ನೋಡದಿರು ಪರ ಸ್ತ್ರೀಯರ
(ರಾಗ ಆನಂದಭೈರವಿ ಝಂಪೆತಾಳ )
ನೋಡದಿರು ಪರ ಸ್ತ್ರೀಯರ ||ಪ||
ನೋಡಿದರೆ ಕೇಡಹದು ತಪ್ಪದಿದಕೋ ||ಅ||
ನೋಡಿದರೆ ಸ್ತ್ರೀಹತ್ಯವು, ನುಡಿಸಿ ಮಾತಾಡಿದರೆ ಗೋಹತ್ಯವು
ಕಾಡಿದರೆ ಶಿಶುಹತ್ಯವು ಮೈಗೂಡಿದರೆ ಬ್ರಹ್ಮಹತ್ಯವು ||
ಎರಳೆಗಂಗಳರೊಲುಮೆಗೆ ಮರುಳಾಗಿ ಬರಿದೆ ನೀ ಕೆಡಬೇಡವೋ
ದುರುಳ ಯಮಲೋಕದಲ್ಲಿ ಕರೆದೊಯ್ದು ಉರಿಗಂಬವಪ್ಪಿಸುವರೋ ||
ಮರುಳು ಮಾನವನೆ ಕೇಳೋ ಪರಸತಿಯು ಉರಿಯೆಂದು ನೋಡು ನಿತ್ಯ
ವರದ ಪುರಂದರವಿಠಲನ ನೆನೆದರೆ ಸ್ಥಿರವಾದ ಮುಕುತಿಯಹುದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments