ನೀರೆ ನೀ ಕರೆತಾರೆ ಮಾರಸುಂದರನ
(ರಾಗ ಕೋರೆ ಅಟತಾಳ)
ನೀರೆ ನೀ ಕರೆತಾರೆ ಮಾರಸುಂದರನ
ಮಾರಸುಂದರನ ಸುಕುಮಾರಸುಂದರನ ||ಪ||
ಗೊಲ್ಲರ ಮನೆಯೊಳಗಿದ್ದ ಪಾಲ್ಮೊಸರ
ಮೆಲ್ಲನೆ ಮೆಲ್ಲುವ ವಲ್ಲಭ ಶ್ರೀ ಹರಿಯ ||
ಯಾದವರೆಲ್ಲ ಆದರಿಸಿದನ
ವೇದವೇದಾಂತನ ಯಾದವಪ್ರಿಯನ ||
ವರಗೌರಿಪುರದಲ್ಲಿ ವಾಸವಾಗಿಹನ
ವರದಪುರಂದರವಿಟ್ಠಲರಾಯನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments
ಪಲ್ಲವಿಯಲ್ಲಿ ಈ ಪಾಠಾಂತರವೂ