ವಿಷ ಕುಡಿಯುತೇನೆ ನೋಡು

ವಿಷ ಕುಡಿಯುತೇನೆ ನೋಡು

(ರಾಗ ಪಂತುವರಾಳಿ ಆದಿತಾಳ ) ವಿಷ ಕುಡಿಯುತೇನೆ ನೋಡು , ನೋಡು ಗಂಡ ವಿಷ ಕುಡಿಯುತೇನೆ ನೋಡು ||ಪ|| ವಿಷ ಕುಡಿಯುತೇನೆ ಹಸನಾಗಿರು ಹಂಸದಂತೆ ದೇಹವ ಹತಮಾಡುತೇನೆ ||ಅ|| ಕಬ್ಬಿನ ರಸದೊಳಗೆ , ಗಸಗಸೆ ರುಬ್ಬಿಯೆ ನೀ ಬೆರೆಸಿ ಹಬ್ಬು ಜೇನುತುಪ್ಪ , ತಂಪಿಗೆ ಯಾಲಕ್ಕಿಪುಡಿ ಹಾಕಿ ಸಜ್ಜನರೆಲ್ಲ ಕೈಸೇರಿದ ಬಳಿಕ ಹಬ್ಬ ಬಂದಿತೆಂದು ಉಬ್ಬುಬ್ಬಿ ಈಗ || ಕಡಲೆ ಹೂರಣ ಮಾಡಿ , ತೂಕಕ್ಕೆ ಪಡಿಬೆಲ್ಲವನೆ ಬೆರೆಸಿ ಒಡೆದ ಕೊಬ್ಬರಿ ಹಾಕಿ , ಗಡಿಗೆಗೆ ಹಿಡಿ ಹುಲ್ಲನೆ ತುರುಕಿ ಸದಗರದಿಂದಲಿ ಕಡುಬು ಮಾಡಿಕೊಂಡು ನಡುಮನೆಯಲ್ಲಿ ಕುಳಿತು ಹುಡಿಲೇಸ್ ನೋಡು ಗಂಡ || ಸಣ್ಣ ಶಾವಿಗೆ ಸೆಳೆದು , ಸಕ್ಕರೆ ಬೆಣ್ಣೆ ಕಾಸಿಯೇ ಕರಿದು ಕಾಸಿದ ನೊರೆಹಾಲು ಕೂಡಿಸಿ ಅಸೆಯಿಂದಲಿ ಕುಳಿತು ಪುರಂದರವಿಠಲನ ಚರಣವ ನೆನೆಯುತ ಎಂದೆಂದಿಗೂ ಜೀವ ಸತ್ತು ಪುಟ್ಟದಂತೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು