೇಳಬಾರದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು